ನವದೆಹಲಿ:ಬೆಟ್ಟಿಂಗ್, ಜೂಜು ಮತ್ತು ಅನಧಿಕೃತ ಸಾಲ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದ ಚೀನ ಸೇರಿದಂತೆ ಬೇರೆ ಬೇರೆ ದೇಶಗಳ ಒಟ್ಟು 232 ಆ್ಯಪ್‌ಗ ಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ.
ಕೇಂದ್ರ ಗೃಹ ಇಲಾಖೆಯ ಸೂಚನೆಯ ಮೇರೆಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಈ ಅಪ್ಲಿಕೇಷನ್‌ಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಬೆಟ್ಟಿಂಗ್, ಜೂಜು ಮತ್ತು ಹಣಕಾಸು ಅಕ್ರಮ ವರ್ಗಾವಣೆಯಲ್ಲಿ ತೊಡಗಿದ್ದ 138 ಆ್ಯಪ್‌ಗಳನ್ನು ಬ್ಲಾಕ್ ಮಾಡುವಂತೆ ಶನಿವಾರ ರಾತ್ರಿ ಆದೇಶ ಹೊರಬಿದ್ದಿತ್ತು. ಭಾನುವಾರ ಬೆಳಗ್ಗೆ, ಅನಧಿಕೃತವಾಗಿ ಸಾಲ ಒದಗಿಸುತ್ತಿರುವ 94 ಆ್ಯಪ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಲಾಕ್ ಆಗಿರುವ ಆ್ಯಪ್‌ಗಳು ಚೀನ ಸೇರಿದಂತೆ ವಿದೇಶಗಳಿಂದ ನಿರ್ವಹಿಸಲ್ಪಡುತ್ತಿದ್ದವು. ಅಲ್ಲದೇ, ಅವುಗಳು ಭಾರತದ ಆರ್ಥಿಕ ಸ್ಥಿರತೆಗೆ ಅಪಾಯ ಉಂಟುಮಾಡುತ್ತಿದ್ದವು ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಬ್ಲಾಕ್ ಆಗಿರುವ ಆ್ಯಪ್‌ಗಳು ಯಾವುವು ಎಂಬ ಮಾಹಿತಿ ಹೊರಬಿದ್ದಿಲ್ಲ.