ಕಾಸರಗೋಡು: ಮಹಿಳೆಯೊಬ್ಬರು 20 ವರ್ಷಗಳ ಹಿಂದೆ ಕಳೆದು ಕೊಂಡಿದ್ದ ಕಿವಿಯೋಲೆ ಇದೀಗ ಅದೇ ಸ್ಥಳದಲ್ಲಿ ದೊರೆತಿದೆ. ಜಿಲ್ಲೆಯ ಬೇಡಡ್ಕ ಗ್ರಾಮ ಪಂಚಾಯತ್‌ನ ಎಡಂ ಪೂರಾಡಿಯಲ್ಲಿ ನಾರಾಯಣಿ ಎಂಬ ಮಹಿಳೆ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಎರಡು ಕಿವಿಯ ಓಲೆಗಳನ್ನು ಕಳೆದುಕೊಂಡಿದ್ದರು. ಅದೇ ಸ್ಥಳದಲ್ಲಿ ಇದೀಗ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಬೇಬಿ ಅವರಿಗೆ ಓಲೆ ಸಿಕ್ಕಿದೆ. ಸಂಪೂರ್ಣವಾಗಿ ಮಣ್ಣು ಮೆತ್ತಿಕೊಂಡಿದ್ದ ಓಲೆಯನ್ನು ಶುಚಿಗೊಳಿಸಿದಾಗ ಚಿನ್ನದ್ದೆಂದು ದೃಢಪಟ್ಟಿದೆ. ನಾರಾಯಣಿ ಅವರ ಪುತ್ರಿ ಮಾಲಿನಿಗೆ ಓಲೆ ತನ್ನ ತಾಯಿಯದ್ದೇ ಎಂದು ಗುರುತಿಸಿದ್ದಾರೆ. ಓಲೆಯನ್ನು ನಾರಾಯಣಿ ಅವರಿಗೊಪ್ಪಿಸಲಾಗಿದೆ.
ಅಕ್ಕಿ ಮಾರಿ ಖರೀದಿಸಿದ್ದರು!
ಹಲವು ದಶಕಗಳ ಹಿಂದೆ 24 ಕೆ.ಜಿ. ಅಕ್ಕಿಯನ್ನು ಮಾರಾಟ ಮಾಡಿ ಈ ಕಿವಿಯೋಲೆಯನ್ನು ನಾರಾಯಣಿ ಖರೀದಿಸಿದ್ದರು. 2000ರಲ್ಲಿ ಈ ಕಿವಿಯೋಲೆ ಬೆಲೆ 4,400 ರೂ. ಇತ್ತು. ಪ್ರಸ್ತುತ ಇದರ ಮೌಲ್ಯ 40 ಸಾವಿರ ರೂ. ಇದೆ.