Advertisement

Government Data: ರಸ್ತೆ ಅಪಘಾತದಲ್ಲಿ ಸಾವು: ಕರ್ನಾಟಕಕ್ಕೆ 5ನೇ ಸ್ಥಾನ!

12:45 AM Oct 21, 2024 | Team Udayavani |

ಹೊಸದಿಲ್ಲಿ: ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಡುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, 2022ರಲ್ಲಿ 1.68 ಲಕ್ಷ ಆಗಿದ್ದ ಮೃತರ ಸಂಖ್ಯೆ 2023ರಲ್ಲಿ 1.73 ಲಕ್ಷಕ್ಕೆ ಏರಿಕೆಯಾಗಿದೆ.

Advertisement

ಈ ಪೈಕಿ ಅತೀಹೆಚ್ಚು ಸಾವು ಸಂಭವಿಸಿದ ರಾಜ್ಯಗಳಲ್ಲಿ ಕರ್ನಾಟಕ ಅಗ್ರ 5ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಸರಕಾರದ ದತ್ತಾಂಶಗಳು ಬಹಿರಂಗ ಪಡಿಸಿವೆ. ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ದತ್ತಾಂಶ ಸಂಗ್ರಹ ಆರಂಭಿಸಿದ ಬಳಿಕ ದಾಖಲಾದ ಅತೀಹೆಚ್ಚು ಮೃತರ ಸಂಖ್ಯೆಯೂ 2023ರದ್ದೇ ಆಗಿದೆ.

ವರದಿಗಳ ಪ್ರಕಾರ, ಪ್ರತೀ 3 ನಿಮಿಷಕ್ಕೆ ಒಬ್ಬರಂತೆ ಅಥವಾ ದಿನಕ್ಕೆ 474 ಮಂದಿಯಂತೆ 2023ರಲ್ಲಿ ಒಟ್ಟು 1.73 ಲಕ್ಷ ಮಂದಿ ಮೃತರಾಗಿದ್ದಾರೆ. ಈ ಪೈಕಿ ಉತ್ತರ ಪ್ರದೇಶದಲ್ಲೇ 23,652 ಮಂದಿ ಮೃತಪಟ್ಟಿದ್ದು, ಇದು ಅತೀ ಹೆಚ್ಚು ಸಾವು ಗಳನ್ನು ದಾಖಲಿಸಿದ ರಾಜ್ಯವಾಗಿದೆ.

ನಂತರದಲ್ಲಿ ತ.ನಾಡಿನಲ್ಲಿ 18,347, ಮಹಾರಾಷ್ಟ್ರ 15,366., ಮಧ್ಯಪ್ರದೇಶ 13798., ಕರ್ನಾಟಕದಲ್ಲಿ 12,321 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ 76,000 ಮಂದಿ ದ್ವಿಚಕ್ರ ವಾಹನ ಸವಾರ ರಾಗಿದ್ದು, ಇವರಲ್ಲಿ ಶೇ.70 ಮಂದಿ ಹೆಲ್ಮೆಟ್‌ ಧರಿಸಿರಲಿಲ್ಲ. ಗಾಯಾಳುಗಳ ಸಂಖ್ಯೆಯೂ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next