Advertisement

ಕೊರೊನಾ ತಡೆಗಟ್ಟು ವಲ್ಲಿ ಸರ್ಕಾರ ವಿಫಲ

09:32 PM Jun 04, 2021 | Team Udayavani |

ಬ್ಯಾಡಗಿ: ಕಾಂಗ್ರೆಸ್‌ ಪಕ್ಷದ ತಾಲೂಕು ಘಟಕದ ವತಿಯಿಂದ ಸ್ಥಳೀಯ ತಾಲೂಕು ಆಸ್ಪತ್ರೆಗೆ ಉಚಿತವಾಗಿ ಆಕ್ಸಿಜನ್‌ ಬ್ಯಾಂಕ್‌ಗಳನ್ನು ವಿತರಿಸಲಾಯಿತು. ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಶಾಸಕ ಬಸವರಾಜ ಶಿವಣ್ಣವರ, ಮುಖಂಡ ಎಸ್‌.ಆರ್‌.ಪಾಟೀಲ ಅವರ ನೇತೃತ್ವದಲ್ಲಿ 2.50 ಲಕ್ಷ ರೂ. ವೆಚ್ಚದ ಆಕ್ಸಿಜನ್‌ ಬ್ಯಾಂಕ್‌ ಸೇರಿದಂತೆ ಮಾಸ್ಕಗಳನ್ನು ವೈದ್ಯಾಧಿಕಾರಿ ಡಾ|ಪುಟ್ಟರಾಜು ಅವರಿಗೆ ಹಸ್ತಾಂತರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಸವರಾಜ ಶಿವಣ್ಣನವರ, ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರವಿದ್ದರೂ ಕೊರೊನಾದಿಂದಾಗುತ್ತಿರುವ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ ಅಧಿಕಾರದಲ್ಲಿ ಇಲ್ಲದಿದ್ದರೂ ಪ್ರತಿ ಹಂತದಲ್ಲೂ ಸರ್ಕಾರವನ್ನು ಎಚ್ಚರಿಸುವ ಕೆಲಸದಲ್ಲಿ ನಿರತವಾಗಿದೆ ಎಂದರು.

ಸಂಕಷ್ಟದಲ್ಲಿರುವವರ ಕೈ ಹಿಡಿಯಿರಿ: ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ದೇಶದ ಜನರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಅವರಿಗೆ ಪಡಿತರ ಕೊಟ್ಟರಷ್ಟೇ ಸಾಲದು. ಬದಲಾಗಿ, ಅವರಿರುವ ಕಡೆ ಉದ್ಯೋಗ ನೀಡಿದಲ್ಲಿ ಸರ್ಕಾರದ ಪರವಾಗಿ ಕನಿಷ್ಟ ಭರವಸೆಯನ್ನಾದರೂ ನೀಡಿದಂತಾಗಲಿದೆ ಎಂದರು. ಇದ್ದಲ್ಲೇ ಉದ್ಯೋಗ ಸೃಷ್ಟಿಸಿ: ಮುಖಂಡ ಎಸ್‌. ಆರ್‌.ಪಾಟೀಲ ಮಾತನಾಡಿ, ನಗರಗಳಲ್ಲಿದ್ದ ಬಹುತೇಕ ಕಾರ್ಮಿಕರು ತಮ್ಮೂರ ಕಡೆ ಮುಖ ಮಾಡಿದ್ದು, ಅವರೆಲ್ಲಾ ಉದ್ಯೋಗಕ್ಕಾಗಿ ಹಾತೊರೆಯುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳನ್ನು ಸಮರ್ಪಕ ಬಳಕೆಗೆ ಮುಂದಾಗುವ ಮೂಲಕ ಸರ್ಕಾರ ಇನ್ನಾದರೂ ಜನರು ಗುಳೇ ಹೋಗುವುದನ್ನು ತಡೆಯುವಂತೆ ಸಲಹೆ ನೀಡಿದರು.

ದೇಶ ಸೇವೆಗೆ ಸಮ: ಜಿಪಂ ಅಧ್ಯಕ್ಷ ಏಕನಾಥ್‌ ಭಾನುವಳ್ಳಿ ಮಾತನಾಡಿ, ಕೋವಿಡ್‌-19 ವೈರಸ್‌ ತಡೆಗಟ್ಟುವ ಕೆಲಸದಲ್ಲಿ ನಿರತರಾದ ವಾರಿಯರ್ಗಳ ಪೈಕಿ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಸಾರ್ವಜನಿಕರಿಂದ ಸಾಕಷ್ಟು ಹೆಚ್ಚು ಅವಮಾನ ಎದು ರಿಸಿದ್ದಾರೆ. ಜೀವದ ಹಂಗು ತೊರೆದು ಸೇವೆ ಸಲ್ಲಿಸುವ ಸೈನಿಕರಂತೆ ಮುನ್ನುಗ್ಗಿದ್ದ ಅವರ ಶ್ರಮ ದೇಶ ಸೇವೆಗೆ ಸಮನಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಬಸವರಾಜ ಸವಣೂರು, ದಾನಪ್ಪ ಚೂರಿ, ಪ್ರಕಾಶ ಬನ್ನಿಹಟ್ಟಿ ಬೀರಪ್ಪ ಬಣಕಾರ, ರಮೇಶ ಸುತ್ತಕೋಟಿ, ಶಂಕರ ಕುಸಗೂರ, ಶಂಭನಗೌಡ ಪಾಟೀಲ, ಡಿ.ಎಚ್‌.ಬುಡ್ಡನಗೌಡ್ರ, ಜಗದೀಶಗೌಡ ಪಾಟೀಲ, ರಮೇಶ ಮೋಟೆಬೆನ್ನೂರ, ಖಾದರಸಾಬ್‌ ದೊಡ್ಮನಿ, ದುಗೇಶ ಗೋಣೆಮ್ಮನವರ, ಯೂನಸ್‌ ಅಹಮ್ಮದ ಸವಣೂರ, ಮಜೀದ್‌ ಮುಲ್ಲಾ, ಮಂಜುನಾಥ್‌ ಬೋವಿ, ಡಾ.ಸೌದಾಗರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next