Advertisement

ಸರಕಾರ, ಕೋರ್ಟ್‌ ತೀರ್ಮಾನ ಸಲ್ಲದು: ಪೇಜಾವರ ಶ್ರೀ

12:30 AM Jan 05, 2019 | |

ಉಡುಪಿ: ಶಬರಿಮಲೆಗೆ ಮಹಿಳೆಯ ಪ್ರವೇಶ ಧಾರ್ಮಿಕ ಮತ್ತು ಸಂಪ್ರದಾಯಕ್ಕೆ ಸಂಬಂಧಿಸಿದ ವಿಚಾರ. ಈ ಬಗ್ಗೆ ಸರಕಾರವಾಗಲಿ ನ್ಯಾಯಾಲಯವಾಗಲಿ ತೀರ್ಮಾನ ತೆಗೆದುಕೊಳ್ಳಬಾರದು. ಹಿಂದೂ ಜನತೆ, ಹಿಂದೂ ಧಾರ್ಮಿಕ ಮುಖಂಡರೇ ತೀರ್ಮಾನಿಸಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Advertisement

“ಶಬರಿಮಲೆ ವಿಚಾರದಲ್ಲಿ ನಾನು ತಟಸ್ಥ ನಿಲುವು ಹೊಂದಿದ್ದೇನೆ’ ಎಂದು ಸ್ಪಷ್ಟಪಡಿಸಿದರು. “ಸಂಪ್ರದಾಯ ಪ್ರಕಾರ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಲು ಅವಕಾಶವಿಲ್ಲ. ಆದರೆ ಶಾಸ್ತ್ರದ ವಿರೋಧವಿಲ್ಲ. ಈ ಬಗ್ಗೆ ನನಗೆ ದ್ವಂದ್ವವಿದೆ. ಹಾಗಾಗಿ ನಾನು ತಟಸ್ಥನಾಗಿರುತ್ತೇನೆ’ ಎಂದರು.

ಸಂಪ್ರದಾಯ-ಪರಿವರ್ತನೆಗೆ ಬೆಂಬಲ
ನಾನು ಹಲವು ವಿಚಾರಗಳಲ್ಲಿ ಸಂಪ್ರದಾಯವನ್ನು ಒಪ್ಪಿದ್ದೇನೆ. ಇನ್ನು ಕೆಲವು ಸಂದರ್ಭಗಳಲ್ಲಿ ಪರಿವರ್ತನೆಯನ್ನು ಕೂಡ ಒಪ್ಪಿದ್ದೇನೆ. ದಲಿತರ ಕೇರಿಗೆ ಹೋಗುವುದು, ಮಡೆಸ್ನಾನ ನಿಲ್ಲಿಸುವುದು ಮೊದಲಾದವುಗಳಿಗೆ ಒಪ್ಪಿದ್ದೇನೆ. ಇನ್ನು ಕೆಲವು ಸಂಪ್ರದಾಯ ನಡೆಯುವುದಕ್ಕೂ ಒಪ್ಪಿಕೊಂಡಿದ್ದೇನೆ ಎಂದರು. 

ಭಾವನೆಗಳಿಗೆ ಬೆಲೆ ಕೊಡಿ 
ಶಬರಿಮಲೆಯಲ್ಲಿ ಋತುಮತಿಯಾಗುವ ವಯಸ್ಸಿನ ಮಹಿಳೆಯರನ್ನು ಹೊರತುಪಡಿಸಿ ಇತರ ಎಲ್ಲ ಮಹಿಳೆಯರ ಪ್ರವೇಶಕ್ಕೂ ಅವಕಾಶ ಹಿಂದಿನಿಂದಲೂ ಇದೆ. ಕೇರಳದ ಕಮ್ಯುನಿಸ್ಟ್‌ ಸರಕಾರ ಜನತೆಯ ಭಾವನೆಗಳಿಗೆ ಬೆಲೆ ಕೊಡಬೇಕು. ಹಟ ಸರಿಯಲ್ಲ. ಸುಪ್ರೀಂ ಕೋರ್ಟ್‌ ತೀರ್ಪಿದ್ದರೂ ಜನಾಭಿಪ್ರಾಯಕ್ಕೆ ಮನ್ನಣೆ ನೀಡಲಿ. ಜನಮತ ಗಣನೆ, ಹಿಂದೂ ಧಾರ್ಮಿಕ ಮುಖಂಡರ ಸಭೆ ಕರೆಯಲಿ ಇಲ್ಲವೇ ಇದೇ ವಿಚಾರದ ಮೇಲೆ ಚುನಾವಣೆ ನಡೆಸಲಿ ಎಂದು ತಿಳಿಸಿದರು.

ತಲಾಖ್‌ – ಅವಮಾನ
“ತಲಾಖ್‌ ನಿಷೇಧದ ವಿಚಾರ ಬಂದಾಗ ಸಂಪ್ರದಾಯದ ಬಗ್ಗೆ ಯಾಕೆ ಮಾತನಾಡಿಲ್ಲ ಎಂಬ ಪ್ರಶ್ನೆಗೆ ಯಾರೂ ಈ ಬಗ್ಗೆ ನನ್ನಲ್ಲಿ ಕೇಳಿಲ್ಲ. ತಲಾಖ್‌ ಕೂಡ ಅಸ್ಪೃಶ್ಯತೆಯಂತೆ ಅವಮಾನ ಎಂದು ಶ್ರೀಗಳು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next