ದಾವಣಗೆರೆ: ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರವನ್ನು ವಂಚಿಸಿರುವ ಮಾಜಿ ಸಚಿವ ಕೆ.ಶಿವಮೂರ್ತಿನಾಯ್ಕ ಪತ್ನಿ ಡಾ| ಗೀತಾ ಶಿವಮೂರ್ತಿಯವರನ್ನು ತಕ್ಷಣವೇ ಬಂಧಿ ಸಬೇಕು. ಇಲ್ಲದಿದ್ದಲ್ಲಿ ದಾವಣಗೆರೆಯ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಕಾರ್ಯದರ್ಶಿ ಆರ್.ಲಿಂಗಾನಾಯ್ಕ ಎಚ್ಚರಿಸಿದ್ದಾರೆ.
ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಅಧೀಕ್ಷಕಿಯಾಗಿ ಸರ್ಕಾರಿ ಸೇವೆಯಲ್ಲಿರುವ ಡಾ| ಗೀತಾ ಶಿವಮೂರ್ತಿ ಅವರು ತಮ್ಮ ಹೆಸರಿನಲ್ಲಿರುವ ಬಾಡಾ ಕ್ರಾಸ್‌ನ ಖುಷ್ಕಿ ಜಮೀನಿನ ಪರಿಹಾರಕ್ಕೆ ಸುಳ್ಳು ದಾಖಲೆ ಸಲ್ಲಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದಿಂದ 3,35,165 ರೂ. ಬದಲಾಗಿ 44,38,033
ಪರಿಹಾರ ಪಡೆದು ವಂಚಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆ ಸಂಬಂಧ ದಾವಣಗೆರೆಯ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಜಾಮೀನುರಹಿತ ಕೇಸ್ ದಾಖಲಾಗಿದ್ದರೂ, ವಿನೋಬ ನಗರದ ಮನೆಗೆ ಆಗಾಗ ಬಂದು ಹೋಗುವ ಅವರನ್ನು ಬಂಧಿಸುತ್ತಿಲ್ಲ. ಮಾಜಿ ಸಚಿವ ಕೆ.ಶಿವಮೂರ್ತಿ ಕೈವಾಡವೂ ಇದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಪ್ರಕರಣದಲ್ಲಿ ಶಿವಮೂರ್ತಿ ನಾಯ್ಕ ಹೆಸರನ್ನು ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದರು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸುಳ್ಳು ದಾಖಲೆಗಳಿಗೆ ಸಹಕರಿಸಿರುವ ಆವರಗೆರೆ ಗ್ರಾಮ ಪಂಚಾಯತ್, ಮಹಾನಗರ ಪಾಲಿಕೆಯ ಸಂಬಂಧಿತರನ್ನೂ ಸೇರ್ಪಡಿಸಿ, ಬಂಧಿ ಸಬೇಕು. ಇಲ್ಲವಾದಲ್ಲಿ
ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು. ಸಮಿತಿಯ ಪರಮೇಶ, ಎಲ್.ಪರಮೇಶ್ವರ
ನಾಯ್ಕ, ಪೀರ್ಯಾನಾಯ್ಕ ಸುದ್ದಿಗೋಷ್ಠಿಯಲ್ಲಿ ಇದ್ದರು.