ಸಸಿಹಿತ್ಲು: ಗ್ರಾಮೀಣ ಭಾಗದ ಯುವ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ವಿವಿಧ ಚಟುವಟಿಕೆ ಮಾಡುವ ಯುವ ಸಂಘಟನೆಗಳಿಗೆ ಸರಕಾರ ಮುಕ್ತವಾಗಿ ಸಹಕಾರ ನೀಡುತ್ತಿದೆ ಎಂದು ಶಾಸಕ ಕೆ. ಅಭಯಚಂದ್ರ ಜೈನ್‌ಹೇಳಿದರು.
ಹಳೆಯಂಗಡಿಯಲ್ಲಿ ಸಸಿಹಿತ್ಲು ಯುವಕ ಮಂಡಲಕ್ಕೆ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯಿಂದ ವಿಶೇಷ ಅನುದಾನ ವಿತರಿಸಿದರು. ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ಅನುದಾನದ ಚೆಕ್‌ನ್ನು ಶಾಸಕರಿಂದ ಪಡೆದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್.ವಸಂತ ಬೆರ್ನಾಡ್, ಗ್ರಾ.ಪಂ. ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅನಿಲ್ ಕುಮಾರ್, ಮಾಲತಿ ಕೋಟ್ಯಾನ್, ಚಂದ್ರಕುಮಾರ್, ಅಬ್ದುಲ್ ಖಾದರ್, ಅಬ್ದುಲ್ ಅಝೀಝ್, ಎಚ್.ಹಮೀದ್, ಅಬ್ದುಲ್ ಬಶೀರ್, ಚಿತ್ರಾ ಸುರೇಶ್, ಶರ್ಮಿಳಾ ಎಸ್. ಕೋಟ್ಯಾನ್, ಪ್ರವೀಣ್ ಸಾಲ್ಯಾನ್, ಮೂಲ್ಕಿ ನಗರ ಪಂಚಾಯತ್ ಸದಸ್ಯರಾದ ಪುತ್ತುಬಾವ, ಅಶೋಕ್ ಪೂಜಾರ್, ಮಾಜಿ ಜಿ.ಪಂ. ಅಧ್ಯಕ್ಷೆ ಸುಗಂಧಿ ಕೊಂಡಾಣ, ಮಾಜಿ ತಾ.ಪಂ. ಸದಸ್ಯರಾದ ರಾಜು ಕುಂದರ್, ಮನ್ಸೂರ್ ಸಾಗ್, ಕಿನ್ನಿಗೋಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರ ಕಿನ್ನಿಗೋಳಿ, ಕಿಲ್ಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್, ಪಡುಪಣಂಬೂರು ಧರ್ಮಸ್ಥಳ ಗ್ರಾ. ಯೋಜನೆಯ ಸೇವಾ ಪ್ರತಿನಿಧಿ ಸವಿತಾ ಶರತ್ ಬೆಳ್ಳಾಯರು,ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಚಂದ್ರಶೇಖರ ಕದಿಕೆ, ಸಸಿಹಿತ್ಲು ಬಿಲ್ಲವ ಸಮಾಜ ಸೇವಾ ಸಂಘದ ಧನ್‌ರಾಜ್ ಕೋಟ್ಯಾನ್ ಸಸಿಹಿತ್ಲು, ರಂಗ ಕಲಾವಿದ ಪ್ರಕಾಶ್ ಆಚಾರ್ಯಕಿನ್ನಿಗೋಳಿ ಉಪಸ್ಥಿತರಿದ್ದರು.