Advertisement

ಕರ್ನಾಟಕ ಸರಕಾರ ಕನ್ನಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ,ಉದ್ಯೋಗ ಮೀಸಲಾತಿ ನೀಡಬೇಕು

09:50 AM Feb 01, 2020 | sudhir |

ಕಾಸರಗೋಡು: ಕಾಸರಗೋಡಿ ನಂತಹ ಗಡಿನಾಡುಗಳಲ್ಲಿ ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿ ನಿಂತು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕರ್ನಾಟಕ ಸರಕಾರ ವಿದ್ಯಾರ್ಥಿ ವೇತನ, ಉದ್ಯೋಗ ಮೀಸಲಾತಿ ಮೊದಲಾದ ಸವಲತ್ತುಗಳನ್ನು ಒದಗಿಸಬೇಕೆಂದು ಹಿರಿಯ ಸಿನೆಮಾ ಪತ್ರಕರ್ತ ಗಣೇಶ್‌ ಕಾಸರಗೋಡು ಹೇಳಿದರು.

Advertisement

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಆಶ್ರಯದಲ್ಲಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ 7ನೇ ಕೇರಳ ರಾಜ್ಯ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವದಲ್ಲಿ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಡಿನಾಡಿನಲ್ಲಿ ಮನೆ ಮಾತಿನ ಭೇದ ವಿಲ್ಲದೆ ಎಲ್ಲ ಕನ್ನಡಿಗ ಜನ ಸಾಮಾನ್ಯರ, ಕನ್ನಡ ವಿದ್ಯಾರ್ಥಿಗಳ ಹಾಗೂ ಕನ್ನಡ ಕಲಿತ ಯುವ ಉದ್ಯೋಗಾರ್ಥಿಗಳ ಭಾಷಿಕ ಸಮಸ್ಯೆಗಳು ಇಂದು ಹಲವಾರಿವೆ. ಕನ್ನಡ ಮಾಧ್ಯಮ ಶಾಲೆಗಳ ಉಳಿವು ಕೂಡ ಮುಖ್ಯ ವಿಷಯವಾಗಿದೆ. ತಳಮಟ್ಟದ ಸಮಸ್ಯೆಗಳ ಪರಿಹಾರದ ಜತೆಗೆ ಸಾಹಿತ್ಯ, ಕಲೆ, ಸಾಂಸ್ಕೃತಿಕ ರಂಗಗಳಿಗೆ ಉತ್ತೇಜನ ಕೂಡ ನೀಡಬೇಕು. ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಅರಿಯದ ಶಿಕ್ಷಕರ ನೇಮಕವನ್ನು ತಡೆಗಟ್ಟುವಂತೆ ಕೇರಳ ಸರಕಾರದ ಮೇಲೆ ಒತ್ತಡ ಹೇರಬೇಕು. ಕೇಂದ್ರ ಸರಕಾರ, ಕೇರಳ ಸರಕಾರ ಮತ್ತು ಕರ್ನಾಟಕ ಸರಕಾರಗಳ ಜತೆಗೆ ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಓರ್ವ ಅಧಿಕಾರಿ, ರಾಯಭಾರಿಯನ್ನು ಕಾಸರಗೋಡಿನಲ್ಲಿ ನೇಮಿಸಬೇಕೆಂದರು.

ತಡೆಗಟ್ಟಬೇಕು
ನಕಲಿ ಕನ್ನಡ ಬಲ್ಲ, ಗಡಿನಾಡ ಕನ್ನಡಿಗ ಪ್ರಮಾಣಪತ್ರಗಳನ್ನು ಬಳಸಿ ಕರ್ನಾಟಕದಲ್ಲಿ ಸವಲತ್ತುಗಳನ್ನು ಪಡೆಯುವುದನ್ನು ತಡೆ ಗಟ್ಟಬೇಕು, ಇದಕ್ಕಾಗಿ ಗಡಿನಾಡಿನಲ್ಲಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಅಥವಾ ಕನ್ನಡವನ್ನು ಒಂದು ವಿಷಯವನ್ನಾಗಿ ಕಲಿತವರಿಗೆ ಮಾತ್ರ ಉನ್ನತ ಶಿಕ್ಷಣದಲ್ಲಿ ಕನ್ನಡ ಬಲ್ಲ, ಗಡಿನಾಡು ಕನ್ನಡಿಗ ಸೀಟುಗಳನ್ನು ನೀಡಬೇಕು. ಅದೇ ರೀತಿ ಕರ್ನಾಟಕದ ಯಾವುದಾದರೂ ಸಂಸ್ಥೆಗಳಿಂದ ಭ್ರಷ್ಟಾಚಾರದ ಮೂಲಕ ನಕಲಿ ಕನ್ನಡ ಬಲ್ಲ ಪ್ರಮಾಣಪತ್ರ ಪಡೆಯುವವರನ್ನು ನಿಯಂತ್ರಿಸಬೇಕೆಂದರು.

