ದೇಶವನ್ನು ಕಂಗೆಡೆಸಿರುವ ಕೊರೊನಾ ಮಹಾಮಾರಿಯಿಂದಾಗಿ ಹೆತ್ತ ವರನ್ನು ಕಳೆದುಕೊಂಡು ಅನಾಥವಾಗಿರುವ ಮಕ್ಕಳ ರಕ್ಷಣೆ, ಪೋಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವು ಯೋಜನೆಗಳನ್ನು ಘೋಷಿಸಿ ರುವುದು ನಿಜಕ್ಕೂ ಸ್ತುತ್ಯಾರ್ಹ. ಈ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರಕಾರ ಕೆಲವೊಂದು ಮಹತ್ವಪೂರ್ಣವಾದ ಉಪಕ್ರಮಗಳನ್ನು ಪ್ರಕಟಿ ಸುವ ಮೂಲಕ ತಮ್ಮ ಬದ್ಧತೆಯನ್ನು ಪ್ರದರ್ಶಿಸಿವೆ.
ಕೊರೊನಾದಿಂದ ತಬ್ಬಲಿಯಾದ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವುದಾಗಿ ಕೇಂದ್ರ ಸರಕಾರ ಘೋಷಿಸಿದೆ. 10 ವರ್ಷಕ್ಕಿಂತ ಕೆಳ ಹರೆ ಯದ ಮಕ್ಕಳನ್ನು ಸಮೀಪದ ಕೇಂದ್ರೀಯ ವಿದ್ಯಾಲಯ ಅಥವಾ ಖಾಸಗಿ ಶಾಲೆಗಳಿಗೆ ದಾಖಲಿಸಲಾಗುವುದು. 11-18 ವರ್ಷ ವಯೋಮಿತಿಯ ವಿದ್ಯಾರ್ಥಿ ಗಳಿಗೆ ಕೇಂದ್ರ ಸರಕಾರದ ವಸತಿಸಹಿತ ಸೈನಿಕ ಶಾಲೆ ಅಥವಾ ನವೋದಯ ಶಾಲೆಗಳಲ್ಲಿ ಪ್ರವೇಶ ನೀಡಲಾಗುವುದು. ಇನ್ನು ಈ ಮಕ್ಕ ಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸಿದಲ್ಲಿ ನಿಗದಿತ ಶುಲ್ಕವನ್ನು ಪಿಎಂ ಕೇರ್ಸ್ ನಿಧಿಯಿಂದ ಭರಿಸಲಾಗುವುದು. ಪದವಿಪೂರ್ವ ಮತ್ತು ವೃತ್ತಿಪರ ಕೋರ್ಸ್ ಗಳ ಶುಲ್ಕಕ್ಕೆ ಸಮಾನವಾದ ವಿದ್ಯಾರ್ಥಿ ವೇತನವನ್ನು ಪಿಎಂ ಕೇರ್ಸ್ ನಿಧಿಯಿಂದ ನೀಡಲಾಗುವುದು. ಜತೆಗೆ ಈ ಮಕ್ಕಳ ಹೆಸರಿನಲ್ಲಿ ಸರಕಾರ ನಿಶ್ಚಿತ ಠೇವಣಿ ಇರಿಸಲಿದ್ದು 18 ವರ್ಷ ತುಂಬುವವರೆಗೆ ವಾರ್ಷಿಕ 5 ಲ. ರೂ. ಆರೋಗ್ಯ ವಿಮೆ, 18 ವರ್ಷ ತುಂಬಿದ ಬಳಿಕ ಪ್ರತೀ ತಿಂಗಳು ಆರ್ಥಿಕ ನೆರವು, 23 ವರ್ಷ ತುಂಬಿದ ಬಳಿಕ ಏಕಗಂಟಿನಲ್ಲಿ 10 ಲ. ರೂ. ನೀಡಲಾಗುವುದು ಎಂದು ಕೇಂದ್ರ ಸರಕಾರ ಪ್ರಕಟಿಸಿದೆ.
