Advertisement
ರಾಜ್ಯದ 216 ತಾಲೂಕಿನಲ್ಲಿ ಗಂಭೀರ ಬರ ಪರಿಸ್ಥಿತಿಯಿದೆ. ಇದರ ನಿಯಂತ್ರಣ ಸಂಬಂಧ ಬೆಳೆ ನಷ್ಟ ಪರಿಹಾರಕ್ಕೆ 5000 ಕೋ.ರೂ. ಬಿಡುಗಡೆ ಮಾಡಿ, ಜಿಲ್ಲಾಧಿಕಾರಿಗಳ ಮೂಲಕ ಪರಿಹಾರ ಕಾರ್ಯಕ್ರಮಗಳನ್ನು ನಡೆಸಬೇಕು. ಅದನ್ನು ಬಿಟ್ಟು ರಾಜ್ಯದ ಕಾಂಗ್ರೆಸ್ ನಾಯಕರು ತಮ್ಮ ವೈಫಲ್ಯ ಮರೆಮಾಚಲು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯುತ್ನ ಮಾಡುತ್ತಿದ್ದಾರೆ. ಕೇಂದ್ರ ಸರಕಾರದಿಂದ ಬರ ಪರಿಹಾರಕ್ಕೆ ಅನುದಾನ ಬರಲಿದೆ. ಆದರೆ, ರಾಜ್ಯ ಸರಕಾರ ತುರ್ತು ಪರಿಹಾರ ಕಾರ್ಯ ಕೈಗೊಳ್ಳುವುದನ್ನು ಮರೆತು ಜನರಿಗೆ ಅನ್ಯಾಯ ಮಾಡುತ್ತಿದೆ ಎಂದವರು ತಿಳಿಸಿದರು.
ಬಿಜೆಪಿಯಿಂದ ಹಿರಿಯ ನಾಯಕ ರಾದ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿದಂತೆ ರಾಜ್ಯ ನಾಯಕರನ್ನು ಒಳಗೊಂಡ 17 ತಂಡ ರಚನೆ ಮಾಡಲಾಗಿದೆ. ರಾಜ್ಯಾದ್ಯಂತ ಸಂಚಾರ ಮಾಡಿ ಬರ ಪರಿಸ್ಥಿತಿ ಅಧ್ಯಯನ ನಡೆಸಲಿದೆ ಎಂದು ಹೇಳಿದರು.
Related Articles
ವಿಧಾನಸಭೆ ಹಾಗೂ ವಿಧಾನಪರಿಷತ್‌ಗೆ ವಿಪಕ್ಷ ನಾಯಕರನ್ನು ಈಗಾಗಲೇ ಆಯ್ಕೆ ಮಾಡಬೇಕಿತ್ತು. ಈ ಬಗ್ಗೆ ಕೇಂದ್ರ ನಾಯಕರ ಗಮನವನ್ನು ಸೆಳೆದಿದ್ದೇವೆ. ಆದಷ್ಟು ಬೇಗ ಆಯ್ಕೆ ಪ್ರಕ್ರಿಯೆ ನಡೆಸುವ ನಿರೀಕ್ಷೆಯಿದೆ. ಸಾಮೂಹಿಕ ನಾಯಕತ್ವದೊಂದಿಗೆ ಮುಂದಿನ ಅಧಿವೇಶನದಲ್ಲಿ ರಾಜ್ಯ ಸರಕಾರದ ವೈಫಲ್ಯಗಳನ್ನು ಜನರ ಮುಂದಿಡುವ ಎಲ್ಲ ಪ್ರಯತ್ನ ಮಾಡಲಿದ್ದೇವೆ. ರಾಜ್ಯಾಧ್ಯಕ್ಷರ ಆಯ್ಕೆಯೂ ನಡೆಯಲಿದೆ ಎಂದರು.
Advertisement
ಪಕ್ಷದ ಕೆಲವು ಸಂಘಟನಾತ್ಮಕ ವಿಷಯಗಳು, ಹಿಂದುಳಿದ ವರ್ಗಗಳ ಮೀಸಲಾತಿ ಸಹಿತ ವಿವಿಧ ವಿಚಾರಗಳ ಚರ್ಚೆಗೆ ನನ್ನನ್ನು ಸೇರಿದಂತೆ ಕೆ.ಎಸ್.ಈಶ್ವರಪ್ಪ, ಪಿ.ಸಿ. ಮೋಹನ್ ಅವರನ್ನು ಕೇಂದ್ರದ ನಾಯಕರು ಆಹ್ವಾನಿಸಿ ಮಾತುಕತೆ ನಡೆಸಿದ್ದಾರೆ. ನಮ್ಮಿಂದ ಕೇಳಿರುವ ಮಾಹಿತಿ ನೀಡಿದ್ದೇವೆ ಎಂದವರು ತಿಳಿಸಿದರು.