Advertisement
ಶನಿವಾರ ನವದೆಹಲಿಯಲ್ಲಿ ಕೇಂದ್ರ ಮಾಹಿತಿ ಆಯೋಗದ 14ನೇ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, “ಆರ್‌ಟಿಐ ಅರ್ಜಿ ಸಲ್ಲಿಕೆಗೆ ಸಾಕಷ್ಟು ಅವಕಾಶಗಳಿದ್ದರೂ, ಅರ್ಜಿಗಳ ಸಂಖ್ಯೆ ಕಡಿಮೆಯಾಗಿದೆ ಎಂದರೆ, ಸರ್ಕಾರದ ಕೆಲಸವು ಜನರಿಗೆ ತೃಪ್ತಿ ತಂದಿದೆ ಎಂದರ್ಥ. ಹೆಚ್ಚಿನ ಸಂಖ್ಯೆಯ ಆರ್‌ಟಿಐ ಅರ್ಜಿಗಳು ಸರ್ಕಾರದ ಯಶಸ್ಸನ್ನು ಪ್ರತಿನಿಧಿಸುವುದಿಲ್ಲ’ ಎಂದಿದ್ದಾರೆ.
ಇದೇ ವೇಳೆ, ಆಡಳಿತಕ್ಕೆ ತಂತ್ರಜ್ಞಾನಗಳ ಬಳಕೆ ಕುರಿತು ಮಾತನಾಡಿದ ಅಮಿತ್ ಶಾ, ಕೇದಾರನಾಥ ಮರುನಿರ್ಮಾಣ ಯೋಜನೆಯ ಮೇಲ್ವಿಚಾರಣೆಯನ್ನು ಡ್ರೋನ್ ಮೂಲಕ ನಡೆಸಿದ ಕುರಿತೂ ವಿವರಿಸಿದ್ದಾರೆ.