Advertisement
ಈದ್ ಮಿಲಾದ್, ವಾಲ್ಮೀಕಿ ಜಯಂತಿ ಮತ್ತು ವೀಕೆಂಡ್ ಹಿನ್ನೆಲೆಯಲ್ಲಿ ರಜೆ ಇರುವುದರಿಂದ ಧರ್ಮಸ್ಥಳ, ಸುಬ್ರಹ್ಮಣ್ಯ, ಕಟೀಲು, ಕೊಲ್ಲೂರು ಮುಂತಾದ ದೇಗುಲಗಳಿಗೆ ಭಕ್ತರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ.
Related Articles
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಶುಕ್ರವಾರ, ಶನಿವಾರ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ದೇವರ
ದರ್ಶನ ಪಡೆದರು.
Advertisement
ಭಕ್ತರು ನಿಗದಿತ ಮಿತಿಯಲ್ಲಿ ಸೇವೆಗಳನ್ನು ನೆರವೇರಿಸುತ್ತಿದ್ದಾರೆ. ಶನಿವಾರ ಸುಮಾರು ಹತ್ತು ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದು, ರಾತ್ರಿಯೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಕಟೀಲು: 22 ಮದುವೆಕಟೀಲು: ಸರಣಿಯಾಗಿ ಸರಕಾರಿ ರಜೆಯಾಗಿರುವುದರಿಂದ ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶನಿವಾರ ಭಾರೀ ಜನಸಂದಣಿ ಇತ್ತು ಶುಕ್ರವಾರ 22ಕ್ಕೂ ಹೆಚ್ಚು ಮದುವೆ ನಡೆದಿದ್ದರೆ 10 ಸಾವಿರಕ್ಕೂ ಮಿಕ್ಕಿ ಭಕ್ತರು ದೇವರ ದರ್ಶನ ಪಡೆದಿದ್ದಾರೆ. ಶನಿವಾರ ಭಕ್ತರ ಸಂಖ್ಯೆ ಸ್ವಲ್ಪ ಕಡಿಮೆ. ಆದರೆ ರವಿವಾರ ಭಕ್ತರ ಸಂಖ್ಯೆ ದ್ವಿಗುಣವಾಗುವ ನಿರೀಕ್ಷೆ ಹೊಂದಲಾಗಿದೆ. ದೇವಸ್ಥಾನದಲ್ಲಿ ಎಲ್ಲ ಸೇವಾ ಕಾರ್ಯಗಳು ನಡೆಯುತ್ತಿದ್ದು, ದಿನಂಪ್ರತಿ ರಾತ್ರಿ 12 ರಂಗ ಪೂಜೆಗಳು ನಡೆಯುತ್ತಿವೆ ಎಂದು ದೇವಸ್ಥಾನದ ಮೂಲಗಳು ತಿಳಿಸಿದೆ. ಇದನ್ನೂ ಓದಿ:ಹೊಟೇಲ್‌ನಲ್ಲಿ “ಗುಂಡು ಹಾರಾಟ’: ಮೂವರಿಗಾಗಿ ಶೋಧ ಭಕ್ತರಿಂದ ದೇವಿಯ ದರ್ಶನ
ಕುಂದಾಪುರ: ಇಲ್ಲಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲೂ ಭಾರೀ ಸಂಖ್ಯೆಯಲ್ಲಿ ಭಕ್ತರು ಶ್ರೀದೇವಿಯ ದರ್ಶನ ಪಡೆದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಹೆಚ್ಚಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಕೇರಳ, ತಮಿಳುನಾಡಿನ ಭಕ್ತರ ಸಂಖ್ಯೆ ವಿರಳವಾಗಿತ್ತು. ಬೀಚ್, ಸೀವಾಕ್‌ನಲ್ಲಿ ಜನಸಂದಣಿ
ಮಲ್ಪೆ: ಈದ್ ಮಿಲಾದ್, ವಾಲ್ಮೀಕಿ ಜಯಂತಿ, ವೀಕೆಂಡ್ ಹೀಗೆ ಮೂರು ದಿನಗಳ ಸರಣಿ ರಜೆಯಿಂದಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಮಲ್ಪೆ ಬೀಚ್ ಮತ್ತು ಸೀವಾಕ್‌ವೆಯಲ್ಲಿ ಜನ ಜಂಗುಳಿ ಉಂಟಾಗಿದ್ದು, ಪರಿಣಾಮ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ನಿತ್ಯ ಟ್ರಾಫಿಕ್‌ಜಾಮ್ ಸಮಸ್ಯೆ ತಲೆದೋರಿ ವಾಹನ ಸವಾರರು ಪರದಾಡಬೇಕಾಯಿತು. ಪ್ರವಾಸಿಗರ ವಾಹನದಿಂದಾಗಿ ಮಲ್ಪೆ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿ ಸಮಸ್ಯೆ ಯಾಗಿದೆ. ನೂರಾರು ವಾಹನಗಳಲ್ಲಿ ಮಲ್ಪೆ ಕಡೆಗೆ ಪ್ರವಾಸಿಗರೇ ಆಗಮಿಸುತ್ತಿದ್ದಾರೆ. ಸಂಜೆ ವೇಳೆ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು ವಾಹನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಇದನ್ನೂ ಓದಿ:ಅದಾನಿ ಸಮೂಹ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ ಪಾರ್ಕಿಂಗ್ ಸಮಸ್ಯೆ
ಹೊರಜಿಲ್ಲೆಯಿಂದ ಪ್ರವಾಸಿಗರು ಶುಕ್ರವಾರ ಮತ್ತು ಶನಿವಾರ ಅಪಾರ ಸಂಖ್ಯೆಯಲ್ಲಿ ಮಲ್ಪೆ ಬೀಚ್ ಮತ್ತು ಸೀವಾಕ್‌ಗೆ ಭೇಟಿ ನೀಡಿದ್ದಾರೆ. ಇದರಿಂದಾಗಿ ಬೀಚ್‌ನ ಪಾರ್ಕಿಂಗ್ ಏರಿಯಾಗಳಲ್ಲಿ ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಉಂಟಾಗಿದೆ. ರವಿವಾರ ಇನ್ನಷ್ಟು ಜನ ಹೆಚ್ಚಾಗುವ ಸಾಧ್ಯತೆ ಇದೆ. ಸೈಂಟ್ ಮೇರಿಸ್‌ನಲ್ಲಿ ಜನ ವಿರಳ
ಸೈಂಟ್‌ಮೇರಿ ದ್ವೀಪಕ್ಕೆ ಲಾಕ್‌ಡೌನ್‌ನಿಂದ ಸ್ಥಗಿತಗೊಳಿಸಲಾಗಿದ್ದ ಬೋಟ್ ಸಂಚಾರ ಇದೀಗ ಮತ್ತೆ ಆರಂಭವಾಗಿದೆ. ಬೋಟ್ ಯಾನ ವಾರದ ಹಿಂದೆ ಆರಂಭಗೊಂಡಿದ್ದರೂ, ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಮಾತ್ರ ತೀರ ವಿರಳವಾಗಿದೆ. ಸೈಂಟ್ ಮೇರೀಸ್‌ಗೆ ಕೇರಳದ ಮಂದಿ ಬಹು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಇದೀಗ ಕೇರಳದ ಮಂದಿ ಪ್ರವಾಸ ಕೈಗೊಳ್ಳದ ಕಾರಣ ಇಲ್ಲಿಗೆ ಬರುವ ಮಂದಿಯೂ ಕಡಿಮೆ ಯಾಗಿದೆ ಎನ್ನಲಾಗಿದೆ.