Advertisement

ಕ್ರಿಪ್ಟೋ ಮೇಲೆ ಸೆಬಿ ನಿಯಂತ್ರಣ: ಕೇಂದ್ರ ಸರ್ಕಾರದಿಂದ ಚಿಂತನೆ

10:45 PM Dec 07, 2021 | Team Udayavani |

ನವದೆಹಲಿ: ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧ ಹೇರುವುದಿಲ್ಲ ಎಂದಿರುವ ಕೇಂದ್ರ ಸರ್ಕಾರ, ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್ ಇಂಡಿಯಾ (ಸೆಬಿ) ವ್ಯಾಪ್ತಿಗೆ ಅದನ್ನು ತರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಷ್ಕರಣೆಗೊಂಡಿರುವ ಕ್ರಿಪ್ಟೋ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

Advertisement

ಆ ವಿಧೇಯಕವನ್ನು ಬುಧವಾರದ ಕೇಂದ್ರ ಸಂಪುಟ ಸಭೆಯಲ್ಲಿ ಅಂಗೀಕರಿಸುವ ಸಾಧ್ಯತೆ ಇದೆ. ಜತೆಗೆ, ಸದ್ಯ ನಡೆಯುತ್ತಿರುವ ಚಳಿಗಾಲದ ಸಂಸತ್‌ ಅಧಿವೇಶನದಲ್ಲೇ ಇದನ್ನು ಮಂಡಿಸಿ ಒಪ್ಪಿಗೆ ಪಡೆಯುವ ಸಾಧ್ಯತೆಗಳಿವೆ.

ಹೊಸ ಮಸೂದೆಯಂತೆ ಕ್ರಿಪ್ಟೋ ಬಳಕೆದಾರರು ತಮ್ಮ ಆಸ್ತಿಯನ್ನು ಘೋಷಿಸಲು ನಿಗದಿತ ಸಮಯವನ್ನು ನೀಡಲಾಗುತ್ತದೆ. ಅಲ್ಲದೆ, ಇದು ಖಾಸಗಿ ವ್ಯವಹಾರ ಎಂದು ಹೇಳುವಂತಿಲ್ಲ ಎಂದೂ ಉಲ್ಲೇಖೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕ್ರಿಪ್ಟೋಕರೆನ್ಸಿ ಎಂಬ ಪದದ ಬದಲಾಗಿ, ಕ್ರಿಪ್ಟೋಅಸೆಟ್‌ ಎಂದು ಕರೆಯುವ ಸಾಧ್ಯತೆ ಇದೆ. ಅಲ್ಲದೆ, ಆರ್‌ಬಿಐನ ಕನಸಿನ ಡಿಜಿಟಲ್‌ ಕರೆನ್ಸಿ ಬಗ್ಗೆ ಈ ಮಸೂದೆಯಲ್ಲೇ ಯಾವುದೇ ಉಲ್ಲೇಖವಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಛಾಯಾಗ್ರಾಹಕ ಸೆರೆಹಿಡಿದ ಸೂರ್ಯನ ಚಿತ್ರಕ್ಕೆ ಬರೀ 3, 771 ರೂ.!

Advertisement

ಈ ಮಧ್ಯೆ, ದೇಶದಲ್ಲಿ ಕ್ರಿಪ್ಟೋ ಕರೆನ್ಸಿಯನ್ನು ಪಾವತಿಯ ವಿಧಾನವಾಗಿ ಬಳಕೆ ಮಾಡುವಂತಿಲ್ಲ ಎಂಬುದು ಮಸೂದೆಯಲ್ಲಿ ಪ್ರಸ್ತಾಪಿತವಾಗಿದೆ. ಇದನ್ನು ಉಲ್ಲಂ ಸಿದರೆ, ವಾರೆಂಟ್‌ ಇಲ್ಲದೇ ಮತ್ತು ಜಾಮೀನು ಇಲ್ಲದ ಆರೋಪದಡಿ ಬಂಧಿಸಬಹುದಾಗಿದೆ. ಜತೆಗೆ 20 ಕೋಟಿ ರೂ.ಗಳ ವರೆಗೆ ದಂಡವನ್ನೂ ವಿಧಿಸಬಹುದಾಗಿದೆ. ಅಲ್ಲದೆ ಕೆವೈಸಿ ಅಧಿಕಾರವನ್ನು ಆರ್‌ಬಿಐ, ಸೆಬಿ ಮತ್ತು ಆದಾಯ ತೆರಿಗೆ ಇಲಾಖೆಗೆ ನೀಡುವ ಸಾಧ್ಯತೆ ಇದೆ. ಇವರು ಹೂಡಿಕೆದಾರರ ಎಲ್ಲಾ ಮಾಹಿತಿ ಪಡೆದು ಕೆವೈಸಿ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next