ಚಿಕ್ಕಬಳ್ಳಾಪುರ: ಬೀದರ್ ಜಿಲ್ಲೆಯ ಹುಮ್ನಾಬಾದ್ ತಹಶೀಲ್ದಾರ್ ಮೇಲೆ ಹಲ್ಲೆ ಮಾಡಿರುವ ಸಮಾಜಘಾತುಕ ವ್ಯಕ್ತಿಗಳ ಮೇಲೆ ಕಠಿಣ ಕ್ರಮಕೊಳ್ಳಲು ಜಿಲ್ಲಾ ಸರ್ಕಾರಿ ನೌಕರರ ಸಂಘ ಜಿಲ್ಲಾಡಳಿತ ಭವನದ ಎದುರು ಪ್ರತಿಭಟಿಸಿತು.
ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮಾತನಾಡಿ, ಹುಮ್ನಾಬಾದ್ ತಹಶೀಲ್ದಾರ್ ಮೇಲೆ ಕೆಲವು ಸಮಾಜ ಘಾತುಕ ವ್ಯಕ್ತಿಗಳು ಹಲ್ಲೆ ನಡೆಸಿ, ಅಟ್ರಾಸಿಟಿಕಾಯ್ದೆಯಡಿ ಪ್ರಕರಣ ದಾಖಲಿಸಿರುವುದುಖಂಡನೀಯ. ನಮ್ಮ ಹಿತಾಸಕ್ತಿ ಹಾಗೂ ರಕ್ಷಣೆ ಕಾಪಾಡಿಕೊಳ್ಳಲು ಎಲ್ಲಾ ಸರ್ಕಾರಿ ನೌಕರರುಒಂದುಗೂಡಬೇಕು. ಸರ್ಕಾರ ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಕಾನೂನು ರೀತಿಯಲ್ಲಿ ಹೋರಾಟ: ಕೇಂದ್ರಕ್ಕೆ ಹೋಲಿಸಿದರೆ ರಾಜ್ಯ ಸರ್ಕಾರಿ ನೌಕರರು ಕಡಿಮೆ ವೇತನ, ಇತರೆ ಭತ್ಯೆ ಪಡೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹದರಲ್ಲೂ ನೌಕರರಸ್ವಾಭಿಮಾನಕ್ಕೆ, ಕರ್ತವ್ಯ ಪಾಲನೆಗೆ ಕಿಡಿಗೇಡಿಗಳು ಯತ್ನಿಸಿದರೆ ಅದನ್ನು ಸಹಿಸಲಾಗುವುದಿಲ್ಲ. ಕಾನೂನು ರೀತಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಠಿಣ ಕಾನೂನು ಕ್ರಮ ಅಗತ್ಯ: ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಹರೀಶ್ ಮಾತನಾಡಿ, ಹುಮ್ನಾಬಾದ್ ತಹಶೀಲ್ದಾರ್‌ಅವರ ಮೇಲೆಯೇ ಸಮಾಜಘಾತುಕ ವ್ಯಕ್ತಿಗಳುಹಲ್ಲೆ ಮಾಡಿ ಭಯದ ವಾತಾವರಣವನ್ನುಸೃಷ್ಟಿಸಿದರೆ, ಇತರೆ ಸರ್ಕಾರಿ ನೌಕರರು ಯಾವ ರೀತಿಧೈರ್ಯ ಹಾಗೂ ಸಮಾಧಾನದಿಂದಕಾರ್ಯನಿರ್ವಹಿಸಲು ಸಾಧ್ಯ ಎಂಬುದನ್ನುಊಹಿಸಲು ಕಷ್ಟವಾಗುತ್ತದೆ. ಇದನ್ನು ತೀವ್ರವಾಗಿ ಖಂಡಿಸುತ್ತಿದ್ದು, ಈ ರೀತಿಯ ಘಟನೆಗಳುಮರುಕಳಿಸದಂತೆ ಸರ್ಕಾರವು ಸೂಕ್ತ ಕಾನೂನುಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಈ ವೇಳೆ ಮನವಿ ಸ್ವೀಕರಿಸಿದ ಡೇಸಿ ಕಚೇರಿಸಹಾಯಕ ಅ ಧಿಕಾರಿ ಕೃಷ್ಣಪ್ಪ ಮಾತನಾಡಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ, ಈ ಘಟನೆಯ ಎಲ್ಲಾ ವಿವರಗಳನ್ನು ಅವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ, ಖಜಾಂಚಿ ದಿನೇಶ್, ಕಾರ್ಯಾಧ್ಯಕ್ಷ ಚಿಕ್ಕನರಸಿಂಹಯ್ಯ, ಗೌರವಾಧ್ಯಕ್ಷ ಶಂಕರರೆಡ್ಡಿಒಳಗೊಂಡಂತೆ ಎಲ್ಲಾ ನಿರ್ದೇಶಕರು, ಪದಾಧಿಕಾರಿಗಳು, ನಾಮ ನಿರ್ದೇಶಿತ ಸದಸ್ಯರು, ಕಂದಾಯ ಇಲಾಖೆ ನೌಕರರ ಸಂಘ, ಗ್ರಾಮ ಲೆಕ್ಕಾಧಿಕಾರಿಗಳ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘ, ಬಡ್ತಿ ಮುಖ್ಯೋಪಾಧ್ಯಾಯರ ಸಂಘ, ಪ್ರಾಥಮಿಕ ಶಿಕ್ಷಕರ ಸಂಘ, ಪಿಡಿಒ ಸಂಘದ ಸದಸ್ಯರು, ಆರೋಗ್ಯ ಇಲಾಖೆ ಸಂಘದ ಪದಾಧಿ ಕಾರಿಗಳು,ವಿವಿಧ ಇಲಾಖೆ ಅಧಿ ಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.