Advertisement

ಬ್ಯಾಂಕ್‌ ಖಾತೆ ಹೊಂದಿದ್ದ‌ರೆ ಮಾತ್ರ ಸರ್ಕಾರದ ಸೌಲಭ್ಯ

02:29 PM Aug 09, 2019 | Suhan S |

ಹೊಸಕೋಟೆ: ಸಮಾಜದ ಎಲ್ಲಾ ವರ್ಗದ ಜನರೂ ಸಹ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದಲ್ಲಿ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗ ಲಿದೆ ಎಂದು ತಹಶೀಲ್ದಾರ್‌ ಕೆ. ರಮೇಶ್‌ ಹೇಳಿದರು.

Advertisement

ನಗರದ ಶ್ರೀಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟ, ಉಜ್ಜೀವನ್‌ ಬ್ಯಾಂಕ್‌ ವತಿಯಿಂದ ಏರ್ಪಡಿಸಿದ್ದ ಹಣಕಾಸು ವ್ಯವಹಾರದ ತಿಳಿವಳಿಕೆ ಸಭೆಯಲ್ಲಿ ಮಾತನಾಡಿದರು.

ಶೂನ್ಯ ಠೇವಣಿಯ ಜನಧನ ಖಾತೆ: ಅಡುಗೆ ಅನಿಲಕ್ಕೆ ನೀಡುವ ಸಹಾಯಧನ ಒಳಗೊಂಡಂತೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನೀಡುವ ಹಣ ಸಹ ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ವರ್ಗಾಯಿಸ ಬೇಕಾಗಿದೆ. ಈ ಉದ್ದೇಶ ಕ್ಕಾಗಿಯೇ ಬ್ಯಾಂಕ್‌ಗಳಲ್ಲಿ ಶೂನ್ಯ ಠೇವಣಿಯ ಜನ್‌ಧನ್‌ ಖಾತೆ ತೆರೆಯಲು ಅವಕಾಶ ಕಲ್ಪಿಸ ಲಾಗಿದೆ. ಇದರಿಂದ ದುರುಪ ಯೋಗ ತಡೆಗಟ್ಟಲು ಸಾಧ್ಯವಾಗಿ ಯೋಜನೆಗಳು ಸಹ ಸಾರ್ಥಕ ಗೊಳ್ಳಲಿವೆ. ರಾಷ್ಟ್ರದ ಆರ್ಥಿಕ ಚಟುವಟಿಕೆಗಳಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವ ದಿಶೆಯಲ್ಲಿ ಜನಜಾಗೃತಿ ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ತಾಲೂಕು ಕೇಂದ್ರಗಳಲ್ಲಷ್ಟೇ ಅಲ್ಲದೆ ಹೋಬಳಿ ಹಂತದಲ್ಲೂ ಹಮ್ಮಿಕೊಳ್ಳುವುದು ಹೆಚ್ಚು ಪರಿಣಾಮಕಾರಿ ಯಾಗಲಿದೆ ಎಂದರು.

ಬ್ಯಾಂಕ್‌ ಖಾತೆ ಹೊಂದಿ ಸರ್ಕಾರದ ಸೌಲಭ್ಯ ಪಡೆಯಿರಿ: ಲೀಡ್‌ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಮಧು ಸೂದನ್‌ ಮಾತನಾಡಿ, ಹಣಕಾಸು ವ್ಯವಹಾರ ಮಾಡುವ ಪ್ರತಿಯೊಬ್ಬರೂ ಬ್ಯಾಂಕ್‌ನಲ್ಲಿ ಖಾತೆ ಹೊಂದುವ ಮೂಲಕ ಸರ್ಕಾರದ ಅಂಗೀಕಾರ ದೊಂದಿಗೆ ಸಾಲ ಸೌಲಭ್ಯಗಳನ್ನು ಸಹ ಪಡೆಯಲು ಸಾಧ್ಯವಾಗಲಿದೆ. ಸಣ್ಣ ವ್ಯಾಪಾರಿಗಳನ್ನು ಸ್ವಾವಲಂಬಿ ಗಳನ್ನಾಗಿಸುವ ಪ್ರಮುಖ ಉದ್ದೇಶದಿಂದ ಜಾರಿಗೊ ಳಿಸಿರುವ ಯೋಜನೆಯಡಿ ಒಕ್ಕೂಟವು ಇತರೆ ಸಂಸ್ಥೆಗಳ ಸಹಯೋಗದಲ್ಲಿ ಗ್ರಾಹಕರಿಗೆ ಸಂಸ್ಥೆಯು ಸಾಲ ಸೌಲಭ್ಯ ನೀಡಿರುವುದಲ್ಲದೆ 20 ಸಾವಿರಕ್ಕೂ ಹೆಚ್ಚು ಯುವಕರು ಉದ್ಯೋಗ ಪಡೆದಿದ್ದಾರೆೆ ಎಂದರು.

ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ವಿ.ಎನ್‌.ಹೆಗ್ಡೆ, ತರಬೇತುದಾರ ನಾರಾಯಣ ಸ್ವಾಮಿ, ಭಾರತೀಯ ಸ್ಟೇಟ್ ಬ್ಯಾಂಕಿನ ವ್ಯವಸ್ಥಾಪಕ ಸುರೇಶ್‌ ಬೆಳ್ಳುಬ್ಬಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next