Advertisement

ಸರ್ಕಾರಿ ಆಸ್ಪತ್ರೆ ಸಿಟಿ ಸ್ಕ್ಯಾನಿಂಗ್‌ ಯಂತ್ರ ದುರಸ್ತಿಗೆ ಕರವೇ ಮನವಿ

03:05 PM Apr 19, 2022 | Team Udayavani |

ಲಿಂಗಸುಗೂರು: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಿಟಿ ಸ್ಕ್ಯಾನಿಂಗ್‌ ಯಂತ್ರ ದುರಸ್ತಿ ಮಾಡುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಸೋಮವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಿಟಿ ಸ್ಕ್ಯಾನಿಂಗ್‌ ಯಂತ್ರ ಕೆಟ್ಟು ಮೂರು ತಿಂಗಳು ಕಳೆಯದರೂ ದುರಸ್ತಿ ಮಾಡದೇ ವಿಳಂಬ ಮಾಡುತ್ತಿದ್ದರಿಂದ ಬಡರೋಗಿಗಳು ಖಾಸಗಿ ಆಸ್ಪತ್ರೆಗೆ ತೆರಳುವಂತಾಗಿದೆ. ಬಡರೋಗಿಗಳಿಗೆ 1000-1500 ರೂ. ಹೆಚ್ಚುವರಿ ಹೊರೆ ಹೊರಬೇಕಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಕರವೇ ಅಧ್ಯಕ್ಷ ಅಂಜನೇಯ ಭಂಡಾರಿ, ಭೀಮೇಶ ನಾಯಕ್‌, ವೆಂಕಟಸಿಂಗ್‌ ಉಪ್ಪಾರ, ಸಂಗು ಗುಡದನಾಳ, ಅಮರಪ್ಪ ರಾಠೊಡ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next