ರಿಯಾಲಿಟಿ ಶೋಗಳಿಗೆ ಹೊಸ ಖದರು ತಂದುಕೊಟ್ಟಿದ್ದು ಝೀ ಕನ್ನಡದಲ್ಲಿ ಪ್ರಸಾರವಾದ ಡ್ರಾಮಾ ಜ್ಯೂನಿಯರ್ ಕಾರ್ಯಕ್ರಮ. ಆ ಕಾರ್ಯಕ್ರಮದ ಯಶಸ್ಸಿನ ಹಿಂದಿದ್ದ ಟೀಂನಲ್ಲಿ ಈ ಹುಡುಗಿ ನಂದಿನಿ ನಂಜಪ್ಪ ಕೂಡಾ ಇದ್ದಳು. ಎಂ.ಬಿ.ಎ ಓದಿದವರೆಲ್ಲ ಕಾರ್ಪೊರೆಟ್ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿರುವ ಈ ದಿನಗಳಲ್ಲಿ ಇದ್ದ ಸರ್ಕಾರಿ ನೌಕರಿಗೆ ಗುಡ್ ಬೈ ಹೇಳಿ ಚಿತ್ರಕಥೆ- ಸಂಭಾಷಣೆ, ಹಾಡು ಬರೆದೇ ಗೆಲ್ತಿನಿ ಎಂದು ಪಟ್ಟು ಹಿಡಿದು ನಿಂತಿರುವುದು ನಂದಿನಿಯ ಹೆಚ್ಚುಗಾರಿಕೆ.
ಸರ್ಕಾರಿ ನೌಕರಿ ಇಲ್ಲದೆಯೂ ಸಂಭ್ರಮದಿಂದ ಬದುಕಬಲ್ಲೆ. ಚಿತ್ರರಂಗ ಒಗ್ಗದೋ ಹೋದರೆ ಮತ್ತೆ ಪರೀಕ್ಷೆ ಬರೆದು ಸರ್ಕಾರಿ ನೌಕರಿ ಪಡೆಯಬಲ್ಲೆ ಎನ್ನುವ ನಂದಿನಿಯ ಆತ್ಮವಿಶ್ವಾಸದ ಮಾತು- ಬರಹ, ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವೂ ಹೌದು.
ನನ್ನ ಹುಟ್ಟೂರು ಗುಂಡ್ಲುಪೇಟೆ. ರೇಷ್ಮೆ ಬೆಳೆ ನಷ್ಟ ಆಗಿ, ಬದುಕು ಅರಸಿ ಬೆಂಗಳೂರಿಗೆ ಬಂದೆವು. ಹುಟ್ಟು ತರಲೆಯಾದ ನನ್ನನ್ನು ಮನೆಯಲ್ಲಿ ನಿಭಾಯಿಸೋದು ತುಂಬಾ ಕಷ್ಟ ಆಗಿತ್ತಂತೆ. ಅದಕ್ಕೆ ಬೇಗ ಸ್ಕೂಲಿಗ್ ಸೇರಿಸಿದ್ರಂತೆ. ಸುಮ್ನೆ ಸೂಲ್ಕ…ಗೆ ಹೋಗ್ ಬರ್ತಿ¨ªೆ ಅಷ್ಟೆ… ಸಿಲಬಸ್ ಅಂದ್ರೆ ಏನು? ಮಾಮೂಲಿ ದಿನಕ್ಕು… ಪರೀಕ್ಷೆ ದಿನ… ಇರೋ ಸಾಮಾನ್ಯ ವ್ಯತ್ಯಾಸಾನೂ ನಂಗೆ ತುಂಬಾ ವರ್ಷಗಳವರೆಗೆ ಗೊತ್ತೇ ಇರ್ಲಿಲ್ಲ. ಒಂದನೇ ತರಗತಿಯಿಂದ ಹಿಡಿದು ಎಂ.ಬಿ.ಎ ವರೆಗಿನ ನನ್ನ ವ್ಯಾಸಂಗದಲ್ಲಿ ಕ್ಲಾಸ್ ವರ್ಕ್, ಹೋಮ… ವರ್ಕ್‌ಗಳನ್ನು ಎಂದಿಗೂ ಅಪ್‌ಡೇಟ… ಆಗಿ ಬರೆದಿಟ್ಟುಕೊಂಡವಳಲ್ಲ… ನನ್ನೊಳಗೊಬ್ಬ ಬರಹಗಾರ್ತಿ ಇ¨ªಾಳೆ ಎಂಬ ಅರಿವೂ ಆಗ ನನಗಿರಲಿಲ್ಲ. ಇಂಥವಳಿಗೆ ಬರೆಯುವ ಹುಚ್ಚು ಹಿಡಿಸಿದ್ದು ಮಾತ್ರ ಈ ಫೇಸ್‌ಬುಕ್ ಎಂಬ ಮಾಯಾ ಪುಟ.
