Advertisement

ಉದ್ಘಾಟನೆ, ಕಾರ್ಯಾರಂಭಕ್ಕೆ ಕಾಯುತ್ತಿವೆ ಸರಕಾರಿ ಕಟ್ಟಡಗಳು!

11:48 PM Feb 12, 2020 | Sriram |

ಮಹಾನಗರ: ನಗರ ವ್ಯಾಪ್ತಿಯಲ್ಲಿ ವಿವಿಧ ಅನುದಾನಗಳಲ್ಲಿ ನಿರ್ಮಿಸಿದ ಹಲವು ಸರಕಾರಿ ಸಂಬಂಧಿತ ಕಟ್ಟಡಗಳು ರಚನೆಯಾಗಿ ಹಲವು ತಿಂಗಳುಗಳು ಕಳೆದಿದ್ದರೂ ಉದ್ಘಾಟನೆ ಭಾಗ್ಯ ಮಾತ್ರ ಅವುಗಳಿಗೆ ದೊರೆತಿಲ್ಲ!

Advertisement

ಪುರಭವನ ಮುಂಭಾಗ ಮಂಗಳೂರು ತಾಲೂಕು ಪಂಚಾಯತ್‌ ಕಟ್ಟಡ ಬುಧವಾರ ಉದ್ಘಾಟನೆಯಾಗುವ ಮೂಲಕ ಒಂದು ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ದೊರಕಿದಂತಾಗಿದೆ. ಇದು ಬಿಟ್ಟರೆ ಉಳಿದ ಕೆಲವು ಕಟ್ಟಡಗಳು ಉದ್ಘಾಟನೆಯ ನಿರೀಕ್ಷೆಯಲ್ಲೇ ಬಾಕಿ ಆಗಿವೆ.

ಸ್ಮಾರ್ಟ್‌ಸಿಟಿ ಯೋಜನೆಯಡಿ ಪೂರ್ಣ ಗೊಂಡ ಮಂಗಳೂರಿನ ಏಕಮೇವ ಯೋಜನೆ ಕ್ಲಾಕ್‌ ಟವರ್‌ ಇನ್ನೂ ಕೂಡ ಉದ್ಘಾಟನೆಯ ಭಾಗ್ಯ ಕಂಡಿಲ್ಲ. 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕ್ಲಾಕ್‌ ಟವರ್‌ಗೆ ಇತ್ತಿಚೆಗಷ್ಟೇ ಗಡಿಯಾರಗಳನ್ನು ಜೋಡಣೆ ಮಾಡಲಾಗಿದ್ದು, ಗಂಟೆ ಚಾಲನೆಯಲ್ಲಿದೆ. ಆದರೆ ಅಧಿಕೃತ ಉದ್ಘಾಟನೆಗೆ ದಿನಾಂಕ ಮಾತ್ರ ಇನ್ನೂ ನಿಗದಿಯಾಗಿಲ್ಲ!

ಉರ್ವಸ್ಟೋರ್‌ ಅಂಗಡಿಗುಡ್ಡೆಯಲ್ಲಿ ದ.ಕ. ಜಿಲ್ಲಾ ಮಟ್ಟದ ಅಂಬೇಡ್ಕರ್‌ ಭವನ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾ ಟನೆ ಮಾತ್ರ ಆಗಿಲ್ಲ. 17.82 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ರೀತಿಯಲ್ಲಿ ಈ ಭವ್ಯ ಕಟ್ಟಡ ನಿರ್ಮಾಣಗೊಂಡಿದೆ. 2012-13ರಲ್ಲಿ ಮಂಜೂರಾದ ಭವನಕ್ಕೆ ನಾಲ್ಕು ವರ್ಷಗಳ ಬಳಿಕ 2017ರಲ್ಲಿ ಶಂಕು ಸ್ಥಾಪನೆ ನಡೆಸಲಾಗಿತ್ತು. ಭವನ ನಿರ್ಮಾಣಕ್ಕೆ 17.82 ಕೋಟಿ ರೂ. ವೆಚ್ಚವಾಗಿದೆ. ಸರಕಾರ 12 ಕೋಟಿ ರೂ. ಹಾಗೂ ಮಂಗಳೂರು ಪಾಲಿಕೆ 2.50 ಕೋಟಿ ರೂ. ಅನುದಾನ ಒದಗಿಸಿತ್ತು.

