Advertisement

ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಉನ್ನತೀಕರಣ: ಅಹಮದ್‌

10:46 AM Mar 01, 2022 | Team Udayavani |

ಚಿಂಚೋಳಿ: ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹೆಚ್ಚುವರಿ ಸವಲತ್ತುಗಳನ್ನು ನೀಡಲು 22 ಹಾಸಿಗೆವುಳ್ಳ ಐಸಿಯು ಉನ್ನತ್ತೀಕರಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಮಹಮ್ಮದ್‌ ಗಫಾರ ಅಹಮದ್‌ ಹೇಳಿದರು.

Advertisement

ಸರಕಾರಿ ಆಸ್ಪತ್ರೆಯಲ್ಲಿ ಬೆಂಗಳೂರ ಎಕ್ಸಟ್ರಾ ಫಾರ್ಮ ಪ್ರೈವೆಟ್‌ ಲಿಮಿಟೆಡ್‌ ವತಿಯಿಂದ 1.04 ಕೋಟಿ ರೂ. ಗಳಲ್ಲಿ 22 ಹಾಸಿಗೆ ಉನ್ನತ್ತಿಕರಿಸುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸರಕಾರಿ ಆಸ್ಪತ್ರೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸಾಕಷ್ಟು ಸವಲತ್ತುಗಳನ್ನು ಬಡ ರೋಗಿಗಳಿಗೆ ನೀಡಲಾಗುತ್ತಿದೆ. 22 ಹಾಸಿಗೆ ಆಕ್ಸಿಜನ ವ್ಯವಸ್ಥೆ ಸಿಗಲಿದೆ. ಆಸ್ಪತ್ರೆಯಲ್ಲಿ ಸಿಜರಿನ ಹೆರಿಗೆ, ಕುಟುಂಬ ಶಸ್ತ್ರ ಚಿಕಿತ್ಸೆ, ಕೋವಿಡ್‌ ವ್ಯಾಕ್ಸಿನ್‌ ಸಾಧನೆ ಹೆಚ್ಚು ಮಾಡಲಾಗಿದೆ ಎಂದರು.

ತಹಶೀಲ್ದಾರ್‌ ಅಂಜುಂ ತಬಸುಮ ಮಾತನಾಡಿ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕೋವಿಡ್‌, ಆನೆಕಾಲು ರೋಗ, ಪಲ್ಸ್‌ ಪೋಲಿಯೋ ಉತ್ತಮ ಸಾಧನೆ ಮಾಡುತ್ತಿದೆ. ಇಲ್ಲಿನ ವೈದ್ಯರು ಉತ್ತಮ ಸೇವೆ ಮಾಡುತ್ತಿರುವುದರಿಂದ ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಬಡ ರೋಗಿಗಳಿಗೆ ಗುಣಮಟ್ಟ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯದ ಬಗ್ಗೆ ಶ್ಲಾಘನೆ ಮಾಡಿದರು.

ಪುರಸಭೆ ಅಧ್ಯಕ್ಷ ಜಗದೇವಿ ಗಡಂತಿ, ಉಪಾಧ್ಯಕ್ಷ ಶಬ್ಬೀರ್‌ ಅಹೆಮದ್‌, ಆಡಳಿತಾಧಿಕಾರಿ ಮಕ್ಕಳ ತಜ್ಞ ಡಾ| ಸಂತೋಷ ಪಾಟೀಲ, ಡಾ| ಅನೀಲ, ಡಾ| ಫಾತಿಮಾ ಬೇಗಮ, ಡಾ| ಸಂಜಯ ಗೋಳೆ, ಡಾ| ದೀಪಾ ಜಾಧವ್‌, ಮಹಾದೇವಿ ರೊಟ್ಟಿ, ಹಣಮಂತ ಭೋವಿ, ಸತೀಶರೆಡ್ಡಿ, ಕೆಎಚ್‌ಎಸ್‌ಆರ್‌ಡಿಪಿ ತಾಂತ್ರಿಕ ಸಿಬ್ಬಂದಿ, ಎಂಜಿನಿಯರ್‌ ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು. ಡಾ| ಸಂತೋಷ ಪಾಟೀಲ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next