Advertisement

Innovation Lab ಸ್ಥಾಪನೆಗೆ 2 ಕೋಟಿ ಬಿಡುಗಡೆ ಮಾಡಿದ ಸರ್ಕಾರ

10:20 PM Jan 09, 2024 | Team Udayavani |

ಬೆಂಗಳೂರು: ಹಿರಿಯ ಪ್ರಾಥಮಿಕ ಮತ್ತು ಪಿಯುಸಿಯಲ್ಲಿ ಇನ್ನೋವೇಷನ್‌ ಲ್ಯಾಬ್‌ (ನಾವೀನ್ಯತಾ ಪ್ರಯೋಗಾಲಯ) ಸ್ಥಾಪಿಸಲು ರಾಜ್ಯ ಸರ್ಕಾರ ಎರಡು ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ.

Advertisement

ರಾಜ್ಯದ ನಾಲ್ಕು ಕಂದಾಯ ವಿಭಾಗಗಳಾದ ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ತಲಾ ನಾಲ್ಕರಂತೆ ಒಟ್ಟು 16 ನಾವೀನ್ಯತಾ ಪ್ರಯೋಗಾಲಯ ಸ್ಥಾಪನೆಯಾಗಲಿದೆ.

ಪ್ರತಿ ಪ್ರಯೋಗಾಲಯಕ್ಕೆ ತಲಾ 12.5 ಲಕ್ಷ ರೂ. ವಿನಿಯೋಗವಾಗಲಿದೆ.

ಮಕ್ಕಳ ಕಲ್ಪನೆಗಳನ್ನು ವಾಸ್ತವ ರೂಪಕ್ಕೆ ಇಳಿಸುವ ಆಶಯದಿಂದ ಇನ್ನೋವೇಷನ್‌ ಲ್ಯಾಬ್‌ಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ ಮಂಡನೆಯ ಸಂದರ್ಭದಲ್ಲಿ ಹೇಳಿದ್ದರು. ಆದರಂತೆ ಈಗ ಅನುದಾನ ಬಿಡುಗಡೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next