Advertisement
ಚಿಂತಾಮಣಿ ನಗರದಿಂದ 13 ಕಿ.ಮೀ ದೂರ ದಲ್ಲಿರುವ ಭಕ್ತರಹಳ್ಳಿ ಅರಸೀಕೆರೆ ಸಣ್ಣ ನೀರಾ ವರಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಕೆರೆಯಿಂದ ಚಿಂತಾಮಣಿ ನಗರಕ್ಕೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸಿದ್ಧಪಡಿಸಿದ್ದ ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಯೋಜನೆ ಅನುಷ್ಠಾನಕ್ಕೆ ತಗು ಲುವ 10.59 ಕೋಟಿ ರೂ. ಅನುದಾನ ಬಿಡು ಗಡೆಗೂ ಸಹ ಆಡಳಿತಾತ್ಮ ಅನುಮೋದನೆ ಕೊಟ್ಟಿದೆ.
Related Articles
Advertisement
ಇದೀಗ ಭಕ್ತರಹಳ್ಳಿ ಅರಸೀಕೆರೆಯಿಂದ ಚಿಂತಾ ಮಣಿ ನಗರಕ್ಕೆ ನೀರು ಸರಬರಾಜು ಮಾಡಲು ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸಲ್ಲಿಸಿದ್ದ ಸಮಗ್ರ ಯೋಜನಾ ವರದಿಗೆ ಸರ್ಕಾರ ಅನುಮೋದನೆ ನೀಡಿರುವುದರ ಜೊತೆಗೆ ಕಾಮಗಾರಿಗೆ ತಗ ಲುವ 10.59 ಕೋಟಿ ರೂ. ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಮೂಲಕ ಚಿಂತಾ ಮಣಿ ನಗರದ ಜನರ ಬಹುದಿನಗಳ ಕನಸಿಗೆ ಸ್ಪಂದಿಸಿದೆ.
ನಗರೋತ್ಥಾನದಡಿ ಅನುದಾನ ಮೀಸಲು: ಈಗಾಗಲೇ ಭಕ್ತರಹಳ್ಳಿ ಅರಸೀಕೆರೆ ಯೋಜನೆ ಯನ್ನು ಅನುಷ್ಠಾನಗೊಳಿಸಲು ನಗರೋತ್ಥಾನ ಮೂರನೇ ಹಂತದಲ್ಲಿ ಚಿಂತಾಮಣಿ ನಗರ ಸಭೆಯು 2.25.00 ಲಕ್ಷಗಳ ಕ್ರಿಯಾ ಯೋಜ ನೆಗೆ ರಾಜ್ಯ ಪೌರಾಡಳಿತ ನಿರ್ದೇಶಕರು ಅನು ಮೋದನೆ ನೀಡಿದ್ದಾರೆ.
ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಮುಖ್ಯ ಅಭಿಯಂತರರು ಜಿಲ್ಲೆಯ ಚಿಂತಾಮಣಿ ನಗರಕ್ಕೆ ಭಕ್ತರಹಳ್ಳಿ, ಅರಸೀಕೆರೆ ಮೂಲದಿಂದ ನೀರು ಸರಬರಾಜು ಮಾಡಲು ಒಟ್ಟು 10.59 ಅಂದಾಜು ಪಟ್ಟಿ ಯನ್ನು ತಾಂತ್ರಿಕವಾಗಿ ಪರಿಶೀಲನೆ ನಡೆಸಿದ್ದರು. ಆದರೆ ರಾಜ್ಯ ಸರ್ಕಾರ 2015-16ನೇ ಸಾಲಿನ ಮಂಡಳಿತ ದರ ಪಟ್ಟಿ, 2016-17ನೇ ಸಾಲಿನ ಲೋಕೋಪಯೋಗಿ ಇಲಾಖೆ ದರಪಟ್ಟಿ ಮತ್ತು ಮಾರುಕಟ್ಟೆ ದರಗಳನ್ನು ಆಧರಿಸಿ ರಾಜ್ಯ ಪೌರಾಡಳಿತ ಸಚಿವರ ಅಧ್ಯಕ್ಷತೆಯಲ್ಲಿ ಕಳೆದ 2017ರ ಅಕ್ಟೋಬರ್ ತಿಂಗಳ 20 ರಂದು ನಡೆದ ಸಭೆಯಲ್ಲಿ 1095.00 ಲಕ್ಷಗಳಿಗೆ ಮಿತಿಗೊಳಿಸಲಾಗಿದೆ. ಯೋಜನಾ ವೆಚ್ಚಕ್ಕಿಂತ ಕಾಮಗಾರಿಗೆ ಹೆಚ್ಚುವರಿಯಾದಲ್ಲಿ ಚಿಂತಾಮಣಿ ನಗರಸಭೆಯೇ ತನ್ನ ಸ್ವಂತ ಅನುದಾನದಲ್ಲಿ ನಿಯಮಾನುಸಾರ ಭರಿಸಬೇಕೆಂದು ರಾಜ್ಯ ಸಚಿವ ಸಂಪುಟ ಸೂಚಿಸಿದೆ.