Advertisement

ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿನ ಗೊಂದಲ ಪರಿಹರಿಸಲು ಸರಕಾರದಿಂದ ಮತ್ತಷ್ಟು ಸಂವಾದ

09:36 AM Jan 08, 2020 | Team Udayavani |

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಧ್ಯೇಯೋದ್ದೇಶಗಳನ್ನು ಮನವರಿಕೆ ಮಾಡುವ ಅಭಿಯಾನದ ಅಂಗವಾಗಿ ಮುಂಬಯಿನಲ್ಲಿ ಇತ್ತೀಚೆಗೆ ಕೇಂದ್ರ ಸಚಿವ ಪಿಯೂಶ್‌ ಗೋಯೆಲ್‌ ಅವರು ಬಾಲಿವುಡ್‌ನ‌ ನಟರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದ ರೀತಿಯಲ್ಲೇ ಇನ್ನೂ ಅನೇಕ ನಗರಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ನಿರ್ಧರಿಸಿದೆ.

Advertisement

ಇಂಥ ಸಂವಾದ ಕಾರ್ಯಕ್ರಮಗಳನ್ನು ದೇಶದ ನಾನಾ ಭಾಗಗಳಲ್ಲಿ ನಡೆಸುವ ಅವಶ್ಯಕತೆಯಿದೆ. ಆಗಲೇ ಜನರಿಗೆ ಸಿಎಎಯ ಉದ್ದೇಶಗಳು ಮನವರಿಕೆಯಾಗುತ್ತವೆ. ಇದರಿಂದ ವಿಪಕ್ಷಗಳು ಹರಡುತ್ತಿರುವ ಕಾಯ್ದೆ ಕುರಿತ ಊಹಾಪೋಹ, ತಪ್ಪು ಮಾಹಿತಿಗಳಿಗೆ ಕಡಿವಾಣ ಬೀಳುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next