Advertisement

ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರ ವಿಫಲ

11:24 AM Jun 11, 2018 | Team Udayavani |

ಹಟ್ಟಿ ಚಿನ್ನದ ಗಣಿ: ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರಗಳು ವಿಫಲವಾಗುತ್ತಿವೆ. ಇನ್ನೊಂದೆಡೆ ದುಡಿಯುವ ವರ್ಗದ ಕಾರ್ಮಿಕರ ಪರ ಇರುವ ಕಾನೂನುಗಳನ್ನು ಒಂದೊಂದೇ ದುರ್ಬಲಗೊಳಿಸುತ್ತ ಬರುತ್ತಿವೆ. ಕಾರ್ಮಿಕರು ಒಂದಾಗಿ ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಆರ್‌. ಮಾನಸಯ್ಯ ಹೇಳಿದರು.

Advertisement

ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘ (ಟಿಯುಸಿಐ) ವತಿಯಿಂದ ಕೋಠಾ ಕ್ರಾಸ್‌ ಬಳಿಯ ಪೈ ಭವನದಲ್ಲಿ ರವಿವಾರ ಏರ್ಪಡಿಸಿದ್ದ 132ನೇ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುಮಾರು 58 ಲಕ್ಷ ಯುವಜನರು ಉದ್ಯೋಗವಿಲ್ಲದೆ ತಿರುಗಾಡುತ್ತಿದ್ದಾರೆ. ಯಾವುದೇ ಸರ್ಕಾರ ಬಂದರೂ ನಿರುದ್ಯೋಗ ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರಗಳು ವಿಫಲಗೊಂಡಿವೆ. ಪ್ರಧಾನಿ ಮೋದಿ ಕಾರ್ಪೋರೇಟ್‌ ಕಂಪನಿಗಳ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ.

ಚೀನಾ ದೇಶದೋಂದಿಗೆ ಒಳಒಪ್ಪಂದ ಮಾಡಿಕೊಂಡು ಕಾರ್ಮಿಕರ ಕಾನೂನು ಬದಲಿಸಲು ಹೊರಟಿದ್ದಾರೆ. ಆದಾನಿ,
ಅಂಬಾನಿ ಕಂಪನಿಗಳಿಗೆ ಮೋದಿಯವರು ಅನುಕೂಲ ಮಾಡಿಕೊಡುತ್ತಿದ್ದಾರೆ. ಇದರ ವಿರುದ್ಧ ಸತತ ಹೋರಾಟಕ್ಕೆ
ಸಿದ್ಧ. ಕಾರ್ಮಿಕರ ಹಕ್ಕು ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ರಾಜ್ಯ ಉಪಾಧ್ಯಕ್ಷ ಚಿನ್ನಪ್ಪ ಕೊಟ್ರೋಕಿ ಮಾತನಾಡಿ, ಈ ಹಿಂದೆ 10 ವರ್ಷಗಳ ಕಾಲ ಇದ್ದ ಎಐಟಿಯುಸಿ ಕಾರ್ಮಿಕ ಸಂಘಟನೆ ಕಾರ್ಮಿಕರ ಐಕ್ಯೆತೆಗೆ ಧಕ್ಕೆ ತರುವಂತಹ ಕಾರ್ಯಗಳನ್ನು ಮಾಡಿದ್ದರಿಂದ ಟಿಯುಸಿಐ ಸಂಘಟನೆಯನ್ನು
ಚುನಾವಣೆಯಲ್ಲಿ ಗೆಲ್ಲಿಸಲಾಗಿದೆ. ಕಾರ್ಮಿಕರ ಐಕ್ಯತೆಗೆ ಧಕ್ಕೆ ತರದಂತೆ ನೋಡಿಕೊಳ್ಳುವ ಜವಾಬ್ದಾರಿ ಟಿಯುಸಿಐ
ಸಂಘಟನೆ ಮೇಲೆ ಇದೆ. ಅದರಂತೆ ಕಾರ್ಮಿಕರ ಐಕ್ಯತೆಗಳನ್ನು ಕಾಪಾಡುವ ಕಾರ್ಯವನ್ನು ಸಂಘಟನೆ ಮಾಡಲಿದೆ ಎಂದು ಹೇಳಿದರು.

ರ್ಯಾಲಿ: ಕಾರ್ಮಿಕರ ದಿನಾಚರಣೆ ಪ್ರಯುಕ್ತ ಬೆಳಗ್ಗೆ ಪಾಮನಕೆಲ್ಲೂರು ಕ್ರಾಸ್‌ ಬಳಿಯಿಂದ ಕಾರ್ಮಿಕರು ರ್ಯಾಲಿ
ನಡೆಸಿದರು. ಕ್ಯಾಂಪ್‌ನಲ್ಲಿರುವ ವಿವಿಧ ಬಡಾವಣೆ, ರಸ್ತೆಗಳಲ್ಲಿ ಸಂಚರಿಸಿ ಪೈ ಭವನಕ್ಕೆ ಆಗಮಿಸಿದರು. ನಂತರ ಕಾರ್ಮಿಕ ಮುಖಂಡರು ಧ್ವಜಾರೋಹಣ ನೆರವೇರಿಸಿದರು. ಕೋಠಾ ಕ್ರಾಸ್‌ ಬಳಿ ಇರುವ ಎ.ಜೆ. ಪೈ ಮೂರ್ತಿಗೆ ಹಾರ ಹಾಕಿ ಗೌರವ ಸಲ್ಲಿಸಿದರು. ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪೈ ಭವನ ಆವರಣದ ಸುತ್ತಲು ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಅಧ್ಯಕ್ಷ ವಾಲೇಬಾಬು, ಕಾರ್ಯದರ್ಶಿ ಅಮೀರ ಅಲಿ, ರಾಜ್ಯ ಉಪಾಧ್ಯಕ್ಷ ಚಿನ್ನಪ್ಪ ಕೊಟ್ರೋಕಿ, ಜಿಲ್ಲಾಧ್ಯಕ್ಷ ಜೆ. ಅಮರೇಶ, ಕಾರ್ಮಿಕರಾದ ಭೀಮಣ್ಣ ಯವನಾಳ, ಕನಕರಾಜಗೌಡ ಗುರಿಕಾರ, ಯಂಕೋಬ ಮಿಯ್ನಾಪುರ, ಎಚ್‌.ಎ. ನಿಂಗಪ್ಪ, ಸೇರಿ ಚಿನ್ನದ ಗಣಿ ಕಾರ್ಮಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next