Advertisement
ಅವರು ಹೆಸ್ಕಾಂದ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘವನ್ನು ಉದ್ಘಾಟಿಸಿ, ಆಮ್ರಕಲ್ಲು ಮಲ್ಲಿಕಾರ್ಜುನ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ಹೈನುಗಾರಿಕೆ ಹಾಗೂ ಸಹಕಾರಿ ಸಂಘದ ಏಳಿಗೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಸದಸ್ಯರು ಹಾಲಿನ ಶುದ್ಧತೆ, ಗುಣಮಟ್ಟಕ್ಕೆ ಆದÂತೆ ನೀಡಬೇಕು. ಹೆಸ್ಕಾಂದ ಸುತ್ತಮುತ್ತಲಿನ ಜನರು ಹಾಲು ಉತ್ಪಾದಕರ ಸಹಕಾರಿ ಸಂಘವನ್ನು ಆರಂಭಿಸುವಂತೆ ಬೇಡಿಕೆ ನೀಡಿದ ಮೇರೆಗೆ ಸಹಕಾರಿ ಸಂಘವನ್ನು ಆರಂಭಿಸಲಾಗಿದೆ. ಸದಸ್ಯರು ಉತ್ತಮ ಗುಣಮಟ್ಟದ ಹಾಲನ್ನು ಒದಗಿಸುವ ಮೂಲಕ ಮಾದರಿ ಸಂಘವಾಗಿ ರೂಪಿಸುವ ಹೊಣೆಗಾರಿಕೆಯಿದೆ ಎಂದರು.
ಈ ಸಂದರ್ಭ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಜಾನಕಿ ಹಂದೆ, ನಿರ್ದೇಶಕರಾದ ಹದ್ದೂರು ರಾಜೀವ ಶೆಟ್ಟಿ, ಅಶೋಕ ಕುಮಾರ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಸತ್ಯನಾರಾಯಣ, ಉಪ ವ್ಯವಸ್ಥಾಪಕ ಅನಿಲ್ ಕುಮಾರ್ ಶೆಟ್ಟಿ, ಬೆಳ್ವೆ ಕ್ಷೇತ್ರ ತಾಲೂಕು ಪಂಚಾಯತ್ ಸದಸ್ಯ ಎಸ್. ಚಂದ್ರಶೇಖರ ಶೆಟ್ಟಿ ಸೂರೊYàಳಿ, ಬೆಳ್ವೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಭಟ್ ಮರೂರು, ಹೆಸ್ಕಾಂದ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಉಪಾಧ್ಯಕ್ಷೆ ಜಯಲಕ್ಷ್ಮೀ, ನಿರ್ದೇಶಕರಾದ ಜ್ಯೋತಿ, ಭಾರತಿ, ಗಿರಿಜಾ, ಸುಮನಾ, ಜಯಂತಿ, ಲಲಿತಾ, ಶೀಲಾವತಿ, ಸರಳಾ, ಜ್ಯೋತಿ ಯು., ರತ್ನಾ, ಕಾರ್ಯದರ್ಶಿ ಸ್ವಾತಿ ಇನ್ನಿತರರು ಉಪಸ್ಥಿತರಿದ್ದರು.ಸವಿತಾ ಸ್ವಾಗತಿಸಿದರು. ವಿಸ್ತರಣಾ ಧಿಕಾರಿ ಉಮೇಶ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾ ವಂದಿಸಿದರು.