Advertisement
ಇಲಾಖಾ ಸವಲತ್ತುಗಳುಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ 2 ಹೆಕ್ಟೇರಿಗಿಂತ ಕಡಿಮೆ ಜಾಗ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ ವಾರ್ಷಿಕ ಮೂರು ಕಂತುಗಳಲ್ಲಿ ಒಟ್ಟು 6000 ರೂ. ಅನ್ನು ನೀಡಲಾಗುತ್ತದೆ. ಅರ್ಹ ಫಲಾನುಭವಿಗಳು ಕೃಷಿ ಇಲಾಖೆ ಕಚೇರಿಯಿಂದ ಅರ್ಜಿ ಪಡೆದು ಭಾವಚಿತ್ರ, ಆರ್‌ಟಿಸಿ, ಎಸ್ಸಿ/ಎಸ್ಟಿಗಳಿಗೆ ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‌ಪುಸ್ತಕದ ಪ್ರತಿ, ದೂರವಾಣಿ ಸಂಖ್ಯೆ ನಮೂದಿಸಿ ಅದನ್ನು ಗ್ರಾ.ಪಂ. ಅಥವಾ ಅಟಲ್ ಜೀ ಸ್ನೇಹ ಕೇಂದ್ರಗಳಲ್ಲಿ ನೀಡಬಹುದಾಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೃಷಿ ಹೊಂಡ/ಷಾಲೋವೆಲ್, ಎರೆಹುಳ ಉತ್ಪಾದನ ಘಟಕಗಳು ಮತ್ತು ದನದ ಕೊಟ್ಟಿಗೆಗಳ ನಿರ್ಮಾಣ, ಐಎಫ್‌ಎಸ್ ಮಾದರಿ ಘಟಕಗಳು, ಆಯ್ದ ಜಲಾನಯನದ ಪ್ರದೇಶದಲ್ಲಿ ಕೃಷಿ ತೋಟಗಾರಿಕೆ ಮುಂತಾದವುಗಳು.
ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ/ಪಂಪ್‌ಸೆಟ್/ತುಂತುರು ನೀರಾವರಿ ಘಟಕ ವಿತರಣೆ. ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವುದು, ಸಮರ್ಪಕ ಮಳೆ ನೀರು ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದನೆ, ಆದಾಯ ಹೆಚ್ಚಳಗೊಳಿಸುವುದು, ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು. ಬೀಜಾಮೃತ, ಜೀವಾಮೃತ
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ಧತಿಯಡಿ ಆಯ್ದ ಕ್ಲಸ್ಟರ್‌ಗಳಲ್ಲಿ ಈ ಪದ್ಧತಿ ಅನುಸರಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಈ ಯೋಜನೆಯಡಿ ತರಬೇತಿ, ಪ್ರಾತ್ಯಕ್ಷಿಕೆ ನೀಡುವುದರ ಜತೆಗೆ ಬೀಜಾಮೃತ, ಜೀವಾಮೃತ ಮಾಡಲು ಪ್ರೋತ್ಸಾಹ ನೀಡಲಾಗುತ್ತದೆ. ಕೃಷಿ ಪರಿಕರಗಳಾದ ಬಿತ್ತನೆ ಬೀಜ, ಸತುವಿನ ಸಲ್ಫೆಟ್ ಮುಂತಾದ ಲಘು ಪೋಷಕಾಂಶ, ಕೃಷಿ ಸುಣ್ಣ, ಸಸ್ಯ ಸಂರಕ್ಷಣ ಔಷಧ, ಸಾವಯವ ಕೃಷಿ ಪರಿಕರ ಮುಂತಾದವುಗಳನ್ನು ಶೇ. 50ರ ರಿಯಾಯಿತಿಯಲ್ಲಿ ವಿತರಿಸುವುದು. ಎಸ್ಸಿ/ಎಸ್ಟಿ ವಿಭಾಗದಲ್ಲಿ ಶೇ. 77ರಷ್ಟು ರಿಯಾಯಿತಿ ಇರುತ್ತದೆ.
Related Articles
ಸಾಮಾನ್ಯ ರೈತರಿಗೆ ಶೇ. 50ರ ರಿಯಾಯಿತಿಯಲ್ಲಿ ಪವರ್ ಟಿಲ್ಲರ್, ಸಣ್ಣ ಟ್ರ್ಯಾಕ್ಟರ್, ಪವರ್ ವೀಡರ್, ಪವರ್ ಸ್ಟ್ರೇಯರ್, ಭತ್ತದ ನಾಟಿ ಯಂತ್ರ, ಭತ್ತ ಕಟಾವು ಯಂತ್ರ ಮೊದಲಾದ ಉಪಕರಣ ವಿತರಣೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಲ್ಲಿ ಶೇ. 90ರಷ್ಟು ರಿಯಾಯಿತಿಯಲ್ಲಿ ವಿತರಣೆ ಹಾಗೂ ತುಂತುರು ನೀರಾವರಿ ಘಟಕವನ್ನು ಶೇ. 90ರಲ್ಲಿ ವಿತರಿಸಲಾಗುತ್ತದೆ.
Advertisement
ಯಾಂತ್ರೀಕೃತ ಭತ್ತದ ನಾಟಿ ಮಾಡುವ ರೈತರಿಗೆ ಅಕ್ಕಿ ನೇರ ಬಿತ್ತನೆ ಬೆಳೆಗುತ್ಛ ಪ್ರಾತ್ಯಕ್ಷಿಗೆ ಅವಕಾಶ, ಪರಿಕರ ಎಲ್ಲ ಸೇರಿ ಪ್ರತಿ ಹೆಕ್ಟೇರಿಗೆ 9,000 ಸಾವಿರ ರೂ. ದೊರೆಯುತ್ತದೆ.
-ಕಿರಣ್ ಪ್ರಸಾದ್ ಕುಂಡಡ್ಕ