ಗಂಗಾವತಿ: ಕೋವಿಡ್ ಸಂಕಷ್ಟದ ಮಧ್ಯೆ ತಾಲೂಕಿನ ಶ್ರೀರಾಮನಗರದ ಪಾಜಿಟೀವ್ ಬಂದಿರುವ 9 ತಿಂಗಳ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಸ್ಥಳೀಯ ಕಾಂಗ್ರೆಸ್ ಮುಖಂಡ ಎಪಿಎಂಸಿ ನಿರ್ದೇಶಕ ರೆಡ್ಡಿಶ್ರೀನಿವಾಸ ನೆರವಿಗೆ ಧಾವಿಸಿ ಅಂಬುಲೆನ್ಸ್ ವ್ಯವಸ್ಥೆ ಮಾಡಿ ಸಾಮಾಜಿಕ ಅಂತರ ಪಾಲನೆ ಮಾಡಿ ಗರ್ಭಿಣಿಯನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲು ಕರೆದುಕೊಂಡು ಬಂದಿದ್ದಾರೆ.
ಕೊರೊನಾ ಪಾಜಿಟೀವ್ ಆಗಿರುವ ಗರ್ಭಿಣಿಯರ ಹೆರಿಗೆಯನ್ನು ಕೊಪ್ಪಳ ಸರಕಾರಿ ಆಸ್ಪತ್ರೆಯಲ್ಲಿ ಮಾಡಲು ಪ್ರತೇಕ ವಿಭಾಗ ಆರಂಭಿಸಲಾಗಿದ್ದು ಅಲ್ಲಿಗೆ ಕರೆದುಕೊಂಡು ಹೋಗಲು ಸೂಚಿಸಲಾಯಿತು. ಈ ವೇಳೆಗೆ ಗರ್ಭಿಣಿ ಗೆ ತೀವ್ರ ನೋವು ಕಾಣಿಸಿಕೊಂಡಿದ್ದ ರಿಂದ ವೈದ್ಯಾಧಿಕಾರಿ ಡಾ.ಈಶ್ವರ ಸಲಹೆ ಮೇರೆಗೆ ಅಗತ್ಯ ಕೊರೊನಾ ಸುರಕ್ಷತೆಯ ಜತೆ ಗರ್ಭಿಣಿ ಗೆ ಸಹಜ ಹೆರಿಗೆ ಮಾಡಿಸಿಕೊಳ್ಳಲಾಗಿದೆ.
ತಾಯಿ ಮತ್ತು ಜನಿಸಿದ ಗಂಡುಮಗು ಆರೋಗ್ಯವಾಗಿದ್ದು ತಾಯಿಯನ್ನು ಕೊವೀಡ್ ಬೆಡ್ ಗೆ ಸ್ಥಳಾಂತರ ಮಾಡಲಾಗಿದೆ. ಮಗುವನ್ನು ವಿಶೇಷ ಕೊಠಡಿಯಲ್ಲಿಟ್ಟು ಪಾಲನೆ ಮಾಡಲಾಗುತ್ತಿದೆ. ಕೋಕೊರೊನಾ ಸಂಕಷ್ಟದಲ್ಲೂ ಸರಕಾರಿ ಆಸ್ಪತ್ರೆ ವೈದ್ಯರು ಸಿಬ್ಬಂದಿಯವರು ಹಾಗೂ ಕಾಂಗ್ರೆಸ್ ಮುಖಂಡ ರೆಡ್ಡಿಶ್ರೀನಿವಾಸ ಅವರಿಗೆ ಬಾಣಂತಿಯ ಕುಟುಂಬದವರು ಅಭಿನಂದಿಸಿದ್ದಾರೆ.