Advertisement
ಆದರೆ, ಈ ರಫ್ತು ಪ್ರಕ್ರಿಯೆ ಚೆನ್ನೈ ಬಂದರಿನ ಮೂಲಕವೇ ಅನುಷ್ಠಾನಗೊಳ್ಳಬೇಕು ಎಂದು ಆದೇಶದಲ್ಲಿ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಈರುಳ್ಳಿ ಬೆಲೆ ಗಗನಕ್ಕೇರಿದ್ದ ಹಿನ್ನೆಲೆಯಲ್ಲಿ ಭಾರತದ ಎಲ್ಲ ಜಾತಿಯ ಈರುಳ್ಳಿ ರಫ್ತನ್ನು ಕೇಂದ್ರ ಸರಕಾರ ಕಳೆದ ತಿಂಗಳು ನಿಷೇಧಿಸಿ ಆದೇಶ ಹೊರಡಿಸಿತ್ತು.
ಜಗತ್ತಿನಲ್ಲಿ ಪ್ರತಿ 16 ಸೆಕೆಂಡುಗಳಿಗೆ ಒಂದು ಜೀವವಿಲ್ಲದ ಮತ್ತು ಅರೆ ಜೀವದ ಸ್ಥಿತಿ (ಸ್ಟಿಲ್‌ಬರ್ತ್) ಯಲ್ಲಿರುವ ಮಗು ಜನಿಸುತ್ತಿದೆ. ಇದೇ ಲೆಕ್ಕಾಚಾರವನ್ನು ತೆಗೆದುಕೊಂಡರೆ ಪ್ರತಿ ವರ್ಷ 20 ಲಕ್ಷ ಅಂಥ ಮಕ್ಕಳು ಜನಿಸುತ್ತವೆ ಎಂದು ಯೂನಿಸೆಫ್, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವಬ್ಯಾಂಕ್ ಸಿದ್ಧಗೊಳಿಸಿದ ವರದಿಯಲ್ಲಿ ಉಲ್ಲೇಖೀಸಲಾಗಿದೆ.
Related Articles
Advertisement
ಆದರೆ ನಿಜವಾದ ಸಂಖ್ಯೆಗಳನ್ನು ಗಮನಿಸಿದರೆ 3,40,622 ಜೀವವಿಲ್ಲದ ಮತ್ತು ಅರೆ ಜೀವದ ಸ್ಥಿತಿಯ ಶಿಶುಗಳು ಜನಿಸುತ್ತವೆ. 2019ರ ವರದಿ ಪ್ರಕಾರ, ಪ್ರತಿ 1 ಸಾವಿರ ಶಿಶುಗಳ ಪೈಕಿ ಶೇ.13.9 ಸ್ಟಿಲ್ ಬರ್ತ್ ಶಿಶುಗಳು ಜನಿಸಿವೆ. ನೈಜೀರಿಯಾ, ಪಾಕಿಸ್ತಾನ, ಇಥಿಯೋಪಿಯಾ, ಕಾಂಗೋ, ಚೀನಾಗಳಲ್ಲಿ ಇಂಥ ಶಿಶುಗಳ ಜನನ ಪ್ರಮಾಣ ಇನ್ನೂ ಹೆಚ್ಚಾಗಿಯೇ ಇದೆ.