ಈಶ್ವರಮಂಗಲ: ಪುತ್ತೂರಿನಿಂದ ಈಶ್ವರಮಂಗಲ ಕಡೆಗೆ ಹೋಗುತ್ತಿದ್ದ ಸರಕಾರಿ ಬಸ್ಸೊಂದು ಈಶ್ವರಮಂಗಲದ ಸಮೀಪ ಸಾಂತ್ಯ ಎಂಬಲ್ಲಿ ಚಾಲಕ ನಿಯಂತ್ರಣ ತಪ್ಪಿ ಮನೆಯೊಂದರ ಮೇಲ್ಚಾವಣಿ ಮೇಲೆ ಬಿದ್ದ ಘಟನೆ ಬುಧವಾರ ನಡೆದಿದೆ.
ಘಟನೆಯಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಅಲ್ಪ ಸ್ವಲ್ಪ ಗಾಯವಾಗಿದೆ. ಉಳಿದಂತೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಈಶ್ವರಮಂಗಲದ ಸಾಂತ್ಯ ಎಂಬಲ್ಲಿನ ತಿರುವಿನಲ್ಲಿ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರಣ ಬಸ್ ಉರುಳಿ ಬಿದ್ದಿದೆ. ಸುಮಾರು 20 ಅಡಿಯಷ್ಟು ಕೆಳಗಿರುವ ಮನೆಯ ಕೊಟ್ಟಿಗೆಯ ಛಾವಣಿಯ ಮೇಲೆ ಸರಕಾರಿ ಬಸ್ ಉರುಳಿ ಬಿದ್ದಿದೆ.
ಬಸ್ ಉರುಳಿ ಬಿದ್ದ ಜಾಗದಲ್ಲಿ ಮನೆಮಂದಿ ಯಾರೂ ಇರದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಕೋವಿಡ್ ಕಳವಳದ ಕಾರಣ ಬಸ್ ನಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇರಲಿಲ್ಲ ಎನ್ನಲಾಗಿದೆ.
ಸದ್ಯ ಬಸ್ ಮೇಲೆತ್ತುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.