Advertisement

ಜೆಸಿಬಿ ಬಳಸಿದ್ದಕ್ಕೆ ಗೌತಮ ರಥಕ್ಕೆ ಹಾನಿ

10:15 AM Mar 21, 2019 | Team Udayavani |

ನಂಜನಗೂಡು: ಮಂಗಳವಾರ ನಡೆದ ಶ್ರೀಕಂಠೇಶ್ವರ ಪಂಚ ಮಹಾರಥೋತ್ಸವದ ಗೌತಮ ರಥ ಸರಾಗವಾಗಿ ಚಲಸದ ಹಿನ್ನೆಲೆಯಲ್ಲಿ ಜಿಸಿಬಿ ಯಂತ್ರ ಬಳಸಿದ್ದರಿಂದ ರಥದ ನಾಲ್ಕು ಚಕ್ರಗಳಿಗೆ ಹಾನಿಯಾಗಿದೆ. ಅತ್ಯಂತ ಪುರಾತನ ರಥ ಎಂದೇ ಕರೆಯುವ 110 ಟನ್‌ ತೂಕದ 76 ಅಡಿ ಎತ್ತರದ ಗೌತಮ ರಥದ ನಾಲ್ಕೂ ಚಕ್ರಗಳ ಮರ ಕಿತ್ತು ಬಂದಿದೆ.

Advertisement

ಶ್ರೀಕಂಠೇಶ್ವರನ್ನು ರಥರೂಢನನ್ನಾಗಿಸಿದ ನಂತರ ಭಕ್ತರು ರಥ ಎಳೆಯಲು ಪ್ರಯತ್ನಿಸಿದಾಗ ಹಗ್ಗ ತುಂಡಾಗಿ ಬಿದ್ದಿತ್ತು. ಹೊಸ ಹಗ್ಗ ಬಳಸಿದರೂ ಪದೇ ಪದೇ ಹಗ್ಗ ತುಂಡಾಗುತ್ತಲೇ ಇತ್ತು. ಈ ಸಂದರ್ಭದಲ್ಲಿ ಜೆಸಿಬಿ ಹಾಗೂ ಕ್ರೇನ್‌ ಯಂತ್ರಗಳನ್ನು ಬಳಸಲಾಯಿತು. ಜೆಸಿಬಿಯಿಂದ ರಥದ ಗಾಲಿಗಳನ್ನು ನೂಕಿದ್ದರಿಂದ ಹಾನಿಯಾಗಿದೆ..ವಾರದ ಹಿಂದೆ ಲಕ್ಷಾಂತರ ರೂ. ವ್ಯಯಿಸಿ ಎರಡು ಚಕ್ರಗಳನ್ನು ಹೊಸದಾಗಿ ನಿರ್ಮಿಸಿ ರಥಕ್ಕೆ ಅಳವಡಿಸಲಾಗಿತ್ತು.

 ಒಬ್ಬರ ಮೇಲೆ ಒಬ್ಬರು ಬಿದ್ದರು: ಶ್ರೀಕಂಠಪ್ಪ ಪವಡಿಸಿದ ರಥವನ್ನು ಭಕ್ತರು ರಭಸದಿಂದ ಎಳೆದಾಗ ತೇರಿಗೆ ಕಟ್ಟದ ಭಾರಿ ಗಾತ್ರದ ಹಗ್ಗವೇ ತುಂಡಾಗಿ ಎಳೆಯುತ್ತಿದ್ದ ಭಕ್ತರು ಒಬ್ಬರ ಮೇಲೊಬ್ಬರು ಉರುಳಿ ಬಿದ್ದರು. ರಥ ಏನಾಯಿತು ಎಂದು ನೋಡಿದವರಿಗೆ ಹಗ್ಗ ತುಂಡಾಗಿರುವುದು ಗೊತ್ತಾಗಿ ನಕ್ಕು ಸಂಭ್ರಮಿಸಿದರು. ದೇವಾಲಯದ ಅರ್ಚಕವೈಂದವರಲ್ಲೊಬ್ಬರಾದ ಮಂಜು ಹಾಗೂ ದೇವಾಲಯದ ಅಧಿಕಾರಿ ಗಂಗಯ್ಯ ಅವರಿಗೆ ತುಂಡಾದ ಹಗ್ಗವೇ ಮುಖಕ್ಕೆ ಹೊಡೆದು ಗಾಯಗೊಂಡರು.

2 ಗಂಟೆಗಳ ಕಾಲ ರಥ ಸ್ತಬ್ಧ: ಹಗ್ಗ ತುಂಡಾದಾಗ ಹೊಸ ಹಗ್ಗ ಕಟ್ಟಲು ಶ್ರಮ ಪಡಬೇಕಾಯಿತು. ಅಂತು ಹಗ್ಗ ಕಟ್ಟಿ ಎಳೆದಾಗ
ಅದೂ ತುಂಡಾಯಿತು. ಹಗ್ಗ ಕಟ್ಟುವುದು ಅದು ತುಂಡಾಗುವುದು ಪದೇ ಪದೆ ನಡೆದು ಇತ್ತು ಏಳು ಗಂಟೆಗೆರಥ ಏರಿದ
ಶ್ರೀಕಂಠೇಶ್ವರ ಕೊನೆಗೆ ಅಲ್ಲಿಂದ ಚಲಿಸಿದ್ದು 9.45 ಕ್ಕೆ ನಂತರ ದೇವಾಲಯದ ಬಲಭಾಗಕ್ಕೆ ಬಂದ ರಥ ಮತ್ತೆ ಮೊಂಡಾಟ
ನಡೆಸಿ ಮುಂದೆ ಸಾಗಿ 11.5 ಕ್ಕೆ ಸರಿಯಾಗಿ ದೇವಾಲಯದ ಎಡಭಾಗದ ಸ್ವಸ್ಥಾನ ಸೇರಿತು.

Advertisement

Udayavani is now on Telegram. Click here to join our channel and stay updated with the latest news.

Next