Advertisement
ನಗರದ ಸರಕಾರಿ ಕಚೇರಿಗಳು, ಬೀದಿ ದೀಪಗಳನ್ನು ಎಲ್‌ಇಡಿ ವ್ಯವಸ್ಥೆಗೆ ಪರಿವರ್ತಿ ಸುವುದಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ಲ್ರಾನ್ ರೂಪಿಸಲಾಗಿದ್ದು, ಇನ್ನು 15 ದಿನಗೊಳ ಗಾಗಿ ಎಲ್‌ಇಡಿ ದೀಪ ಅಳವಡಿಕೆ ಕಾರ್ಯ ಪ್ರಾರಂಭಗೊಳ್ಳಲಿದೆ. ಟೆಂಡರ್ ವಹಿಸಿಕೊಂಡ ಸಂಸ್ಥೆ ಇನ್ನೂ ಮೂರು- ನಾಲ್ಕು ದಿನಗಳಲ್ಲಿ ಕಚೇರಿ ಗಳಿಗೆ ತೆರಳಿ ಪರಿಶೀಲನೆ ನಡೆಸಿ, ದೀಪ ಗಳನ್ನು ತರಿಸಿಕೊಂಡು ಕಾಮಗಾರಿ ಆರಂಭಿಸಲಿದೆ. ನಗರದ ಪ್ರಮುಖ ಸರಕಾರಿ ಕಚೇರಿಗಳಾದ ಜಿಲ್ಲಾಧಿಕಾರಿ ಕಚೇರಿ, ಮಿನಿ ವಿಧಾನಸೌಧ ಸಹಿತ ಎಲ್ಲ ಕಚೇರಿಗಳಲ್ಲಿ ಈ ಹಿಂದೆ ಇದ್ದ ದೀಪಗಳನ್ನು ಬದಲಾಯಿಸಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತದೆ. ಹಾಗೆಯೇ ನಗರದ ಎಲ್ಲ ಬೀದಿ ದೀಪಗಳನ್ನು ಎಲ್‌ಇಡಿಗೆ ಪರಿವರ್ತಿಸಲಾಗುತ್ತದೆ.
ನಗರದಲ್ಲಿರುವ ಪ್ರಮುಖ ಸರಕಾರಿ ಕಚೇರಿಗಳಾದ ಪೊಲೀಸ್ ಕಮಿಷನರ್ ಕಚೇರಿ, ಎಸಿಪಿ ಕಚೇರಿ, ಬಂದರ್ ಪೊಲೀಸ್ ಠಾಣೆ, ಪ್ರಧಾನ ಅಂಚೆ ಕಚೇರಿ ಪಾಂಡೇಶ್ವರ, ಮೀನುಗಾರಿಕಾ ಅಭಿವೃದ್ಧಿ ನಿಗಮ, ಅಗ್ನಿಶಾಮಕ ದಳದ ಕಚೇರಿ ಪಾಂಡೇಶ್ವರ, ಟೆಲಿಕಾಂ ಕಚೇರಿ ಪಾಂಡೇಶ್ವರ, ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಪಾಂಡೇಶ್ವರ, ವಾಣಿಜ್ಯ ತೆರಿಗೆ ಕಚೇರಿ ಪಾಂಡೇಶ್ವರ, ಮಿನಿವಿಧಾನ ಸೌಧ, ಲೇಡಿಗೋಷನ್ ಆಸ್ಪತ್ರೆ, ಆರ್‌ಟಿಒ ಕಚೇರಿ, ವೆನ್ಲಾಕ್ ಆಸ್ಪತ್ರೆ, ಪುರಭವನ, ಜಿಲ್ಲಾಧಿಕಾರಿ ಕಚೇರಿ, ಬಿಎಸ್‌ಎನ್‌ಎಲ್ ಟೆಲಿಫೋನ್ ಎಕ್ಸ್‌ಚೇಂಜ್ ಕಟ್ಟಡ, ಮೀನುಗಾರಿಕಾ ಇಲಾಖೆ ಬಂದರ್, ಲೋಕೋಪಯೋಗಿ ಇಲಾಖೆಯ ಉಪ ಕಚೇರಿ, ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ, ಹಳೆ ಬಂದರು ಕಚೇರಿ, ವೆಟ್ವೆಲ್ ಕಾಂಪೌಂಡ್ ಕುದ್ರೋಳಿ, ಅರ್ಬನ್ ಪ್ರೈಮರಿ ಹೆಲ್ತ್ ಸೆಂಟರ್ ಜೆಪ್ಪು, ಐಜಿಪಿ ಕಚೇರಿ, ಅತಿಥಿಗೃಹ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಕಟ್ಟಡಗಳಲ್ಲಿ ಎಲ್‌ಇಡಿ ಬಲ್ಪ್ಗಳನ್ನು ಅಳವಡಿಸಲಾಗುತ್ತದೆ. 60 ವಾರ್ಡ್ ಬೀದಿ ದೀಪಗಳು ಸ್ಮಾರ್ಟ್