ಮೊದಲಿಗೆ ನಾನು ಸರ್ಕಾರಿ ಕೆಲಸಕ್ಕೆ ಸೇರಿದಾಗ ಊಟದ ಸಮಯದಲ್ಲಿ ಮಾಡುತ್ತಿದ್ದ ತರಲೆ, ತಮಾಷೆಗಳಿಗೆÇÉಾ ಅಕ್ಷರ ರೂಪ ಕೊಡುತ್ತಾ ಬಂದೆ. ಕಾಲಾಂತರ ಅದು ಕವಿತೆಗ ಗಳಿಗೆ ತಿರುಗಿತು. ಭಾವನೆಯಿಂದ ಶುರುವಾಗಿ ಕಲ್ಪಿಸಿಕೊಂಡು ಬರೆಯಲು ಆರಂಭಿಸಿದೆ. ಇಷ್ಟಪಟ್ಟು ಹಿಮಾಲಯ ಹತ್ತೋಕ್ ಹೋಗೋರಿಗೆ ಸುಸ್ತಿಗಿಂತ ಸಂತೋಷಾನೇ ಜಾಸ್ತಿಯಂತೆ! ಹಾಗೆ ತಿಂಗಳ ಸಂಬಳ ಕೊಡ್ತಾ ಇದ್ದ ಸಂತೋಷಕ್ಕಿಂತ, ಯಾವುದೋ ಪತ್ರಿಕೆಗೆ ಬರೆದ ಲೇಖನದಿಂದ ಬಂದ ಇನ್ನೂರು ರುಪಾಯಿ ಹೆಚ್ಚಿನ ಸಂತೋಷವನ್ನ ಕೊಡ್ತಾ ಇತ್ತು. ಅಪ್ಪ ಯಾವಾಗ್ಲೂ ಹೇಳ್ಳೋರು… ಕತ್ತೆ ಮೇಯ್ಸಿದ್ರು, ಸರ್ಕಾರಿ ಕಛೇರಿಯ ಕಾಂಪೌಂಡ್ ಒಳಗೆ ಮೇಯಿಸಬೇಕು. ಅದಕ್ಕೆ ಬೆಲೆ ಜಾಸ್ತಿ ಅಂತ. ಆ ಮಾತು ಕೇಳಿದಾಗಲೆಲ್ಲ ನನ್ ಮುಖ ಚಿಕ್ಕದಾಗ್ತಿತ್ತು. ನಿರಾಸೆಯಾಗೋದು.
ನನ್ನೊಳಗಿನ ಬರಹಗಾರ್ತಿ ಜಾಗೃತಳಾಗುತ್ತಾ ಬಂದಂತೆ… ಎÇÉೋ ಒಂದ್ ಕಡೆ ನಾನು ಕಛೇರಿಯ ಕಡತಗಳ ಮಧ್ಯೆ ಕಳೆದು ಹೋಗುತ್ತಿದ್ದೇನೆ ಎಂಬ ಭಾವನೆ ಶುರುವಾಯ್ತು. ಕೆಲಸ ಬಿಟ್ಟು ಬರವಣಿಗೆ ಕ್ಷೇತ್ರಕ್ಕೆ ಬರ್ತೀನಿ ಅಂದಾಗೆÇÉಾ ಇರೋ ಸೆಕ್ಯೂರ್ಡ್ ಜಾಬ… ಬಿಟ್ಟು ಇದೆಂಥದು ನಿನ್ ಹುಚ್ಚಾಟ? “ಅಲ್ಲಿ ಕಾಲು ಎಳಿಯೋರು ಜಾಸ್ತಿ’ ಅಂತ ಕೆಲವರು ಹೆದರಿಸಿದ್ರೆ, ಇನ್ನು ಕೆಲವು ಗೆಳೆಯರು “ಕಾಲ… ಎಳಿಯೋರು ಎÇÉಾ ಕಡೆ ಇರ್ತಾರೆ… ಅದನ್ನೆಲ್ಲ ಮೆಟ್ಟಿ ನಿಂತು ನೀನು ಗಟ್ಟಿ ಬರಹಗಾರ್ತಿ ಆಗ್ಬೇಕು… ನಿನ್ ಮನಸ್ಸಿಗೆ ಖುಷಿ ಕೊಡೋ ಉದ್ಯೋಗ ಆಯ್ಕೆ ಮಾಡ್ಕೊà’ ಎಂದು ಧೈರ್ಯ ಹೇಳಿದ್ರು. ಗಟ್ಟಿ ನಿರ್ಧಾರ ಮಾಡಿ ಗೌರ್ನಮೆಂಟ… ಆಫೀಸಿಗೆ ಟಾಟಾ ಹೇಳಿ, ಪೆನ್ನು ಹಿಡಿದು, ಪಯಣ ಆರಂಭಿಸಿದೆ.
