Advertisement

ಆಸ್ಟ್ರೇಲಿಯಾದಲ್ಲಿ “ದಂಡ’ವೇ ಅಸ್ತ್ರ !

01:58 AM Apr 21, 2020 | Sriram |

ಮಂಗಳೂರು: ಕೋವಿಡ್-19 ನಿಗ್ರಹಕ್ಕೆ ಸಾಮಾಜಿಕ ಅಂತರವೇ ಬಹುಮುಖ್ಯ ಔಷಧ. ಆಸ್ಟ್ರೇಲಿಯಾದಲ್ಲಿ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದರೆ ನಾವು ವೈಯಕ್ತಿಕವಾಗಿ 1,652 ಡಾಲರ್‌ ದಂಡ ಪಾವತಿಸಬೇಕು. ಯಾವುದೇ ಸಂಸ್ಥೆ, ಅಂಗಡಿ ನಿಯಮ ಉಲ್ಲಂಘಿಸಿದರೆ 9,900 ಡಾಲರ್‌ ದಂಡ ಪಾವತಿಸಬೇಕು. ಆದ್ದರಿಂದ ಇಲ್ಲಿ ಸಾಮಾಜಿಕ ಅಂತರ ಸರಿಯಾಗಿ ಪಾಲನೆಯಾಗುತ್ತಿದೆ.

Advertisement

ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ 10 ವರ್ಷಗಳಿಂದ ನೆಲೆಸಿರುವ ಮಂಗಳೂರು ಮೂಲದ ರೋಹನ್‌ ಸಲ್ಡಾನ್ಹ ಅವರು ದೂರವಾಣಿ ಮೂಲಕ “ಉದಯವಾಣಿ’ ಜತೆಗೆ ಮಾತನಾಡಿದರು.

ಸರಕಾರದಿಂದ ವೇತನ
ರೋಹನ್‌ ಪ್ರಕಾರ ಆಸ್ಟ್ರೇಲಿಯಾ ಸರಕಾರ ಜನರ ಆರೋಗ್ಯದ ಬಗ್ಗೆ ವಿಶೇಷ ಆದ್ಯತೆ ನೀಡುತ್ತಿದ್ದು, ಕೋವಿಡ್-19 ವಿರುದ್ಧ ಸೂಕ್ತ ರೀತಿ ಕಾರ್ಯಾಚರಿಸುತ್ತಿದೆ. ಅದಕ್ಕಾಗಿ “ಜಾಬ್‌ ಕೀಪರ್‌ ಪೇಮೆಂಟ್‌’ ಎಂಬ ಸ್ಕೀಂ ಆರಂಭಿಸಿದೆ. ನೋಂದಾಯಿತ ಕಂಪೆನಿಗಳು ಬಂದ್‌ ಆಗಿರುವ ಕಾರಣ ಕೆಲಸ ಇಲ್ಲದವರ ಖಾತೆಗೆ ಎರಡು ವಾರಕ್ಕೊಮ್ಮೆ 1,500 ಡಾಲರ್‌ ಜಮೆ ಮಾಡಲಾಗುತ್ತಿದೆ. ಈ ಮೂಲಕ ಜನರು ಮನೆಯಲ್ಲಿ ಇರುವಂತೆ ಸರಕಾರ ವಿಶೇಷ ಪ್ರೋತ್ಸಾಹ ನೀಡಿದೆ’.

ರೈಲು, ಬಸ್‌ ಸಂಚಾರ
ಅನ್ಯ ದೇಶಗಳಲ್ಲಿ ಲಾಕ್‌ಡೌನ್‌ ಎಂದು ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತವಾಗಿದ್ದರೆ ಇಲ್ಲಿ ಮಾತ್ರ ಸಂಚಾರ ಮಾಮೂಲಾಗಿದೆ. ಆದರೆ ಕಂಪೆನಿ, ಕೈಗಾರಿಕೆಗಳು ಬಂದ್‌ ಆಗಿರುವ ಕಾರಣ ಪ್ರಯಾಣಿಕರ ಸಂಖ್ಯೆ ವಿರಳವಾ ಗಿದೆ. ದಿನಸಿ ಅಂಗಡಿಗಳು, ಶಾಪಿಂಗ್‌ ಸೆಂಟರ್‌ಗಳು ತೆರೆದಿವೆ.

ಆನ್‌ಲೈನ್‌ನಲ್ಲೇ ಶಿಕ್ಷಣ
ಫೆಬ್ರವರಿಯಿಂದ ನವೆಂಬರ್‌ ವರೆಗೆ 4 ಹಂತಗಳಲ್ಲಿ ಶಾಲಾ ಕಾಲೇಜು ಇರುತ್ತದೆ. ಪ್ರತಿ ಹಂತದ ನಡುವೆ 2 ವಾರ ರಜೆ ಇರುತ್ತದೆ. ಹೆಚ್ಚಿನ ಮನೆಗಳಲ್ಲಿ ಹೆತ್ತವರಿಬ್ಬರೂ ಉದ್ಯೋಗಿಗಳಾಗಿರುವ ಕಾರಣ ಆರಂಭದಲ್ಲಿ ಮಕ್ಕಳಿಗೆ ರಜೆ ನೀಡಿರಲಿಲ್ಲ. ಆದರೆ ಇತ್ತೀಚೆಗೆ ರಜೆ ನೀಡಿದ್ದು, ಆನ್‌ಲೈನ್‌ ಮೂಲಕ ಶಿಕ್ಷಣ ಮುಂದುವರಿದಿದೆ.

Advertisement

ಮನೆ ಬದಲು ಹೊಟೇಲ್‌ನಲ್ಲೇ ಕ್ವಾರಂಟೈನ್‌!
“ಹೋಂ ಕ್ವಾರಂಟೈನ್‌ ನಿಯಮ ಆಸ್ಟ್ರೇಲಿಯಾದಲ್ಲಿ ಜಾರಿಯಲ್ಲಿತ್ತು. ಆದರೆ ಬಹುತೇಕರು ಪಾಲನೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ವಿದೇಶದಿಂದ ಬಂದವರಿಗೆ ಹೊಟೇಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗುತ್ತಿದೆ. ಸದ್ಯ ಹೊಟೇಲ್‌ಗ‌ಳು ಬಂದ್‌ ಆಗಿರುವ ಕಾರಣ ಹೊಟೇಲ್‌ಗ‌ಳನ್ನೇ ಕ್ವಾರಂಟೈನ್‌ ಕೇಂದ್ರಗಳಾಗಿ ಸರಕಾರ ಬಳಕೆ ಮಾಡುತ್ತಿದೆ. ಸರಕಾರವೇ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದೆ’ ಎನ್ನುತ್ತಾರೆ ರೋಹನ್‌.

ಸರಕಾರ ಸ್ಪಂದನೆ
ಕರ್ನಾಟಕ ಕರಾವಳಿಯ ಹಲವರು ಆಸ್ಟ್ರೇಲಿಯಾದಲ್ಲಿದ್ದಾರೆ. ಎಲ್ಲರಿಗೂ ಇಲ್ಲಿನ ಸರಕಾರ ಸೂಕ್ತವಾಗಿ ಸ್ಪಂದಿಸಿದೆ. ಸರಕಾರದ ಸೂಚನೆಗಳನ್ನು ನಾಗರಿಕರು ಚಾಚೂ ತಪ್ಪದೆ ಪಾಲಿಸುತ್ತಾರೆ.
– ರೋಹನ್‌ ಸಲ್ಡಾನ್ಹ , ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next