ಇದೇ ವೇಳೆ ರಾಜ್ಯ ಸರಕಾರವೂ ಇಂತಹ ಮಕ್ಕಳಿಗಾಗಿ ಬಾಲಸೇವಾ ಯೋಜನೆಯನ್ನು ಪ್ರಕಟಿಸಿದ್ದು ಮಾಸಿಕ 3,500 ರೂ. ಸಹಾಯಧನವನ್ನು ನೀಡಲಿದೆ. ಹೆತ್ತವರನ್ನು ಕಳೆದುಕೊಂಡಿರುವ ಮಕ್ಕಳಿಗೆ ಯಾವುದೇ ಹೆತ್ತವರು ಇಲ್ಲದಿದ್ದಲ್ಲಿ ಅಂಥವರನ್ನು ನೋಂದಾಯಿತ ಮಕ್ಕಳ ಪಾಲನ ಸಂಸ್ಥೆ ಗಳಿಗೆ ದಾಖಲಿಸಿ ಆರೈಕೆ ಮಾಡಲಾಗುವುದು. ಈ ಮಕ್ಕಳಿಗೆ ವಸತಿ ಶಾಲೆ ಗಳಲ್ಲಿ ಉಚಿತ ಶಿಕ್ಷಣ, 10ನೇ ತರಗತಿ ತೇರ್ಗಡೆಯಾದವರಿ ಗೆ ಉನ್ನತ ವ್ಯಾಸಂಗ ಅಥವಾ ಕೌಶಲ ಅಭಿವೃದ್ಧಿಗೆ ಲ್ಯಾಪ್‌ಟಾಪ್ ಅಥವಾ ಟ್ಯಾಬ್, 21 ವರ್ಷ ಪೂರೈಸಿರುವ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ, ವಿವಾ ಹ, ಸ್ವಯಂ ಉದ್ಯೋಗಕ್ಕೆ 1 ಲಕ್ಷ ರೂ. ಸಹಾಯಧನ ನೀಡಲಾಗು ವುದು. ಅನಾಥ ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಅಥವಾ ಹಿತೈಷಿಯನ್ನು ಒದ ಗಿಸಿ ಅವರ ಮೂಲಕ ಮಾರ್ಗದರ್ಶನ ನೀಡುವ ಉಪ ಕ್ರಮಗಳು ಇದರಲ್ಲಿ ಸೇರಿವೆ.
ಕೊರೊನಾದಿಂದಾಗಿ ಹೆತ್ತವರನ್ನು ಕಳೆದುಕೊಂಡು ಅತಂತ್ರದ ಭೀತಿ ಎದುರಿಸುತ್ತಿದ್ದ ಅನಾಥ ಮಕ್ಕಳು ನಿಜವಾಗಿಯೂ ಆಸರೆಯ ನಿರೀಕ್ಷೆಯ ಲ್ಲಿದ್ದವು. ಇಂಥ ಸ್ಥಿತಿಯಲ್ಲಿ ಸರಕಾರಗಳು ಈ ಮಕ್ಕಳ ರಕ್ಷಣೆಗೆ ಮುಂದಾ ಗಿ ರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಸದ್ಯದ ಅಂದಾಜಿನ ಪ್ರಕಾರ ಕೊರೊನಾದಿಂದಾಗಿ ದೇಶದಲ್ಲಿ 577 ಮಕ್ಕಳು ಮತ್ತು ರಾಜ್ಯದಲ್ಲಿ 13 ಮಕ್ಕಳು ತಬ್ಬಲಿಗಳಾಗಿವೆ. ಕೊರೊನಾ ಸೋಂಕಿ ನಿಂದಾಗಿ ಅನಾಥ ರಾಗಿ ರುವ ಮಕ್ಕಳ ಬಗೆಗೆ ಸರಕಾರ ಸಮರ್ಪಕ ಮಾಹಿತಿಗಳನ್ನು ಕಲೆಹಾಕಿ ಇದೀಗ ಘೋಷಿಸಲಾಗಿರುವ ಆರ್ಥಿಕ ಮತ್ತು ಶೈಕ್ಷಣಿಕ ನೆರವು ಅವರನ್ನು ತಲು ಪುವಂತೆ ಮಾಡಬೇಕಿದೆ. ಅಷ್ಟು ಮಾತ್ರವಲ್ಲದೆ ಈ ಯೋಜನೆಗಳ ಪ್ರಯೋ ಜನವನ್ನು ಅನ್ಯರು ಪಡೆಯದಂತೆ ಮತ್ತು ಈ ಹಣವನ್ನು ಕೊಳ್ಳೆಹೊಡೆ ಯುವ ಉದ್ದೇಶದಿಂದ ಯಾರೂ ಅನಾಥ ಮಕ್ಕಳ ಶೋಷಣೆ ನಡೆಸದಂತೆ ಕಟ್ಟುನಿಟ್ಟಿನ ನಿಗಾ ಇರಿಸಬೇಕಾದ ಹೊಣೆಗಾರಿಕೆ ಕೂಡ ಸರಕಾರ ಮತ್ತು ಸಮಾಜದ ಮೇಲಿದೆ.