Advertisement

ಕಾರು ತಯಾರು, ಮಾರಾಟ ಭಾರತದಲ್ಲೇ ಆಗಲಿ

09:35 PM Feb 10, 2022 | Team Udayavani |

ನವದೆಹಲಿ: ಭಾರತ ಪ್ರವೇಶಿಸಲಿರುವ ಟೆಸ್ಲಾ ಕಾರು ಕಂಪನಿಗೆ ನಾವು ಹೃತೂ³ರ್ವಕ ಸ್ವಾಗತ ಬಯಸುತ್ತೇವೆ. ಆದರೆ, ಚೀನದಲ್ಲಿ ಕಾರುಗಳನ್ನು ಉತ್ಪಾದಿಸಿ, ಅವುಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತೇವೆ ಎಂದರೆ ಆ ಪರಿಕಲ್ಪನೆಯನ್ನು ಅರಗಿಸಿಕೊಳ್ಳುವುದು ಕಷ್ಟ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

Advertisement

ಕಳೆದ ತಿಂಗಳು, ಭಾರತದಲ್ಲಿ ಕಾರು ಉತ್ಪಾದನಾ ಘಟಕವನ್ನು ಆರಂಭಿಸುವುದು ಸುಲಭದ ಮಾತಲ್ಲ ಎಂದು ಟೆಸ್ಲಾ ಕಂಪನಿಯ ಮಾಲೀಕ ಎಲಾನ್‌ ಮಸ್ಕ್ ಟ್ವೀಟ್‌ ಮಾಡಿದ್ದರು. ಇದರ ಬೆನ್ನಿಗೇ, ಭಾರತದ ಹಲವಾರು ರಾಜ್ಯಗಳು ಟೆಸ್ಲಾ ಕಂಪನಿಗೆ ತಮ್ಮಲ್ಲೇ ಬಂದು ಘಟಕ ತೆರೆಯುವಂತೆ ಮುಕ್ತ ಆಹ್ವಾನ ನೀಡಿದ್ದವು. ಈ ಹಿನ್ನೆಲೆಯಲ್ಲಿ ಗಡ್ಕರಿ ಮೇಲಿನಂತೆ ತಿಳಿಸಿದ್ದಾರೆ.

ಇದನ್ನೂ ಓದಿ:ಕೋವಿಡ್ ದಿಂದಾಗಿ ವಿದೇಶಗಳಲ್ಲಿ 4,355 ಭಾರತೀಯರ ಸಾವು

“ಜಗತ್ತಿನ ದೊಡ್ಡ ಕಾರು ಬ್ರಾಂಡ್‌ಗಳು ಭಾರತದಲ್ಲಿ ಕಾರು ಉತ್ಪಾದಿಸುತ್ತಿವೆ. ನೀವು (ಟೆಸ್ಲಾ) ಹಾಗೆಯೇ ಮಾಡಿ. ಚೀನಾದಲ್ಲಿ ಉತ್ಪಾದಿಸಿ, ಇಲ್ಲಿ ತಂದು ಮಾರುವುದು ಬೇಡ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next