Advertisement

ಜನರನ್ನು ಸಾಯಿಸುತ್ತಿರುವ ಸರ್ಕಾರ : ಖಂಡ್ರೆ ಕಿಡಿ

09:11 PM Apr 26, 2021 | Team Udayavani |

ಭಾಲ್ಕಿ : ಬೀದರ ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣ ಸತ್ತು ಹೋಗಿದ್ದು, ಮುಗ್ದ ಕೊರೊನಾ ರೋಗಿಗಳು ನರಳಾಡಿ ಸಾಯುತ್ತಿದ್ದರೂ ಸ್ಪಂದಿಸದ ಸ್ಥಿತಿ ಬಂದಿರುವುದು ನಿಜಕ್ಕೂ ದುರ್ದೈವ. ಸರ್ಕಾರ ಸಂವೇದನೆಯನ್ನೇ ಕಳೆದುಕೊಂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಕಿಡಿ ಕಾರಿದರು.

Advertisement

ನೀರಸವಾಗಿ ನಡೆದ ಕೆಡಿಪಿ ಸಭೆ ಬಗ್ಗೆ ಆಕ್ರೋಶ ಹೊರಹಾಕಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯನ್ನು ಕಾಟಾಚಾರಕ್ಕೆ ನಡೆಸಿದಂತಿದೆ. ಜಿಲ್ಲೆಯಲ್ಲಿ ಕಳೆದ 2 ವಾರಗಳಿಂದ ಸರಾಸರಿ ಎಷ್ಟು ಪ್ರಕರಣ ಹೆಚ್ಚಳವಾಗಿದೆ. ದೈನಿಕ ಪ್ರಕರಣಗಳ ಸಂಖ್ಯೆ ಯಾವ ಪ್ರಮಾಣದಲ್ಲಿ ಹಚ್ಚಳವಾಗುತ್ತಿದೆ.

ಮರಣ ದರ ಎಷ್ಟು ಏರಿದೆ. ಈ ಸರಾಸರಿಯಂತೆ ಮುಂದಿನ ದಿನಗಳಲ್ಲಿ ಯಾವ ಪ್ರಮಾಣದಲ್ಲಿ ಪ್ರಕರಣ ಹೆಚ್ಚುತ್ತದೆ. ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳೇನು? ಎಂಬ ಯಾವ ವಿಚಾರವನ್ನೂ ಚರ್ಚಿಸದೇ, ಅನಾವಶ್ಯಕ ವಿಚಾರಗಳ ಬಗ್ಗೆ ಮಾತನಾಡಿ, ಕಾಲಹರಣ ಮಾಡಿ ಸಭೆ ಬರಖಾಸ್ತು ಮಾಡಿದ್ದು ನಿಜಕ್ಕೂ ಆಡಳಿತದ ನಿಷ್ಕ್ರಿàಯತೆಯನ್ನು ಮತ್ತು ಬೇಜವಾಬ್ದಾರಿತನ ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ರಾಜಕೀಯ ಮಾಡುವ ಸಮಯವಲ್ಲ. ಎಲ್ಲರೂ ಒಗ್ಗೂಡಿ ಕೊರೊನಾವನ್ನು ಮಣಿಸಬೇಕಾದ ಸಮಯ. ಆದರೆ ಸರ್ಕಾರದ ಕಾರ್ಯವೈಖರಿ ಎಲ್ಲರೂ ಆಕ್ರೋಶಗೊಳ್ಳುವಂತೆ ಮಾಡುತ್ತಿದೆ. ಹಣ ಇಧ್ದೋರಿಗೆ ಮಾತ್ರ ಚಿಕಿತ್ಸೆ ಸಿಗುತ್ತಿದೆ. ಬಡವರು ಬೀದಿ ಹೆಣವಾಗುತ್ತಿದ್ದಾರೆ.

ಈಗ ಬಹುತೇಕ ಬೀದರ ಜಿಲ್ಲೆಯಲ್ಲಿ ನಿತ್ಯ 10 ರಿಂದ 15 ಮಂದಿ ಸಾವಿಗೀಡಾಗುತ್ತಿದ್ದಾರೆ. ರೆಮ್‌ ಡೆಸಿವಿಯರ್‌ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಅಗತ್ಯ ಇರುವ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಲಭಿಸುತ್ತಿಲ್ಲ. ಹೀಗಾಗಿ ಆಕ್ಸಿಜನ್‌, ಹಾಸಿಗೆ, ವೆಂಟಿಲೇಟರ್‌ ಮತ್ತು ಔಷಧ ಚಿಕಿತ್ಸೆ ಸಿಗದೆ ರೋಗಿಗಳು ಸಾವಿಗೀಡಾಗುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನ ಸೆಳೆದರೂ ಕ್ರಮ ಕೈಗೊಳ್ಳದಿರುವುದು ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿಯೇ ಇಲ್ಲವೇ ಎಂಬ ಅನುಮಾನ ಹುಟ್ಟಿಸಿದೆ. ತಕ್ಷಣವೇ ಸರ್ಕಾರ ಕಾರ್ಯೋನ್ಮುಖವಾಗಿ ಜಿಲ್ಲೆಯಲ್ಲಿ ಅಕ್ಸಿಜನ್‌ ಹಾಸಿಗೆ ಹೆಚ್ಚಿಸಿ, ಅಕ್ಸಿಜನ್‌ ಕೊರತೆ ನೀಗಿಸದಿದ್ದರೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕೋವಿಡ್‌ ಚಿಕಿತ್ಸಾ ಕೆಂದ್ರ ತೆರೆಯದಿದ್ದರೆ ನಿತ್ಯ 40ರಿಂದ 50 ಜನ ಸಾವಿಗೀಡಾಗುವ ಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೂಡಲೇ ಸರ್ಕಾರ ಬಡ ಕೊರೊನಾ ರೋಗಿಗಳ ಜೀವ ರಕ್ಷಣೆಗೆ ಮುಂದಾಗಬೇಕು. ಅಗತ್ಯ ಔಷಧ್ಯ, ಹಾಸಿಗೆ, ಆಕ್ಸಿಜನ್‌, ರೆಮ್‌ಡೆಸಿವಿಯರ್‌ ಇತ್ಯಾದಿ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಈ ಎಲ್ಲಾ ರೋಗಿಗಳ ಸಾವಿಗೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next