Advertisement

ಸರಕಾರಿ ಜಾಹೀರಾತು: ಬಾಕಿ ಪಾವತಿ

02:04 AM May 07, 2020 | Sriram |

ಕೋವಿಡ್‌ -19 ಸಂಕಷ್ಟದ ಈ ಸಂದರ್ಭದಲ್ಲಿ ಮುದ್ರಣ ಮಾಧ್ಯಮದ ಕೊಡುಗೆಯನ್ನು ಶ್ಲಾಘಿಸಿರುವ ಮತ್ತು ಸರಕಾರಿ ಜಾಹೀರಾತಿನ ಬಾಕಿ ಮೊತ್ತವನ್ನು ಕೂಡಲೇ ಪಾವತಿಸುವುದಾಗಿ ಘೋಷಿಸಿರುವ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರಿಗೆ ಇಂಡಿಯನ್‌ ನ್ಯೂಸ್‌ ಪೇಪರ್‌ ಸೊಸೈಟಿ (ಐಎನ್‌ಎಸ್‌) ಧನ್ಯವಾದ ಸಲ್ಲಿಸಿದೆ. ಜತೆಗೆ, ಕಷ್ಟಕಾಲದಲ್ಲಿ ಮುದ್ರಣ ಮಾಧ್ಯಮಕ್ಕೆ ಬೆಂಬಲ ಸೂಚಿಸಿರುವ ರೂಪಾಣಿ ಅವರ ನಡೆಯನ್ನು ತನ್ನೆಲ್ಲ ಸದಸ್ಯರ ಪರವಾಗಿ ಶ್ಲಾಘಿಸುತ್ತಿರುವುದಾಗಿ ಐಎನ್‌ಎಸ್‌ ಅಧ್ಯಕ್ಷ ಶೈಲೇಶ್‌ ಗುಪ್ತಾ ಹೇಳಿದ್ದಾರೆ.

Advertisement

ಕೋವಿಡ್‌ -19 ವ್ಯಾಪಿಸಿರುವ ಈ ಸಂದರ್ಭದಲ್ಲಿ ವೃತ್ತಪತ್ರಿಕೆಗಳು ನೀಡುತ್ತಿರುವ ಕೊಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಿಎಂ ರೂಪಾಣಿ ಅವರು, ವೃತ್ತಪತ್ರಿಕೆಗಳು ನೈಜ, ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯ ಮೂಲವಾಗಿವೆ. ಜನ ರನ್ನು ಸುಳ್ಳು ಸುದ್ದಿಗಳಿಂದ ದೂರವಿಡಲು ಮತ್ತು ವಾಸ್ತವ ಚಿತ್ರಣವನ್ನು ಮಾತ್ರ ತೋರಿಸುವ ಕೆಲಸವನ್ನು ಮುದ್ರಣ ಮಾಧ್ಯಮಗಳು ಮಾಡು ತ್ತಿವೆ. ಹೀಗಾಗಿ, 2020ರ ಏಪ್ರಿಲ್‌ ವರೆಗೆ ಪ್ರಕಟ ವಾದ ಸರಕಾರಿ ಜಾಹೀರಾತುಗಳ ಎಷ್ಟು ಮೊತ್ತ ವನ್ನು ಪಾವತಿಸಲು ಬಾಕಿಯಿದೆಯೋ, ಆ ಎಲ್ಲ ಮೊತ್ತವನ್ನೂ ಕೂಡಲೇ ಪಾವತಿಸುವ ಮೂಲಕ ನಮ್ಮ ಸರಕಾರ ಮುದ್ರಣ ಮಾಧ್ಯಮಗಳಿಗೆ ಬೆಂಬಲವಾಗಿ ನಿಲ್ಲಲಿದೆ’ ಎಂದು ಘೋಷಿಸಿದ್ದಾ.

ಮುಖ್ಯಮಂತ್ರಿಗಳ ಈ ಭರವಸೆಯನ್ನು ಸ್ವಾಗತಿಸಿರುವ ಶೈಲೇಶ್‌ ಗುಪ್ತಾ, ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಸುಮಾರು 4,500 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿರುವ ಮುದ್ರಣ ಮಾಧ್ಯಮಗಳಿಗೆ ಗುಜರಾತ್‌ ಸಿಎಂ ಅವರ ಈ ನಿರ್ಧಾರ ಸಮಾಧಾನ ತಂದಿದೆ ಎಂದಿದ್ದಾರೆ.

ಪ್ರಧಾನಿ ಮೋದಿಗೆ ಮನವಿ: ಇದೇ ವೇಳೆ, ಪ್ರಧಾನಿ ಮೋದಿಯವರಿಂದಲೂ ನಾವು ಇದೇ ರೀತಿಯ ಕ್ರಮವನ್ನು ನಿರೀಕ್ಷಿಸುತ್ತೇವೆ ಎಂದೂ ಹೇಳಿರುವ ಗುಪ್ತಾ, ಕಳೆದ ಕೆಲವು ವಾರಗಳಿಂದ ನಾವು ಉತ್ತೇಜನಾ ಪ್ಯಾಕೇಜ್‌ ಘೋಷಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಾ ಬಂದಿದ್ದೇವೆ. ಜತೆಗೆ, ಎಪ್ರಿಲ್‌ ವರೆಗೆ ಬಾಕಿಯಿರುವ ಜಾಹೀರಾತುಗಳ ವೆಚ್ಚವನ್ನು ಪಾವತಿಸಲು ತತ್‌ ಕ್ಷಣವೇ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯ ಸರ್ಕಾರಗಳು, ಸರಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗೂ ಕೇಂದ್ರ ಸರಕಾರಕ್ಕೆ ಕೋರಿಕೆ ಸಲ್ಲಿಸಿದ್ದೇವೆ. ಈ ರೀತಿಯ ಕ್ರಮವು ಮುದ್ರಣ ಮಾಧ್ಯಮ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅದಕ್ಕೆ ಬೆಂಬಲವಾಗಿ ನಿಲ್ಲಲು ಸಹಕಾರಿಯಾಗಲಿದೆ ಎಂದೂ ಹೇಳಿದ್ದಾರೆ.

ಸದ್ಯಕ್ಕೆ ವೃತ್ತಪತ್ರಿಕೆಗಳು ಅತ್ಯಂತ ಕಷ್ಟಕಾಲ ವನ್ನು ಅನುಭವಿಸುತ್ತಿವೆ. ಈ ಕ್ಷೇತ್ರವು ಸುಮಾರು 30 ಲಕ್ಷ ಮಂದಿಗೆ ನೇರವಾಗಿ ಮತ್ತು ಪರೋಕ್ಷ ವಾಗಿ ಉದ್ಯೋಗ ಕಲ್ಪಿಸಿದೆ. ಎಲ್ಲ ರೀತಿಯ ಕಷ್ಟಗಳು, ಸಮಸ್ಯೆಗಳು ಹಾಗೂ ದುಬಾರಿ ವೆಚ್ಚದ ನಡುವೆಯೂ ಪ್ರತಿದಿನ ಬೆಳಗಾಗುವಷ್ಟರಲ್ಲಿ ಓದುಗರಿಗೆ ಪತ್ರಿಕೆ ತಲುಪುವಂತೆ ನೋಡಿಕೊಳ್ಳಲಾ ಗುತ್ತಿದೆ ಎಂದೂ ಗುಪ್ತಾ ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next