Advertisement

ಹಣ್ಣು-ತರಕಾರಿ ಬೆಳೆಗಾರರಿಗೆ ಸರ್ಕಾರದಿಂದ ಪರಿಹಾರ ಧನ

07:52 AM Jun 15, 2020 | Suhan S |

ವಿಜಯಪುರ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ 2020-21ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರ ಧನ ವಿತರಿಸಲು ನಿರ್ಧರಿಸಲಾಗಿದೆ. 2019-20ನೇ ಸಾಲಿನ ಮಾರ್ಚ್‌ 2020ರಿಂದ ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರ ಅಭಾವದಿಂದ ಹಣ್ಣು ಮತ್ತು ತರಕಾರಿ ಬೆಳೆಗಳ ಕಟಾವು ಸಾಗಾಣಿಕೆ, ಮಾರಾಟ ಮತ್ತು ಸಂಸ್ಕರಣೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಸರ್ಕಾರ ತೋಟಗಾರಿಕೆ ಬೆಳೆಗಾರರಿಗೆ ನಷ್ಟ ಪರಿಹಾರ ನೀಡಲು ಮುಂದಾಗಿದೆ. ಅರ್ಜಿ ಸಲ್ಲಿಸಲು ಜೂ. 16 ಕೊನೆ ದಿನ.

Advertisement

ಹೀಗಾಗಿ ಲಾಕ್‌ಡೌನ್‌ ಅವಧಿಯಲ್ಲಿ ಹಣ್ಣಿನ ಬೆಳೆಗಳಾದ ಟೊಮ್ಯಾಟೋ, ಹಸಿ ಮೆಣಸಿನಕಾಯಿ, ಪಪಾಯಿ, ಹೂಕೋಸು, ಎಲೆಕೋಸು, ಸಿಹಿಗುಂಬಳ, ಬೂದುಗುಂಬಳ, ಗಜ್ಜರಿ, ಈರುಳ್ಳಿ, ದಪ್ಪ ಮೆಣಸಿನಕಾಯಿ ಬೆಳೆಗಳಿಗೆ ಮಾತ್ರ 2019-20ನೇ ಸಾಲಿನ ಮುಂಗಾರು (ಹಣ್ಣಿನ ಬೆಳೆಗಳು) ಮತ್ತು ಹಿಂಗಾರು (ತರಕಾರಿ ಬೆಳೆಗಳು) ಅವಧಿಯಲ್ಲಿನ ಸಮೀಕ್ಷೆ ವರದಿ ಆಧರಿಸಿ ಪರಿಹಾರ ನೀಡಲಾಗುತ್ತದೆ. ಪ್ರತಿ ಹೆಕ್ಟೇರ್‌ ಗೆ ಕನಿಷ್ಠ 2 ಸಾವಿರ ರೂ. ಗರಿಷ್ಠ 15 ಸಾವಿರ ರೂ. ವರೆಗೆ ಪರಿಹಾರಧನ ವಿತರಿಸಲಾಗುತ್ತದೆ ಎಂದು (ಜಿಪಂ) ಮುದ್ದೇಬಿಹಾಳ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಕಲ್ಲಂಗಡಿ ಮತ್ತು ಕರಬೂಜ ಬೇಸಿಗೆ ಬೆಳೆ ಸಮೀಕ್ಷೆಯಲ್ಲಿ ನಮೂದಾಗದ ರೈತರೂ ಅರ್ಜಿ ಸಲ್ಲಿಸಬಹುದು. ರೈತರು ಕಲ್ಲಂಗಡಿ ಮತ್ತು ಕರಬೂಜ ಬೆಳೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಜೂ. 16ಕೊನೆ ದಿನ. ಮಾಹಿತಿಗಾಗಿ ರೈತರು ಈ ಕೆಳಕಂಡ ಸಂಬಂಧಪಟ್ಟ ಹೋಬಳಿ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲೆಯ ರೈತರು ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.

ಮುದ್ದೇಬಿಹಾಳ ಸುಭಾಷ್‌ಚಂದ್ರ ಟಾಕಳಿ ಮೊ.9972719844, ಮುದ್ದೇಬಿಹಾಳ-ಶμàಖ ಬಾವೂರ ಮೊ.7795512402, ನಾಲತವಾಡ ವಿನೋದ ನಾಯಕ ಮೊ. 9620662696, ಢವಳಗಿ ಭೀಮಪ್ಪ ನಂದ್ಯಾಳ ಮೊ.6360016712, ತಾಳಿಕೋಟಿ ಶಿವಲಿಂಗ ಕುಂಬಾರ ಮೊ.9686915737 ಇವರನ್ನು ಸಂಪರ್ಕಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next