Advertisement
ಕಾರುಗಳ ಮಾರಾಟ ಬೆಲೆಗಳನ್ನು ಆಧರಿಸಿ ಟ್ಯಾಕ್ಸಿ ಸೇವೆಗಳ ಕನಿಷ್ಠ ದರ ಹಾಗೂ ನಂತರದ ಪ್ರತಿ ಕಿ.ಮೀ.ದರವನ್ನು ಸೂಚಿಸಿರುವ ಸರ್ಕಾರ, ಅಧಿಕ ಬೆಲೆಯ ವಾಹನಗಳನ್ನು “ಎ’ ವರ್ಗಕ್ಕೆ ಹಾಗೂ ಕಡಿಮೆ ಬೆಲೆ ವಾಹನಗಳನ್ನು “ಡಿ’ ವರ್ಗಕ್ಕೆ ಸೇರಿಸಿ ಒಟ್ಟು, ನಾಲ್ಕು ವರ್ಗಗಳಲ್ಲಿ (ಎ, ಬಿ, ಸಿ, ಡಿ) ವರ್ಗೀಕರಿಸಿ ದರ ನಿಗದಿಪಡಿಸಿದೆ. ಈ ಪೈಕಿ “ಡಿ’ ವರ್ಗದಲ್ಲಿ ಬರುವ ಟಾಟಾ ಇಂಡಿಕಾ, ಮಾರುತಿ ಅಲ್ಟೊ ಮಾದರಿಯ ಕಾರುಗಳಿಗೆ 4 ಕಿ.ಮೀ.ಗೆ ಕನಿಷ್ಠ 44 ರೂ. ನಿಗದಿಪಡಿಸಲಾಗಿದೆ. ಅಂದರೆ, ಟ್ಯಾಕ್ಸಿಯನ್ನು ಹತ್ತಿ ಇಳಿದರೆ ಪ್ರಯಾಣಿಕರು 44 ರೂ. ತೆರಲೇಬೇಕು. ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ.
ಮ್ಯಾನ್ಯುವಲ್ ಆಗಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ನಗರದಲ್ಲಿ ಖಾಸಗಿ ವಾಹನಗಳಿಗೆ ಕಡಿವಾಣ ಹಾಕಲಿಕ್ಕೂ ಸಾರಿಗೆ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಕೇಂದ್ರದ ನೀತಿ ಆಯೋಗ ಕೂಡ ಈ ದರ ನಿಗದಿ ಪಾಲನೆ ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟಿದೆ.
Related Articles
Advertisement
ಹಿಂದೆ ಪ್ರತಿ ಕಿ.ಮೀ.ಗೆ 5 ಇತ್ತು!: ಈ ಹಿಂದೆ ಪ್ರತಿ ಕಿ.ಮೀ.ಗೆ ಎಸಿ ವ್ಯವಸ್ಥೆ ಇಲ್ಲದ ಕ್ಯಾಬ್‌ನಲ್ಲಿ ಒಂದು ಕಿ.ಮೀ.ಗೆ ಗರಿಷ್ಠ 14.5 ರೂ. ಹಾಗೂ ಎಸಿ ಕ್ಯಾಬ್ ಗಳಲ್ಲಿ ಒಂದು ಕಿ.ಮೀಗೆ ಗರಿಷ್ಠ 19.5 ರೂ. ದರವಿತ್ತು. ಕೆಲವೊಮ್ಮೆ ಗ್ರಾಹಕರು ಕಿ.ಮೀ. ಒಂದಕ್ಕೆ ಕೇವಲ 5 ರೂ. ನೀಡಿ ಪ್ರಯಾಣಿಸುತ್ತಿದ್ದರು.
ಅಂದರೆ, ಈಗ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತಲೂ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಕ್ಯಾಬ್, ಟ್ಯಾಕ್ಸಿ ಸೇವೆ ಲಭ್ಯವಾಗುತ್ತಿತ್ತು. ಇದರಿಂದ ಪ್ರಯಾಣಿಕರಿಗೆ ಲಾಭವಾದರೂ ಓಲಾ ಮತ್ತು ಉಬರ್ ರೀತಿಯ ಅಗ್ರಿಗೇಟರ್‌ಗಳೊಂದಿಗೆ ವಹನ ಜೋಡಣೆ ಮಾಡಿಕೊಂಡ ಚಾಲಕರಿಗೆ ನಷ್ಟವಾಗುತ್ತಿತ್ತು. ಪ್ರಸ್ತುತ ಸರ್ಕಾರದ ಈ ನಿರ್ಧಾರವನ್ನು ಅಗ್ರಿಗೇಟರ್‌ಗಳು ಕೂಡ ಸ್ವಾಗತಿಸಿವೆ. “ಇದೊಂದು ಸ್ವಾಗತಾರ್ಹ ನಿರ್ಧಾರ.
ಇದರಿಂದ ಸಾವಿರಾರು ಚಾಲಕರ ಆದಾಯ ಹೆಚ್ಚಳವಾಗಲಿದೆ. ಆ ಮೂಲಕ ಅವರ ಜೀವನಮಟ್ಟ ಕೂಡ ಸುಧಾರಿಸಲಿದೆ. ಜತೆಗೆ ಗ್ರಾಹಕರಿಗೂ ಅನುಕೂಲವಾಗಲಿದೆ. ಸರ್ಕಾರ ನಿಗದಿಪಡಿಸಿದ ಹೊಸ ದರವನ್ನು ಪಾಲಿಸಲು ನಾವು ಬದ್ಧರಾಗಿದ್ದೇವೆ,’ ಎಂದು ಉಬರ್ ಇಂಡಿಯಾ (ದಕ್ಷಿಣ) ಪ್ರಧಾನ ವ್ಯವಸ್ಥಾಪಕ ಕ್ರಿಸ್ಟಿಯನ್ ಪ್ರೀಸ್ ತಿಳಿಸಿದ್ದಾರೆ.
ಕ್ಯಾಬ್ ಕಂಪನಿಗಳಿಗಿರುವ ಅವಕಾಶ-ನಿರ್ಬಂಧಗಳು ಅಗ್ರಿಗೇಟರ್ ಪ್ರವೇಶ ಶುಲ್ಕ ಅಥವಾ ಟೋಲ್ ಶುಲ್ಕವನ್ನುಪ್ರಯಾಣಿಕರಿಂದ ಪಡೆಯಲು ಅವಕಾಶ ಇರಲಿದೆ ಸಮಯದ ಆಧಾರದಲ್ಲಿ (ಪೀಕ್ ಹವರ್) ದರಗಳನ್ನು ವಿಧಿಸುವಂತಿಲ್ಲ ಮೊದಲ 20 ನಿಮಿಷ ಕಾಯುವಿಕೆ ಶುಲ್ಕ (ವೇಯಿರಿಂಗ್ ಚಾರ್ಜ್) ಇರುವುದಿಲ್ಲ ನಂತರದ ಪ್ರತಿ 15 ನಿಮಿಷಕ್ಕೆ 10 ರೂ. ವೇಯಿರಿಂಗ್ ಚಾರ್ಜ್ ಪಡೆಯಬಹುದು ನಿಗದಿತ ದರದ ಹೊರತು ಅನಧಿಕೃತವಾಗಿ ಯಾವುದೇ ದರ, ಶುಲ್ಕ ಪಡೆಯುವಂತಿಲ್ಲ.