ಉರ್ವದಲ್ಲಿ ಮಾರುಕಟ್ಟೆ 12.62 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿದೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ನಿಧಿಯಿಂದ 8.33 ಕೋಟಿ ರೂ. ಹಾಗೂ ಬ್ಯಾಂಕ್‌ ಸಾಲದ ಮೂಲಕ 4.30 ಕೋಟಿ ರೂ. ಭರಿಸಲಾಗಿದೆ. ಈ ಸಂಕೀರ್ಣ ದಲ್ಲಿ ಮೀನು ಮಾರಾಟದ 31 ಸ್ಟಾಲ್‌ಗ‌ಳು, ಕೋಳಿ ಮಾಂಸದ 8, ಇತರ 68 ಸ್ಟಾಲ್‌ಗ‌ಳಿವೆ. ಕಚೇರಿಗಳಿಗೆ ಅನು ಕೂಲ ವಾಗುವಂತೆ 15 ಕೊಠಡಿಗಳಿವೆ.
ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಕೂಡಲೇ ಹಿರಿಯ ಪೊಲೀಸ್‌ ಅಧಿಕಾರಿಗೆ ಕರೆ ಮಾಡಿ ಸ್ಮಾರ್ಟ್‌ ಸಿಟಿ ಸಭೆಯಲ್ಲಿ ಯಾರೇ ಪೊಲೀಸ್‌ ಅಧಿಕಾರಿ ಹಾಜರಿಲ್ಲದಿರುವ ಬಗ್ಗೆ ತಿಳಿಸಿದರು. ಬಳಿಕ 10 ನಿಮಿಷದೊಳಗೆ ಟ್ರಾಫಿಕ್‌ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ಅವರು ಸಭೆಗೆ ಆಗಮಿಸಿದರು.

Advertisement

ಸ್ಮಾರ್ಟ್‌ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಪೊಲೀಸ್‌ ಇಲಾಖೆಯಿಂದ ಅನುಮತಿ ನೀಡಲಾಗುತ್ತಿಲ್ಲ ಎಂಬ ಆರೋಪದ ಬಗ್ಗೆ ಜಿಲ್ಲಾಧಿಕಾರಿಗಳು ಎಸಿಪಿ ಮಂಜುನಾಥ ಶೆಟ್ಟಿ ಅವರ ಗಮನಕ್ಕೆ ತಂದರು. ತುರ್ತು ನೆಲೆಯಲ್ಲಿ ಆಗ ಬೇಕಾಗಿರುವ ಸ್ಮಾರ್ಟ್‌ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದು ಎಸಿಪಿ ತಿಳಿಸಿದರು. ಈ ಬಗ್ಗೆ ಕಾಮಗಾರಿಯ ವಿವರಗಳೊಂದಿಗೆ ಡಿಸಿಪಿ ಜತೆ ಚರ್ಚಿಸುವಂತೆ ಸಂಬಂಧ ಪಟ್ಟ ಕಾರ್ಯ ನಿರ್ವಾಹಕ ಎಂಜಿನಿಯರುಗಳನ್ನು ವಿನಂತಿಸಿದರು.

ಕೂಳೂರು ಸೇತುವೆ ದುರಸ್ತಿ
ಶಿಥಿಲಗೊಂಡಿರುವ ಕೂಳೂರು ಸೇತುವೆಯ ದುರಸ್ತಿ ಕಾಮಗಾರಿಯ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ರಸ್ತೆ ದುರಸ್ತಿ ಸಂದರ್ಭ ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆ ವ್ಯವಸ್ಥೆ ಕುರಿತಂತೆ ಪೊಲೀಸ್‌ ಇಲಾಖೆಯಿಂದ ಅಧಿಸೂಚನೆ ಹೊರಡಿಸ ಬೇಕಾಗಿದೆ. ಈ ಬಗ್ಗೆ ಪೊಲೀಸ್‌ ಆಯುಕ್ತರಿಗೆ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪಂಪ್‌ವೆಲ್‌ ಬಸ್‌ ನಿಲ್ದಾಣ
ಪಂಪ್‌ವೆಲ್‌ ಬಸ್‌ ನಿಲ್ದಾಣ, ಅದಕ್ಕೆ ಸಂಬಂಧಿಸಿದ ಅಂಡರ್‌ಪಾಸ್‌, ಸರ್ವಿಸ್‌ ರಸ್ತೆ ನಿರ್ಮಾಣದ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಸರಕಾರದ ಅನುಮತಿ ಶೀಘ್ರ ಲಭಿಸಿ ಕಾಮಗಾರಿ ಆರಂಭಿಸುವ ನೀರೀಕ್ಷೆಯನ್ನು ಹೊಂದಲಾಗಿದೆ ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಮೊಹಮದ್‌ ನಝೀರ್‌ ತಿಳಿಸಿದರು.

ಉದ್ಘಾಟನೆಯಾದರೂ ಕಾರ್ಯಾರಂಭಿಸಿಲ್ಲ
ಈ ಮಧ್ಯೆ ಉದ್ಘಾಟನೆಯಾದರೂ ಕೆಲವು ಕಟ್ಟಡಗಳು ಇನ್ನೂ ಕಾರ್ಯಾರಂಭ ಮಾಡಲು ಆಗಿಲ್ಲ ಎಂಬುದು ಮತ್ತೂಂದು ವಿಶೇಷ. ಉರ್ವ ಹಾಗೂ ಕಾವೂರು ಮಾರುಕಟ್ಟೆ ಉದ್ಘಾಟನೆಗೊಂಡರೂ ಇನ್ನೂ ಕಾರ್ಯಾರಂಭವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next