Advertisement

ಸರ್ಕಾರಿ ಭೂ ಒತ್ತುವರಿ ತೆರವಿಗಾಗಿ ಪ್ರತಿಭಟನೆ

03:40 PM Dec 04, 2019 | Team Udayavani |

ಮುಳಬಾಗಿಲು: ಗೋಮಾಳ ಒತ್ತುವರಿ ತೆರವು, ಸರ್ಕಾರಿ ಜಮೀನಿಗೆ ಕಾಂಪೌಂಡು ನಿರ್ಮಾಣ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿದರು.

Advertisement

ಈ ವೇಳೆ ಮಾತನಾಡಿದ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ, ಮಾರುಕಟ್ಟೆಗೆ, ಸಮುದಾಯ ಭವನಕ್ಕೆ, ಮತ್ತಿತರ ಸಾರ್ವಜನಿಕ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಲು ಅಧಿಕಾರಿಗಳು ಮೀನಮೇಷ ಎಣಿಸುತ್ತಾರೆ. ಆದರೆ, ದುಗ್ಗಸಂದ್ರ ಹೋಬಳಿ ಸರ್ವೆ ನಂ. 222ರಲ್ಲಿ ಸಮಾಜಸೇವಕನೆಂದು 100 ಎಕರೆಗೂ ಹೆಚ್ಚು ಗೋಮಾಳ ಒತ್ತುವರಿ ಮಾಡಿಕೊಂಡಿದ್ದಾನೆ ಎಂದು ದೂರಿದರು.

ನಗರದ ಹೃದಯ ಭಾಗದ ಅಜಯ್‌ ಎಂಬ ವ್ಯಕ್ತಿಯು ರಸ್ತೆಯ ಪಕ್ಕದ ಸರ್ಕಾರಿ ಜಮೀನು ಹಾಗೂ ನಲ್ಲೂರು ಗ್ರಾಮದ ಸರ್ವೆ ನಂ.137ರಲ್ಲಿ 8 ಜನರಿಗೆ ಅಕ್ರಮವೆಸಗಿರುವ ಜೊತೆಗೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಸಾವಿರಾರು ಎಕರೆ ಜಮೀನಿಗೆ ಅಕ್ರಮ ದಾಖಲೆ ಸೃಷ್ಟಿ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಪಾರುಕ್‌ ಪಾಷ ಮಾತನಾಡಿ, ವಾರದೊಳಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಸರ್ಕಾರಿ ಜಮೀನಿಗೆ ಕಾಂಪೌಂಡ್‌ ನಿರ್ಮಿಸಬೇಕು, ಅಕ್ರಮ ಸಾಗುವಳಿ ಚೀಟಿ ನೀಡಬೇಕು, ತಾಲೂಕು ಕಚೇರಿಯಲ್ಲಿ ನಡೆದಿರುವ ಭ್ರಷ್ಟಾಚಾರ ಸಿಬಿಐಗೆ ಒಪ್ಪಿಸಬೇಕೆಂದು ತಹಶೀಲ್ದಾರ್‌ ರಾಜಶೇಖರ್‌ಗೆ ಮನವಿ ಸಲ್ಲಿಸಿದರು.

ಹಸಿರು ಸೇನೆ ತಾಲೂಕು ಅಧ್ಯಕ್ಷ ಯಲುವಹಳ್ಳಿ ಪ್ರಭಾಕರ್‌, ನಲ್ಲಂಡಹಳ್ಳಿ ಕೇಶವ, ಮಂಜುನಾಥ್‌, ಗಣೇಶ್‌, ರಾಜೇಶ್‌ಕಳಿ, ಪೊಂಬರಹಳ್ಳಿ ನವೀನ್‌, ವೇಣು, ಸಾಗರ್‌, ಅಂಬ್ಲಿಕಲ್‌ ಮಂಜುನಾಥ್‌, ಸುಧಾಕರ್‌, ಶಿವು, ರಾಮಕೃಷ್ಣಪ್ಪ, ನಿರಂಜನ್‌, ಸುಪ್ರಿಂಚಲ, ವಿಜಯ್‌ಪಾಲ್‌, ಜುಬೇರ್‌ಪಾಷ, ಅಣ್ಣೆಹಳ್ಳಿ ನಾಗರಾಜ್‌, ವೆಂಕಟರಾಮಪ್ಪ, ಅಹಮದ್‌ಪಾಷ, ಹೆಬ್ಬಣಿ ಆನಂದರೆಡ್ಡಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next