Advertisement

Mobile Industry: ಮೊಬೈಲ್‌ ಫೋನ್‌ ಗಳ ಬಿಡಿ ಭಾಗಗಳ ಆಮದು ಸುಂಕ ಶೇ.10ರಷ್ಟು ಇಳಿಕೆ

12:03 PM Jan 31, 2024 | Team Udayavani |

ನವದೆಹಲಿ: ಮೊಬೈಲ್‌ ಫೋನ್‌ ಉತ್ಪಾದನೆಯಲ್ಲಿ ಉಪಯೋಗಿಸಲಾಗುವ ಬಿಡಿ ಭಾಗಗಳ ಆಮದು ಸುಂಕವನ್ನು ಕಡಿತಗೊಳಿಸಲು ಭಾರತ ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Toshakhana case: ಇಮ್ರಾನ್ ಖಾನ್, ಪತ್ನಿ ಬುಶ್ರಾ ಬೀಬಿಗೆ 14 ವರ್ಷಗಳ ಜೈಲು ಶಿಕ್ಷೆ

ವಿತ್ತ ಸಚಿವಾಲಯ ಮಂಗಳವಾರ ಹೊರಡಿಸಿದ್ದ ಪ್ರಕಟನೆಯಲ್ಲಿ ಮೊಬೈಲ್‌ ಫೋನ್‌ ಗಳ ಬಿಡಿ ಭಾಗದ ಆಮದು ಸುಂಕವನ್ನು ಶೇ.15ರಿಂದ 10ಕ್ಕೆ ಇಳಿಕೆ ಮಾಡಿರುವುದಾಗಿ ಘೋಷಿಸಿತ್ತು. ಏಷ್ಯಾದ ಮೂರನೇ ಅತೀ ದೊಡ್ಡ ಆರ್ಥಕತೆ ಹೊಂದಿರುವ ಭಾರತದ ರಫ್ತು ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವರದಿ ವಿವರಿಸಿದೆ.

ಪರಿಷ್ಕೃತ ಆಮದು ಸುಂಕದ ಬೆಲೆ ಎಲ್ಲಾ ಮೊಬೈಲ್‌ ಫೋನ್‌ ಗಳ ಬಿಡಿ ಭಾಗಗಳಿಗೆ ಅನ್ವಯಿಸಲಿದೆ. ಇದರಲ್ಲಿ ಮೊಬೈಲ್‌ ಫೋನ್‌ ಗಳ ಬ್ಯಾಟರಿ ಕವರ್ಸ್ಸ್‌, ಮೈನ್‌ ಲೆನ್ಸಸ್‌, ಬ್ಯಾಕ್‌ ಕವರ್ಸ್ಸ್‌ ಮತ್ತು ಇತರ ಪ್ಯಾಸ್ಟಿಕ್‌ ಮತ್ತು ಮೆಟಲ್‌ ಭಾಗಗಳು ಸೇರಿವೆ.

ದುಬಾರಿ ಮೊಬೈಲ್‌ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುವ ಬಿಡಿ ಭಾಗಗಳ ಬೆಲೆಯನ್ನು ಇಳಿಕೆ ಮಾಡುವ ಬಗ್ಗೆ ಭಾರತ ಈ ಮೊದಲು ಮುನ್ಸೂಚನೆ ನೀಡಿತ್ತು.

Advertisement

ಆಮದು ಸುಂಕ ಇಳಿಕೆಯಿಂದಾಗಿ ಮೊಬೈಲ್‌ ಫೋನ್‌ ತಯಾರಿಕಾ ಕಂಪನಿಗಳಿಗೆ ಹೆಚ್ಚಿನ ಲಾಭವಾಗಲಿದ್ದು, ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ವಹಿವಾಟಿಗೆ ನೆರವಾಗಲಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next