ಸರಕಾರಿ ಕಚೇರಿಗಳಲ್ಲಿ ಮಾತ್ರವಲ್ಲದೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 60 ವಾರ್ಡ್‌ಗಳ ಬೀದಿ ದೀಪಗಳನ್ನು ಎಲ್‌ಇಡಿ ದೀಪಗಳಿಗೆ ಪರಿವರ್ತಿಸಲಾಗುತ್ತದೆ. ಇದ ಕ್ಕಾಗಿ ಸರಕಾರಿ, ಖಾಸಗಿ ಸಹಭಾಗಿತ್ವ ದಲ್ಲಿ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಇದರ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮೊದಲ ಹಂತದಲ್ಲಿ ಸರಕಾರಿ ಕಚೇರಿ, ಬೀದಿ ದೀಪಗಳು ಎಲ್‌ಇಡಿ ಅಳ ವಡಿಸಲಾಗುವುದರಿಂದ ಸಾರ್ವ ಜನಿಕರೂ ಪ್ರೇರಿತರಾಗಿ ತಮ್ಮ ಮನೆಗಳಲ್ಲಿ ಬಳಸುವ ಸಾಧ್ಯತೆ ಇದೆ.
Related Articles
Advertisement
1.68 ಕೋಟಿ. ರೂ. ವೆಚ್ಚನಗರದಲ್ಲಿ ಕಾರ್ಯಚರಿಸುತ್ತಿರುವ ಸರಕಾರಿ ಕಚೇರಿಗಳಲ್ಲಿ ಈ ಹಿಂದೆ ಮಾಮೂಲಿ ದೀಪಗಳನ್ನು ಬಳಸಲಾಗುತ್ತಿದ್ದು, ಇದರಿಂದ ಇಂಧನ ಹೆಚ್ಚು ವ್ಯರ್ಥವಾಗುತ್ತಿತ್ತು. ಆ ಕಾರಣಕ್ಕಾಗಿ ಇಂಧನ ಉಳಿತಾಯ ಮಾಡುವ ಉದ್ದೇಶದಿಂದ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 1.68 ಕೋಟಿ ರೂ. ವೆಚ್ಚದಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಆ ಮೂಲಕ ಸರಕಾರಿ ಕಚೇರಿಗಳಿಂದಲೇ ಇಂಧನ ಉಳಿಸುವ ಕೆಲಸ ಆರಂಭವಾಗಲಿದೆ. ಇಂಧನ ಉಳಿತಾಯ ಜಾಗೃತಿ
ಇಂಧನ ಬಳಕೆಯಲ್ಲಿ ಸರಕಾರದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಲ್ಲಿ ಇಂಧನ ಉಳಿಸುವ ಬಗ್ಗೆ ಜಾಗೃತಿ ಮೂಡಿಸಲು ಸರಕಾರಿ ಕಚೇರಿ ಹಾಗೂ ಬೀದಿ ದೀಪಗಳನ್ನು ಎಲ್‌ಇಡಿಗೆ ಪರಿವರ್ತಿಸಲಾಗುತ್ತಿದೆ. ಎಲ್‌ಇಡಿ ದೀಪಗಳು ಇತರ ವಿದ್ಯುತ್ ದೀಪಗಳಿಂದ ಶೇ.40ರಷ್ಟು ಇಂಧನ ಉಳಿಸುತ್ತದೆ.
ನಾರಾಯಣಪ್ಪ,ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರು ••ಪ್ರಜ್ಞಾ ಶೆಟ್ಟಿ