Advertisement

ಅಜೆಕಾರು: ಕುಸಿಯುತ್ತಿದ್ದ ಶಾಲೆಯ ಕಟ್ಟಡ ತೆರವುಗೊಳಿಸಲು ಮುಂದಾದ ಶಿಕ್ಷಣ ಇಲಾಖೆ

12:33 AM May 22, 2019 | Team Udayavani |

ಅಜೆಕಾರು: ಅಜೆಕಾರು ಪೇಟೆಯಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ತೆರವುಗೊಳಿಸಲು ಶಿಕ್ಷಣ ಇಲಾಖೆ ಕೊನೆಗೂ ಮುಂದಾಗಿದೆ.

Advertisement

30ವರ್ಷಗಳ ಹಿಂದೆ ಈ ಕಟ್ಟಡದಿಂದ ಶಾಲೆ ಸ್ಥಳಾಂತರಗೊಂಡಿತ್ತು. ಅನಂತರದ ದಿನಗಳಲ್ಲಿ ದುರ್ಬಲಗೊಂಡಿರುವ ಈ ಕಟ್ಟಡವು ಹಂತಹಂತವಾಗಿ ಕುಸಿದು ತೀರಾ ಅಪಾಯಕಾರಿ ಸ್ಥಿತಿಯಲ್ಲಿತ್ತು. ಈ ಬಗ್ಗೆ ಉದಯವಾಣಿ ನಿರಂತರ ಸಚಿತ್ರ ವರದಿ ಪ್ರಕಟಿಸಿತ್ತು. ಇದೀಗ ಶಿಕ್ಷಣ ಇಲಾಖೆ ಕಟ್ಟಡ ತೆರವುಗೊಳಿಸಲು ಮುಂದಾಗಿರುವುದು ಸ್ಥಳೀಯರಲ್ಲಿ ಸಂತಸ ತಂದಿದೆ.

ಈ ಕಟ್ಟಡಕ್ಕೆ ಹೊಂದಿಕೊಂಡಂತೆ ಅಜೆಕಾರು ಅಂಗನವಾಡಿ ಕೇಂದ್ರವಿದ್ದು ಬಹಳಷ್ಟು ಅಪಾಯಕಾರಿಯಾಗಿತ್ತು. ಈ ಬಗ್ಗೆ ಸ್ಥಳೀಯರು ಪ್ರತಿಭಟನೆ ನಡೆಸಿ ಅಂಗನವಾಡಿಗೆ ಮಕ್ಕಳನ್ನು ಕಳುಹಿಸ ದಿರಲು ನಿರ್ಣಯಿಸಿದ್ದರು.

ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಹಾನಿಗೊಂಡು ಮಳೆಯ ನೀರು ಕಟ್ಟಡದ ಮಣ್ಣಿನ ಗೋಡೆಯ ಮೇಲೆ ಬಿದ್ದು ನಿರಂತರ ಕಟ್ಟಡದ ಮಣ್ಣು ಕುಸಿ ಯುತ್ತಿತ್ತು. ಆದರೆ ಈಗ ಶಿಕ್ಷಣ ಇಲಾಖೆ ದುರ್ಬಲ ಕಟ್ಟಡ ತೆರವುಗೊಳಿಸಲು ಮುಂದಾಗಿರುವುದರಿಂದ ಮಳೆಗಾಲದಲ್ಲಿ ಅಂಗನವಾಡಿಗೆ ಸಮಸ್ಯೆ ಎದುರಾಗದು ಎನ್ನುವುದು ಸ್ಥಳೀಯರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next