ಕಾಸರಗೋಡಿನಲ್ಲಿ ಕೆಲವು ಸಭೆ, ಸಮ್ಮೇಳನಗಳಿಗೆ ಕರ್ನಾಟಕ ಸಂಸ್ಕೃತಿ ಇಲಾಖೆ, ಅಭಿವೃದ್ಧಿ ಪ್ರಾಧಿಕಾರ ಮೊದಲಾದ ಇಲಾಖೆಗಳಿಂದ ನೀಡುತ್ತಿರುವ ಪ್ರೋತ್ಸಾಹ ಸದುಪಯೋಗವಾಗುತ್ತಿದೆಯೇ ಎಂಬ ಬಗ್ಗೆ ನಿಗಾವಹಿಸಬೇಕೆಂದು ಅವರು ಹೇಳಿದರು.

Advertisement

ಶುದ್ಧವಾಗಿ ಹಾಗೂ ವ್ಯಾಕರಣ ಬದ್ಧವಾಗಿ ಮಾತನಾಡಿದರೆ ಕನ್ನಡ ಭಾಷೆ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ. ಭಾಷಾ ಶುದ್ಧತೆಯನ್ನು ಯುವ ತಲೆಮಾರಿಗೆ ಕಲಿಸಿಕೊಡಬೇಕು ಎಂದ ಅವರು ತುಳು ಭಾಷೆಯನ್ನು 8ನೇ ಪರಿಚ್ಛೇದದಲ್ಲಿ ಸೇರ್ಪಡೆಗೆ ಕೇಂದ್ರ ಸರಕಾರಕ್ಕೆ ಒತ್ತಡ ಹಾಕಬೇಕಾಗಿದೆ ಎಂದರು. ಸಾಹಿತಿಗಳು ಇನ್ನೊಬ್ಬರ

ಸಾಮರಸ್ಯ ಬೇಕು
ಪ್ರತಿ ಭಾಷೆಗೂ ತನ್ನದೇ ಆದ ಅಸ್ಮಿತೆಯಿದೆ. ಯಾವ ಭಾಷೆಯೂ ಮೇಲಲ್ಲ. ಕೀಳಲ್ಲ. ಭಾಷೆಗಾಗಿ ಸಂಘರ್ಷ ಬೇಡ. ಸಾಮರಸ್ಯ ಬೇಕು. ಆಗ ಭಾಷೆ ಬೆಳೆಯುತ್ತದೆ. ಕನ್ನಡ ಭಾಷೆಯ ಮಹತ್ವವನ್ನು ಹೊಸ ತಲೆಮಾರಿಗೆ ಹಸ್ತಾಂತರಿಸುವ ಕೆಲಸ ನಡೆಯಬೇಕಾಗಿದೆ ಎಂದು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್‌ ಅವರು ಹೇಳಿದರು.

ಕನ್ನಡ ಕಟ್ಟುವ
ಗಡಿನಾಡು ಕಾಸರಗೋಡು ಕೇರಳದಲ್ಲಿದ್ದರೂ ಒಗ್ಗಟ್ಟಿನಿಂದ ಕನ್ನಡ ಕಟ್ಟುವ ಕೆಲಸವನ್ನು ಮಾಡೋಣ. ಕೇರಳ ಸರಕಾರ ಕನ್ನಡ ಭಾಷೆ, ಸಂಸ್ಕೃತಿಗೆ ನಿರಂತರವಾಗಿ ಕೊಡಲಿಯೇಟು ನೀಡುತ್ತಿದ್ದರೂ ಕನ್ನಡಿಗರ ಹೋರಾಟದಿಂದ ಅವುಗಳನ್ನೆಲ್ಲವನ್ನು ಮೆಟ್ಟಿ ನಿಂತ ಇತಿಹಾಸ ನಮ್ಮದು. ಆದುದರಿಂದ ಕಾಸರಗೋಡಿನಲ್ಲಿ ಇನ್ನೂ ಕನ್ನಡ ಜೀವಂತ ಉಳಿಸಿಕೊಳ್ಳಲು ಎಲ್ಲ ಹೋರಾಟಗಳಿಗೆ ಸಿದ್ಧ.
– ರವೀಶ ತಂತ್ರಿ ಕುಂಟಾರು

Advertisement

Udayavani is now on Telegram. Click here to join our channel and stay updated with the latest news.

Next