Advertisement
ಹಿನ್ನೆಲೆ ಇದು… ಮೂರು ದಿನಗಳ ಹಿಂದೆ ನಾನು, ನಂದಳಿಕೆಯ ವೀಕೆ, ಸಚ್ಚರಿಪೇಟೆಯ ಸತ್ಯಶಂಕರ, ಮತ್ತು ಸೊರಬದ ದಿನಕರ ಅದೇ ದಾರಿಯಲ್ಲಿ ಲಡಾಖ್, ಲೇಹ್, ಝಂಸ್ಕರ್ ಕಣಿವೆಗೆ ಹೋಗುವಾಗ ಅÇÉೇ ವಿಶ್ರಾಂತಿ ಪಡೆದಿ¨ªೆವು. ಇಬ್ಬರೇ ಮಹಿಳೆಯರು… ಅಮ್ಮ, ಮಗಳು ! ಹೊರಡುವಾಗ “ಥ್ಯಾಂಕ್ಸ್ ಆಂಟೀ…’ ಅಂತ ಮಗಳ ಬಳಿ ಹೇಳಿದ್ದು ಅವಳನ್ನು ಕೆರಳಿಸಿತ್ತು. “ಕ್ಯಾ? ಮೈ ಆಂಟೀ?’ ಅಂತ ಕೆರಳಿದ್ದಳು! ನಗುತ್ತ ಹೊರಟಾಗ ಸತ್ಯಶಂಕರರ ಶಾಲನ್ನು ಮರೆತು ಅÇÉೇ ಬಿಟ್ಟಿ¨ªೆವು. ಅದೇ ದಾರಿಯಲ್ಲಿ ಮರಳುವಾಗ ಬಂದೇ ಬರುತ್ತಾರೆ ಎಂದು ಅವರು ನಿರೀಕ್ಷಿಸಿರಬೇಕು. ಗಂಟೆ ಆರೂವರೆಯಾಗಿತ್ತು. ಅಸಾಧ್ಯ ಚಳಿ. ಸಾಲದೆಂಬಂತೆ ವೀಕೆಗೆ ಜ್ವರ. ಅಲ್ಲಿಂದ ಮುಂದಿನ ಕ್ಯಾಂಪ್ ಭರತಪುರಕ್ಕೆ ನಲುವತ್ತು ಕಿ.ಮೀ. ಸಾಗಬೇಕು. ಕಷ್ಟ ಅನಿಸಿ ಅÇÉೇ ಉಳಿದುಕೊಂಡೆವು. ಟೆಂಟು ಅಂದರೆ ಸಾಲಾಗಿ ದಪ್ಪದಪ್ಪನೆಯ ಹಾಸಿಗೆಗಳು. ಒಬ್ಬರಿಗೆ ಒಂದು ರಾತ್ರಿ ಮಲಗಲು ಇನ್ನೂರೈವತ್ತು ರೂಪಾಯಿ. ಹೊದೆಯಲು ಐದಾರು ಹಾಸುಗಳು.
Related Articles
Advertisement
ಆಗ ಆಕೆ ಹೇಳಿದ ಗಾಟಾ ಲೂಪ್ಸಿನ ಘಟನೆ ಇದು. ಹಲವು ವರ್ಷಗಳ ಹಿಂದೆ ಅಕ್ಟೋಬರ್‌ನ ಕೊನೆಯಲ್ಲಿ ಒಂದು ಟ್ರಕ್ ರೊಹrಂಗ್ ಪಾಸ್ ದಾಟಿ ಲೇಹ್ ಕಡೆಗೆ ಹೊರಟಿತ್ತು. ಸಾಮಾನ್ಯವಾಗಿ ಮನಾಲಿ-ಲೇಹ್ ದಾರಿ ಅಕ್ಟೋಬರ್‌ನಿಂದ ಮಾರ್ಚ್ ವರೆಗೆ ಹಿಮದಿಂದ ಮುಚ್ಚಿರುತ್ತದೆ. ಆದರೆ, ಆ ದಿನ ಅವರು ಲೇಹ್ ಸೇರಲೇಬೇಕಾಗಿತ್ತು. ಡ್ರೈವರ್ ಮತ್ತು ಕ್ಲೀನರ್ ಇಬ್ಬರೇ. ಹಿಮಪಾತ ಶುರುವಾಗಿತ್ತು. ಸಾರ್ಚು ದಾಟಿ ಪಾಂಗ್‌ಗೆ ಬರುವಾಗ ಗಾಟಾಲೂಪ್ಸ್‌ನಲ್ಲಿ ಟ್ರಕ್ ಕೆಟ್ಟು ನಿಂತಿತು. ಕ್ಲೀನರ್ ಹಿಂದಿನ ಚಕ್ರಗಳಿಗೆ ಕಲ್ಲಿಡಲು ಹೋದಾಗ ಟ್ರಕ್ ಹಿಂದೆ ಜಾರಿ ಅವನ ಕಾಲುಗಳ ಮೇಲೆ ಚಲಿಸಿತು.
