ದೋಟಿಹಾಳ: ಗ್ರಾಮಸ್ಥರ ಸಂಗ್ರಹಿಸಿದ ಅಕ್ಕಿಯಿಂದ ಸರಕಾರಿ ಶಾಲೆ ನಡೆಯುತ್ತದೆ. ಮಧ್ಯಾಹ್ನದ ಬಿಸಿಯೂಟಕ್ಕೆ ಶಾಲೆಯಲ್ಲಿ ಅಕ್ಕಿ ಇಲ್ಲ. ಈ ಶಾಲಾ ಮಕ್ಕಳಿಗೆ ಇದುವರೆಗೂ ಹಾಲು, ಮೊಟ್ಟೆಗಳನ್ನು ನೀಡಿಲ್ಲ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ.ಬೆಂಚಮಟ್ಟಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳ ಸ್ಥಿತಿ. ಈ ಶಾಲೆಯಲ್ಲಿ ಒಟ್ಟು 19 ಮಕ್ಕಳು ಇದು. 1ರಿಂದ 5 ನೆ ತರಗತಿಯವರೆಗೆ ಇದೆ.
ಸರಕಾರ ಶಾಲಾ ಮಕ್ಕಳ ಬಿಸಿಯೂಟಕ್ಕೆ ಆಹಾರ ಪದಾರ್ಥಗಳನ್ನು ನೀಡುತ್ತದೆ. ಆದರೆ ಕಳೆದ ಒಂದು ತಿಂಗಳಿನಿಂದ ಶಾಲೆಯಲ್ಲಿ ಮುಖ್ಯ ಶಿಕ್ಷಕ ಬಾರದೆ ಇರುವುದರಿಂದ ಮಕ್ಕಳಿಗೆ ಬಿಸಿಯೂಟದ ಅಡುಗೆ ಮಾಡಲು ಅಕ್ಕಿ ಇಲ್ಲದ ಕಾರಣ ಗ್ರಾಮಸ್ಥರ ತಮ್ಮ ತಮ್ಮ ಮನೆಗಳಿನಿಂದ ಅಕ್ಕಿ ನೀಡಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದಾರೆ. ಇಷ್ಟೇ ಅಲ್ಲ ಈ ಶಾಲಾ ಮಕ್ಕಳಿಗೆ ಹಾಲು, ಮೊಟ್ಟೆ ಇದುವರೆಗೂ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಪ್ರಜ್ವಲ್ ಮಾತನಾಡಿ ನಮ್ಮ ಶಾಲೆಯಲ್ಲಿ ನಮಗೆ ಹಾಲು ಮೊಟ್ಟೆ ನೀಡುತ್ತಿಲ್ಲ ಎಂದು ಹೇಳಿದನು. ಮಕ್ಕಳ ಪೊಷ್ಟಿಕ ಬೆಳವಣಿಗೆ ಸಹಕಾರಿಯಾಗಲೆಂದು ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿ ಊಟದ ಜೊತೆಗೆ ಮೊಟ್ಟೆ ನೀಡಬೇಕೆಂದು ಸರಕಾರ ಆದೇಶ ಮಾಡಿದೆ. ಕಾರಣ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(NFHS)ಯ ಬಹುತೇಕ ಮಕ್ಕಳು ಆಯಾ ಪ್ರಾಯಕ್ಕೆ ಸರಿಯಾದ ಉದ್ದ ಮತ್ತು ತೂಕ ಹೊಂದಿರುವುದಿಲ್ಲ. ಮಕ್ಕಳ ವಯಸ್ಸಿಗಿಂತ ಶೇಕಡಾ 35.4ರಷ್ಟು ಮಕ್ಕಳು ಕಡಿಮೆ ಎತ್ತರ ಮತ್ತು ಶೇಕಡಾ 32.9ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿರುತ್ತಾರೆ. ಬಡವರು, ದುರ್ಬಲ ವರ್ಗದ ಸಮುದಾಯದ ಪೋಷಕರ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು. ಕೊರೋನಾ ಲಾಕ್ ಡೌನ್ ಸಮಯದಲ್ಲಿ ಪೋಷಕರ ಆರ್ಥಿಕ ಸಮಸ್ಯೆಯಿಂದ ಮಕ್ಕಳ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಉಂಟುಮಾಡಿರಬಹುದು, ಹೀಗಾಗಿ ಮಕ್ಕಳ ದೇಹಕ್ಕೆ ಉತ್ತಮ ಪೋಷಕಾಂಶ ಸಿಗಲು ಮೊಟ್ಟೆ ನೀಡಬೇಕೆಂದು ಸರಕಾರ ಆದೇಶ ಮಾಡಿದೆ. ಆದರೆ ಈ ಶಾಲಾ ಮಕ್ಕಳಿಗೆ ಹಾಲು, ಮೊಟ್ಟೆ ಇದುವರೆಗೂ ಸಿಗುತ್ತಲ್ಲ.
