Advertisement

Gangavathi: ಅತಿಥಿ ಉಪನ್ಯಾಸಕರಿಗೆ ಸಂಕಷ್ಟ ತಂದ ಸರ್ಕಾರದ ಆದೇಶ

04:01 PM Jan 10, 2024 | Team Udayavani |

ಗಂಗಾವತಿ: ರಾಜ್ಯದ ಪದವಿ ಮಹಾವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಸರ್ಕಾರದ ಇತ್ತೀಚಿನ ಆದೇಶ ಒಂದು ಸಂಕಷ್ಟಕೀಡು ಮಾಡಿದೆ.

Advertisement

ಕಳೆದ 45 ದಿನಗಳಿಂದ ಸೇವಾ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅತಿಥಿ ಉಪನ್ಯಾಸಕರು ಅನಿರ್ದಿಷ್ಟ ಧರಣಿ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆದಿದ್ದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ಜರುಗಿ ಅತಿಥಿ ಉಪನ್ಯಾಸಕರ ಬಹುತೇಕ ಸಮಸ್ಯೆಗಳನ್ನು ಸರಕಾರ ಈಡೇರಿಸಿದ್ದು, ಇದೀಗ ಜ.6 ರಂದು ಹೊರಡಿಸಿದ ಸರ್ಕಾರಿ ಆದೇಶ ಅತಿಥಿ ಉಪನ್ಯಾಸಕರಿಗೆ ತೊಂದರೆಯುಂಟು ಮಾಡಿದೆ. ಕಾರ್ಯಭಾರ ಮತ್ತು ನೇಮಕದ ಆಧರದಲ್ಲಿ ಅತಿಥಿ ಉಪನ್ಯಾಸಕರಿಗೆ ಗೌರವ ಬಿಡುಗಡೆ ಮಾಡುವಂತೆ ಎರಡು ಆದೇಶಗಳನ್ನು ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶಕರು ಹೊರಡಿಸಿತ್ತು.

ಇದೀಗ ಹೊರಡಿಸಿದ ಆದೇಶದಲ್ಲಿ ಅಕ್ಟೋಬರ್ ತಿಂಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಪಾವತಿ ಮಾಡದೆ ಪ್ರಾಚಾರ್ಯರ ಖಾತೆಯಲ್ಲಿ ಉಳಿದ ಹಣವನ್ನು ಜ. 11ರೊಳಗೆ ಸರ್ಕಾರದ ಖಜಾನೆಗೆ ಮರಳಿಸುವಂತೆ ಆದೇಶ ಮಾಡಲಾಗಿದೆ.

ಅತಿಥಿ ಉಪನ್ಯಾಸಕರು ಅಕ್ಟೋಬರ್ ತಿಂಗಳ ವೇತನ ಗೌರವ ಧನ ಪಡೆಯಲು ಹಿನ್ನಡೆಯಾಗಿದೆ ಅ. 7ರಿಂದ ಬಹುತೇಕ ಅತಿ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗಿ ನಂತರ ರಾಜ್ಯ ಸಂಘದ ಕರೆಯ ಮೇರೆಗೆ ಧರಣಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಕೆಲಸ ಮಾಡಿ ಇದೀಗ ವೇತನವಿಲ್ಲದೆ ಉಳಿಯಬೇಕಾದ ಅನಿವಾರ್ಯತೆ ಬಂದಿದೆ.

Advertisement

ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ಅಕ್ಟೋಬರ್ ತಿಂಗಳ ವೇತನವನ್ನು ನಿಯಮಾನುಸಾರ ಅತಿಥಿ ಉಪನ್ಯಾಸಕರಿಗೆ ಪಾವತಿಸಲು ಆಗ್ರಹ ಕೇಳಿ ಬಂದಿದೆ ಸರಕಾರ ವೇತನ ಪಾವತಿಸಬೇಕು: ಅತಿಥಿ ಉಪನ್ಯಾಸಕರು ಸೇವಾ ಭದ್ರತೆ ಇಲ್ಲದೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಾಠ ಪ್ರವಚನ ಮಾಡುತ್ತಿದ್ದಾರೆ. ಸರಕಾರ ಅಕ್ಟೋಬರಿಂದ ಗೌರವಧನ ಬಿಡುಗಡೆ ಮಾಡುವ ಮೂಲಕ ಅವರ ಕುಟುಂಬಗಳಿಗೆ ನೆರವಾಗಬೇಕು ತಾಂತ್ರಿಕ ತೊಂದರೆಗಳನ್ನ ನೆಪದಲ್ಲಿ ಅಕ್ಟೋಬರ್ ತಿಂಗಳ ವೇತನ ಸರಕಾರ ಮರಳಿ ಪಡೆಯುವ ಆದೇಶ ವಾಪಸ್ ಪಡೆದು ಸಂಬಂಧಪಟ್ಟ ಕಾಲೇಜುಗಳ ಪ್ರಾಚಾರ್ಯರಿಗೆ ವೇತನ ಗೌರವಧನ ಪಾವತಿಸುವಂತೆ ಸೂಚನೆ ನೀಡಬೇಕು.

ಈಗಾಗಲೇ ಸ್ಥಳೀಯ ಶಾಸಕರು ಸಂಬಂಧಪಟ್ಟ ಸಚಿವರಿಗೆ ಈ ಕುರಿತು ಮನವಿ ಮಾಡಲಾಗಿದೆ ಎಂದು ಅತಿಥಿ ಉಪನ್ಯಾಸಕರ ತಾಲೂಕ ಅಧ್ಯಕ್ಷ ಪಂಚಾಕ್ಷರಿ ಹಿರೇಮಠ ಉದಯವಾಣಿಗೆ ತಿಳಿಸಿದ್ದಾರೆ.

ಹಣ ಮರಳಿಸುವಂತೆ ಆದೇಶ : ಅತಿಥಿ ಉಪನ್ಯಾಸಕರ ಅಕ್ಟೋಬರ್ ತಿಂಗಳಿನ ವೇತನ ಪಾವತಿ ಮಾಡದೇ ಇರುವ ಹಣವನ್ನು ವಾಪಸ್ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಮಾಡಿದ್ದಾರೆ. ನಮ್ಮ ಕಾಲೇಜಿನಲ್ಲಿರುವ ಹಣದ ಮಾಹಿತಿಯನ್ನು ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ನೀಡಲಾಗಿದೆ ಎಂದು ಪ್ರಭಾರಿ ಪ್ರಾಚಾರ್ಯ ಡಾ. ಜಾಜಿ ದೇವೇಂದ್ರಪ್ಪ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next