ಅವನನ್ನು ಕ್ಯಾಬಿನ್‌ನಲ್ಲಿ ಕೂರಿಸಿ ಹತ್ತಿರದ ಹಳ್ಳಿಯಿಂದ ಸಹಾಯ ಪಡೆಯಲು ಹೋದ ಡ್ರೈವರ್ ನಲುವತ್ತು ಕಿ.ಮೀ. ನಡೆದ ನಂತರ ಅವನಿಗೆ ಒಂದು ಹಳ್ಳಿ ಸಿಕ್ಕಿತು. ಅಲ್ಲಿ ನೀರು ಆಹಾರ ಪಡೆದು ವಾಪಸ್ ಹೊರಟಾಗ ಭಯಂಕರ ಹಿಮಪಾತ ಶುರುವಾಯಿತು. ಏಳು ದಿನ ಅಲ್ಲಿಂದ ಹೊರಡಲಾಗಲಿಲ್ಲ. ಎಂಟನೆಯ ದಿನ ಹಳ್ಳಿಗರೊಂದಿಗೆ ಅಲ್ಲಿಗೆ ಮರಳಿದಾಗ ಆ ಬಡಪಾಯಿ ಕ್ಲೀನರ್ ಅನ್ನ-ನೀರಿಲ್ಲದೆ ಚಳಿಯಲ್ಲಿ ನಡುಗುತ್ತ ಸತ್ತೇಹೋಗಿದ್ದ. ಅÇÉೇ ಅವನ ಹೆಣವನ್ನು ಸುಟ್ಟುಹಾಕಿದರು.
ಕತೆ ಇಲ್ಲಿಗೆ ಮುಗಿಯಲಿಲ್ಲ. ಕೆಲವು ಸಮಯದ ನಂತರ ಗಾಟಾ ಲೂಪ್ಸ್‌ನಲ್ಲಿ ಸಾಗುವ ವಾಹನಗಳನ್ನು ಅದೇ ಜಾಗದಲ್ಲಿ ಒಬ್ಬ ನಿಲ್ಲಿಸಿ ನೀರು ಮತ್ತು ಸಿಗರೇಟ್ ಕೇಳತೊಡಗಿದನಂತೆ. ಕೈಗೆ ನೀರು ಹಾಕಿದಾಗ ಅದು ಬೊಗಸೆಯಿಂದ ಇಳಿದು ಹೋಗುತ್ತಿತ್ತಂತೆ. ಅದು ಅವನ ದೆವ್ವ ಅಂತ ವದಂತಿ ಹಬ್ಬಿತು. ಈಗ ನೀರಿನ ಬಾಟಿÉಗಳನ್ನು ನಾವು ಕಂಡಲ್ಲಿ ಯಾರೂ ವಾಹನ ನಿಲ್ಲಿಸುವುದಿಲ್ಲ. ನೀರ ಬಾಟಲಿ ಎಸೆದು ಹೋಗ್ತಾರೆ.
ಘಟಸರ್ಪದಂತಹ ಈ ದೆವ್ವಪೀಡಿತ ಗಾಟಾಲೂಪ್ಸ್‌ನ ಕತೆ ಮೊದಲೇ ನಮಗೆ ಗೊತ್ತಿದ್ದರೆ ಅಲ್ಲಿ ಇಳಿದು ನೋಡಬಹುದಾಗಿತ್ತು. ಆದರೂ ಸಾವು ಬಾಯ್ದೆರೆದು ಆಕಳಿಸುತ್ತಿರುವಂತಹ ಪ್ರಪಾತ, ಸುತ್ತ ಹೆಪ್ಪುಗಟ್ಟಿರುವ ಹಿಮರಾಶಿ, ಜನವಿಹೀನ ಕಣಿವೆಗಳಲ್ಲಿ ಸಿಂಧೂ ಝಂಸ್ಕರ್ ನದಿಗಳ ಮೊರೆತ… ಇವೆಲ್ಲವನ್ನು ಬದುಕಿನಲ್ಲಿ ಒಮ್ಮೆಯಾದರೂ ಅನುಭವಿಸಬೇಕು!
– ಬಿ. ಸೀತಾರಾಮ ಭಟ್