ಬೆಂಗಳೂರು: ಕಬಡ್ಡಿ, ಕೊಕ್ಕೊ, ಕುಸ್ತಿ, ಎತ್ತಿನಗಾಡಿ ಓಟ ಮತ್ತಿತರ ಐದು ಗ್ರಾಮೀಣ ಕ್ರೀಡೆಗಳಿಗೆ ಸರಕಾರ ಪ್ರೋತ್ಸಾಹ ನೀಡಲಿದೆ. ಕ್ರೀಡೆಯಿಂದ ದೇಹದ ಆರೋಗ್ಯ ಚೆನ್ನಾಗಿರುತ್ತದೆ. ವ್ಯಕ್ತಿತ್ವ ವಿಕಸನಕ್ಕೂ ಇದು ಪೂರಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ರೈತ ಮೋರ್ಚಾ ಬೆಂಗಳೂರು ಉತ್ತರ ಜಿಲ್ಲೆ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು “ಸೇನಾಪತಿ ಚಂದ್ರಶೇಖರ್ ಅಜಾದ್ ಆಟದ ಮೈದಾನ, ಶ್ರೀ ಬಾವೂರಾವ್ ದೇಶಪಾಂಡೆ ಭವನದ ಹತ್ತಿರ ಮಲ್ಲೇಶ್ವರದಲ್ಲಿ ಕಬಡ್ಡಿ ಪಂದ್ಯಾವಳಿ “ನಮೋ ಕಿಸಾನ್ ಕಪ್-2022” ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ:ವಿರಾಟ್ ನಿವೃತ್ತಿಗೂ ಮೊದಲು ಪಾಕಿಸ್ಥಾನದಲ್ಲೊಮ್ಮೆ ಆಡಿ: ವೈರಲ್ ಆಯ್ತು ಅಭಿಮಾನಿಯ ಪೋಸ್ಟರ್
ದೇಶದ ಅಭಿವೃದ್ಧಿಗೆ ಕಾರಣಕರ್ತ ಮತ್ತು ಸದಾ ಸ್ಪೂರ್ತಿಯಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ರೈತ ಮೋರ್ಚಾವು ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ಕೊಡುತ್ತಿರುವುದು ಶ್ಲಾಘನಾರ್ಹ ಎಂದು ಅವರು ತಿಳಿಸಿದರು.
ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು ಮತ್ತು ಯೋಜನೆಗಳು ಸದಾ ಮಾದರಿ ಮತ್ತು ಜನಪರವಾಗಿರುತ್ತವೆ ಎಂದು ವಿವರಿಸಿದರು. ಮಹಿಳೆಯರಿಗೂ ಅವಕಾಶ ಮಾಡಿಕೊಟ್ಟ ಸಂಘಟಕರನ್ನು ಅವರು ಅಭಿನಂದಿಸಿದರು.