Advertisement

ಓಲಾ, ಉಬರ್‌ ದರಕ್ಕೆ ಅಂಕುಶ: ಕೇಂದ್ರ ಸರಕಾರದಿಂದ ಹೊಸ ನಿಯಮಗಳು ಜಾರಿ

11:49 PM Nov 28, 2020 | mahesh |

ಹೊಸದಿಲ್ಲಿ: ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆ ನೀಡುವ ಓಲಾ, ಉಬರ್‌ ಸಂಸ್ಥೆಗಳ ನಿಯಂತ್ರಣಕ್ಕೆ ಕೇಂದ್ರ ಸರಕಾರ ನಿಯಮಾವಳಿಗಳನ್ನು ಪ್ರಕಟಿಸಿದೆ. ಇದರ ಪ್ರಮುಖ ಲಾಭವೇನೆಂದರೆ ಹೆಚ್ಚಿನ ದರಗಳನ್ನು ಅವುಗಳು ವಿಧಿಸುವಂತಿಲ್ಲ.

Advertisement

ಮೂಲ ದರದ ಒಂದೂವರೆ ಪಟ್ಟು ಮಾತ್ರ ವಿಧಿಸಬಹುದಾಗಿದೆ. ಯಾವುದೇ ಪ್ರಯಾಣವನ್ನು ಚಾಲಕ ಅಥವಾ ಪ್ರಯಾಣಿಕ ರದ್ದು ಮಾಡಿದರೆ ಆ ಪ್ರಯಾಣಕ್ಕೆ ವಿಧಿಸಲಾಗುವ ಶೇ.10­ರಷ್ಟು ಮೊತ್ತ ನೀಡಬೇಕು. ಆದರೆ ಅದು, 100 ರೂ.ಗಳಿಗಿಂತ ಹೆಚ್ಚಾಗುವಂತೆ ಇಲ್ಲ. ಇದರಿಂದಾಗಿ ವಿನಾ ಕಾರಣ ಪ್ರಯಾಣ ರದ್ದು ಮಾಡುವವರಿಗೆ ಎಚ್ಚರಿಕೆಯ ಗಂಟೆಯಾಗಲಿದೆ. ಮತ್ತೂಂದು ಪ್ರಧಾನ ಅಂಶವೆಂದರೆ ಪೀಕ್‌ ಅವರ್‌ನಲ್ಲಿ ಹೆಚ್ಚಿನ ರೀತಿಯಲ್ಲಿ ದರ ವಸೂಲು ಮಾಡುವುದರ ಮೇಲೆ ಕೂಡ ನಿಯಂತ್ರಣ ಹೇರಿದೆ. ಹೀಗಾಗಿ ಮೂಲದ ದರದ ಒಂದೂವರೆ ಪಟ್ಟು ಹೆಚ್ಚು ಮಾತ್ರ ದರ ವಿಧಿಸಲು ಸಾಧ್ಯವಾಗಲಿದೆ.

ಹಂಚಿಕೆಯ ಆಧಾರ (ಪೂಲಿಂಗ್‌)ದಲ್ಲಿ ಮಹಿಳೆಯರು ಕ್ಯಾಬ್‌ಗಳಲ್ಲಿ ಪ್ರಯಾಣಿ ಸುವುದಿದ್ದರೆ, ಸಹ ಪ್ರಯಾಣಿಕರು ಮಹಿಳೆ ಯರಾಗಿದ್ದರೆ ಮಾತ್ರ ಅವಕಾಶ ಕಲ್ಪಿಸ ಲಾಗುತ್ತದೆ. ಗಮನಾರ್ಹ ಅಂಶವೆಂದರೆ ಇದೇ ಮೊದಲ ಬಾರಿಗೆ ದೇಶದಲ್ಲಿ ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆಗಳನ್ನು ನಿಯಂತ್ರಿ­ಸಲು “ಮೋಟಾರ್‌ ವೆಹಿಕಲ್‌ ಆ್ಯಗ್ರೆಗೇಟರ್‌ ಗೈಡ್‌ಲೈನ್ಸ್‌ 2020′ ಅನ್ವಯ ನಿಯಮಗಳನ್ನು ಜಾರಿಗೊಳಿಸಲಾ ಗುತ್ತಿದೆ. 12 ಗಂಟೆಗಳ ಕಾಲ ಕೆಲಸ ಮಾಡಿದ ಬಳಿಕ ಚಾಲಕರಿಗೆ 10 ಗಂಟೆಗಳ ಕಡ್ಡಾಯ ವಿಶ್ರಾಂತಿ ನೀಡಬೇಕು. ಜತೆಗೆ ಚಾಲಕರಿಗೆ ಒಂದು ಪ್ರಯಾಣದ ಮೊತ್ತ ಶೇ.80ರಷ್ಟು ಮೊತ್ತ ಪಡೆದುಕೊಳ್ಳಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next