ತೀರ್ಥಹಳ್ಳಿ : ಕರ್ನಾಟಕ ರಕ್ಷಣಾ ವೇದಿಕೆ ಪ್ರಾರಂಭವಾಗಿ 25 ವರ್ಷಗಳು ಆಗಿದೆ. ಈ 25 ವರ್ಷದಲ್ಲಿ ಗಡಿ, ನೆಲ, ನಾಡು ನುಡಿ ಭಾಷೆಗಾಗಿ ಸೈನಿಕರ ರೀತಿ ಕೇಸ್ ಹಾಕಿಸಿಕೊಂಡು ಕೆಲಸ ಮಾಡಿಕೊಂಡು ಬಂದಿದ್ದೇವೆ.
ಆದರೆ ಈಗ ರಾಜ್ಯದಲ್ಲಿ ಆಂಗ್ಲ ನಾಮಫಲಕಕ್ಕಾಗಿ ಹೋರಾಟದ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಾರಾಯಣ ಗೌಡರನ್ನು ಸರ್ಕಾರ ಬಂಧಿಸಿರುವುದು ಖಂಡನೀಯ. ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ವೆಂಕಟೇಶ್ ಹೆಗ್ಡೆ ಹೇಳಿದರು.
ಡಿ. 29ರ ಶುಕ್ರವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಪ್ರತಿಯೊಂದು ಅಂಗಡಿ ಮುಂಗಟ್ಟು ಹಾಗೂ ಮಾಲ್ ಗಳಲ್ಲಿ ಕನ್ನಡದ ನಾಮಫಲಕದ ಬದಲು ಆಂಗ್ಲ ಹಾಗೂ ಇನ್ನಿತರ ಭಾಷೆ ನಾಮಫಲಕವನ್ನು ಹಾಕಲಾಗಿದೆ. ಹಾಗಾಗಿ ಕನ್ನಡವನ್ನು ಮೊದಲು ಬಳಸಬೇಕು. ಮೊದಲ ಆದ್ಯತೆ ಕನ್ನಡ ಭಾಷೆಗೆ ಇರಬೇಕು ಎಂಬ ಕಾರಣಕ್ಕೆ ಈ ಹೋರಾಟ ಆರಂಭಿಸಿದ್ದೇವೆ. ಇದರಲ್ಲಿ ಗೆಲುವು ಕೂಡ ಕಂಡುಕೊಳ್ಳುತ್ತೇವೆ ಎಂದು ಭರವಸೆಯಲ್ಲಿ ಹೇಳಿದರು.
ಆಂಗ್ಲ ಅಥವಾ ಬೇರೆ ಭಾಷೆಯನ್ನು ವಿರೋಧ ಮಾಡುತ್ತಿಲ್ಲ. ಅದರ ಬದಲು ಕನ್ನಡಕ್ಕೆ 60% ಉಳಿದ ಭಾಷೆ 40% ಇರುವಂತೆ ನಾಮಫಲಕ ಹಾಕಬೇಕು. ಈಗಾಗಲೇ ಮುಖ್ಯಮಂತ್ರಿಗಳು ಕೂಡ ಆದೇಶ ನೀಡಿದ್ದಾರೆ. ಹಾಗಾಗಿ ತೀರ್ಥಹಳ್ಳಿಯಲ್ಲಿ ತಹಶೀಲ್ದಾರ್ ಮತ್ತು ಪುರಸಭೆಯವರು ಒಂದು ವಾರದ ಒಳಗೆ ಸರಿಪಡಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೇಗರವಳ್ಳಿ ವೆಂಕಟೇಶ್ ಹೆಗ್ಡೆ ತಾಲೂಕು ಕರವೇ ಅಧ್ಯಕ್ಷರಾದ ಸುರೇಂದ್ರ ಯಡೂರು,ಡಾಕಮ್ಮ ,ಶ್ರೀಕಾಂತ್ ಬೆಟ್ಟಮಕ್ಕಿ, ಜ್ಯೋತಿ ದೀಲಿಪ್, ಬೆಟ್ಟಮಕ್ಕಿ ವಿಕ್ರಮ್, ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.