Advertisement

ಗೌರ್ನಮೆಂಟ್‌ ಈಸ್‌ ಡೆಡ್‌

11:21 PM Jan 21, 2020 | Lakshmi GovindaRaj |

ಮಂಡ್ಯ: ರಾಜ್ಯದಲ್ಲಿ ಜೀವಂತ ಸರ್ಕಾರವಿಲ್ಲ. “ಗೌರ್ನಮೆಂಟ್‌ ಈಸ್‌ ಡೆಡ್‌’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಆರು ತಿಂಗಳಿಂದ 18 ಇಲಾಖೆಗಳಿಗೆ ಮಂತ್ರಿಗಳೇ ಇಲ್ಲ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ.

Advertisement

ಯಡಿಯೂರಪ್ಪ ಒಬ್ಬರೇ ಎಲ್ಲಾ ಇಲಾಖೆಗಳನ್ನು ನೋಡಿ ಕೊಳ್ಳೋಕಾಗುತ್ತಾ?. ಕೆಲ ಮಂತ್ರಿಗಳಿಗೆ ಹೆಚ್ಚುವರಿ ಖಾತೆ ಕೊಟ್ಟಿದ್ದಾರೆ. ಅವರೂ ಸಹ ಕೆಲಸ ಮಾಡುತ್ತಿಲ್ಲ. ಇನ್ನು, ನಮ್ಮ ಪಕ್ಷ ಬಿಟ್ಟು ಬಿಜೆಪಿಗೆ ಹೋಗಿ ಗೆದ್ದಿರೋರ ಕಥೆ ಬಗ್ಗೆ ಅವರನ್ನೇ ಕೇಳಬೇಕು. ಮಂತ್ರಿಯಾಗಿ ದುಡ್ಡು ಮಾಡಲು ಹೊರಟವರು ಅತಂತ್ರರಾಗಿದ್ದಾರೆ. ಅವರಿಗೆ ಕಾಂಗ್ರೆಸ್‌-ಜೆಡಿಎಸ್‌ ಬಿಟ್ಟಿದ್ದು ಈಗ ಅರಿವಾಗಿದೆ ಎಂದರು.

ನಾನು ಸಿಎಂ ಆಗಿದ್ದಾಗ ಸಂಪುಟ ವಿಸ್ತರಣೆಗೆ ಮೇಡಂ (ಸೋನಿಯಾಗಾಂಧಿ), ರಾಹುಲ್‌ ಹತ್ತು ನಿಮಿಷಕ್ಕೆ ಸಹಿ ಮಾಡಿ ಕೊಟ್ಟಿದ್ದರು. ಆದರೆ, ಯಡಿಯೂರಪ್ಪಗೆ ಬಿಜೆಪಿ ವರಿಷ್ಠರು ಸಂಪುಟ ವಿಸ್ತರಣೆಗೆ ಅವಕಾಶವನ್ನೇ ನೀಡುತ್ತಿಲ್ಲ. ಬಿಎಸ್‌ವೈ ಸ್ವತಂತ್ರವಿಲ್ಲದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹೇಳಿದರು.

ಒತ್ತಡ ಹಾಕಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಪ್ರತಿ ಕ್ರಿಯಿಸಿ, “ನಾನು ಎಲ್ಲಿಯೂ ನಾಲ್ಕು ಕಾರ್ಯಾಧ್ಯಕ್ಷರ ಹುದ್ದೆ ನೀಡುವಂತೆ ಹೇಳಿಲ್ಲ. ಸದ್ಯ ರಾಜ್ಯದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಇಲ್ವಾ?. ಹಿಂದೆ ದೇಶ ಪಾಂಡೆ ಕಾಲದಲ್ಲಿ ಕಾರ್ಯಾಧ್ಯಕ್ಷರು ಇರಲಿಲ್ವಾ?, ಡಿ.ಕೆ.ಶಿವಕುಮಾರ್‌ ಅವರೇ ಕಾರ್ಯಾಧ್ಯಕ್ಷರಾಗಿದ್ದರು. ಈಗಲೂ ಈಶ್ವರ್‌ ಖಂಡ್ರೆ ಇದ್ದಾರೆ. 4 ಮಂದಿ ಕಾರ್ಯಾಧ್ಯಕ್ಷರು ಬೇಕೆಂದು ಹೈಕಮಾಂಡ್‌ಗೆ ನಾನೇ ಒತ್ತಡ ಹಾಕ್ತಿ ದ್ದೇನೆ ಎಂಬುದು ಸುಳ್ಳು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next