ಅದೇ ಸಮಯಕ್ಕೆ ಫೇಸ್‌ಬುಕ್‌ನಲ್ಲಿ ನನ್ನ ಬರಹಗಳನ್ನ ಗಮನಿಸುತ್ತಿದ್ದ, ಜೀ ಕನ್ನಡದ ಕಮಿಷನ್ ಹೆಡ್ ಆಗಿರುವ ಹರ್ಷಪ್ರಿಯ ಅವರು ನನ್ನನ್ನ ಗುರುತಿಸಿ “ಡ್ರಾಮಾ ಜೂನಿಯರ್’ ಎಂಬ ರಿಯಾಲಿಟಿ ಶೋಗೆ ಬರೆಯುವ ಅವಕಾಶ ಮಾಡಿಕೊಟ್ಟರು. ಹೇಳಬೇಕೆಂದರೆ… ನನ್ನ ಎಂಟ್ರಿ ಬಹಳ ಸುಲಭವಾಗಿ ಆಯ್ತು. ನಮ… ಟೀಮ… ತುಂಬಾ ಚೆನ್ನಾಗಿತ್ತು. ಅಲ್ಲಿರುವವರೆಗೂ ಯಾವ ಸಮಸ್ಯೆಯನ್ನೂ ಎದುರಿಸಲಿಲ್ಲ ನಾನು. ಆ ಶೋ ಮುಗಿದ ನಂತರ, ಮೊದ ಮೊದಲು, ಈ ಕ್ಷೇತ್ರಕ್ಕೆ ಬೇಕಾದ ತಾಳ್ಮೆ, ಕಮಿಟ…ಮೆಂಟ… ಇಲ್ಲದೇ ಒಂದೆರಡು ಅವಕಾಶಗಳು ಕೈತಪ್ಪಿದವು. ಎಲ್ಲಿ ಹೋಗಬೇಕು? ಏನು ಬರೆಯಬೇಕು? ಯಾವದನ್ನ ಆಯ್ಕೆ ಮಾಡ್ಕೊಬೇಕು? ಎಂಬ ಗೊಂದಲದಲ್ಲಿ ಒಂದಷ್ಟು ಸಮಯ ಕಳೆದು ಹೋಯ್ತು. ಬಿಟ್ಟಿ ಕೆಲ್ಸ ಮಾಡ್ಕೊಟ್ಟಿದ್ದೂ ಆಯ್ತು..
ಗುರಿ ಸ್ಪಷ್ಟ ಇಲ್ಲ ಅಂದ್ರೆ ಎÇÉಾ ಕಷ್ಟಾನೇ ಅಲ್ವ? ನಂತರ ಇದೇ ಕ್ಷೇತ್ರದಲ್ಲಿ ಪರಿಚಯವಾದ ಕೆಲವು ಸ್ನೇಹಿತರು, ಹಿರಿಯರು ಮಾರ್ಗದರ್ಶನ ಮಾಡಿದರು. ಇಷ್ಟು ವರ್ಷ ನನ್ನ ಜೀವನದಲ್ಲಿ ನಾನು ಕಲಿಯಲು ಸಾಧ್ಯವಾಗದೇ ಇದ್ದ ತಾಳ್ಮೆಯ ಪಾಠವನ್ನ ಈ ಬರವಣಿಗೆ ಕ್ಷೇತ್ರ ಕಲಿಸಿಕೊಟ್ಟಿತು. ನಿಧಾನವಾಗಿ ಸಿನಿಮಾ ಹಾಡುಗಳು, ಸಿನಿಮಾ ಸಂಭಾಷಣೆ ಇತ್ಯಾದಿಗಳನ್ನು ಬರೆಯುವ ಅವಕಾಶ ಸಿಕು¤. ನಾನು ಇಲ್ಲಿ ಬದುಕಬÇÉೆ ಅನ್ನೋ ಆತ್ಮವಿಶ್ವಾಸ ಬಂತು. of course ನನ್ನ ಆತ್ಮದೊಳಗಿಂದೆದ್ದ ತುಡಿತ ತಾನೇ? ವಿಶ್ವಾಸ ಕೊಟ್ಟೇ ಕೊಡತ್ತೆ. ಕೆಲಸ ಬಿಟಿºಟ್ನಲ್ಲ ಅನ್ನೋ ಗಿಲ್ಟ… ಆಗ್ಲಿ .. ಬೇಸರವಾಗ್ಲಿ ನನ್ನನ್ನ ಇದುವರೆಗೂ ಕಾಡಿಲ್ಲ.
ಇಷ್ಟ ಇಲೆªà ಇರೋ ಇಳಿಜಾರು ಇಳಿಯೋದಕ್ಕಿಂತ ಇಷ್ಟ ಇರೋ ದಿಣ್ಣೆ ಹತ್ತೋದೇ ನಿಜವಾದ ಖುಷಿ !
– ನಂದಿನಿ ನಂಜಪ್ಪ