ಇದರ ಬಗ್ಗೆ ತಾಲೂಕ ಅಕ್ಷರದಾಸೋಹಧಿಕಾರಿ ಕೆ. ಶರಣಪ್ಪ ಅವರನ್ನು ವಿಚಾರಿಸಿದಾಗ, ಕೂಡಲೇ ಶಾಲೆಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಒಂದೆರಡು ದಿನದಲ್ಲಿ ಮಕ್ಕಳಿಗೆ ಹಾಲು, ಮೊಟ್ಟೆ ನೀಡಲು ಕ್ರಮಕೈಗೊಳ್ಳತ್ತೇನೆ ಎಂದು ತಿಳಿದರು.
ಸಾಮಾನ್ಯವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ನೀಡಲು ಸರಕಾರ ಅಕ್ಕಿ ಬೇಳೆ ಎಣ್ಣೆ ಪದಾರ್ಥಗಳ ನೀಡುತ್ತದೆ ಆದರೆ ಶಾಲೆ ಮಕ್ಕಳಿಗೆ ಅಕ್ಕಿ ಇಲ್ಲದ ಕಾರಣ ಮಧ್ಯಾಹ್ನದ ಬಿಸಿ ಊಟ ನಿಲ್ಲಬಾರದೆಂದು ಗ್ರಾಮಸ್ಥರು ತಮ್ಮ ತಮ್ಮ ಮನೆಗಳಿಂದ ಸುಮಾರು 40 ಕೆಜಿ ಅಕ್ಕಿಯನ್ನು ಸಾಲವಾಗಿ ಪಡೆದುಕೊಂಡು ಬಿಸಿಊಟ ನಡೆಸಿದ್ದಾರೆ.
ನಮ್ಮ ಶಾಲಾ ಮಕ್ಕಳಿಗೆ ಹಾಲು, ಮೊಟ್ಟೆ ವಿತರಣೆ ಮಾಡುತ್ತಿಲ್ಲ ಹಾಗೂ ಸರಕಾರಿ ಶಾಲೆ ಶಿಕ್ಷಕರು ಶಾಲೆಗೆ ಸರಿಯಾದ ವೇಳೆಗೆ ಆಗಮಿಸುತ್ತಿಲ್ಲ ಎಸ್.ಡಿ.ಎಮ್.ಸಿ ಅಧ್ಯಕ್ಷ ಬೀರಪ್ಪ ವಾಲಿಕಾರ ಅವರು ಆರೋಪಿಸುತ್ತಿದ್ದಾರೆ.
ಇದರ ಬಗ್ಗೆ ತಾಲೂಕ ಅಕ್ಷರದಾಸೋಹಧಿಕಾರಿ ಕೆ. ಶರಣಪ್ಪ ಅವರನ್ನು ವಿಚಾರಿಸಿದಾಗ, ಕೂಡಲೇ ಶಾಲೆಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಒಂದೆರಡು ದಿನದಲ್ಲಿ ಮಕ್ಕಳಿಗೆ ಹಾಲು, ಮೊಟ್ಟೆ ನೀಡಲು ಕ್ರಮಕೈಗೊಳ್ಳತ್ತೇನೆ ಎಂದು ತಿಳಿದರು.
ವರದಿ: ಮಲ್ಲಿಕಾರ್ಜುನ ಮೆದಿಕೇರಿ