ಎನ್ನಲಾಗಿದೆ.
Advertisement
ಜಯಂತ್ ಮತ್ತು ತಂಡದಿಂದ ಥಳಿತಕ್ಕೊಳಗಾದ ಯುವಕ ಚಿನ್ನದ ಸರ ಕಳವು ಮಾಡಿದ್ದ ಎನ್ನಲಾಗಿದ್ದು, ಇದಕ್ಕಾಗಿ ಈ ರೀತಿ ಗೂಂಡಾವರ್ತನೆ ತೋರಲಾಗಿದೆ ಎಂದು ಹೇಳಲಾಗಿದೆ. ಜಯಂತ್ ಮತ್ತು ಗುಂಪಿನಿಂದ ಥಳಿತಕ್ಕೆ ಒಳಗಾದ ಯುವಕ ಪರಿ ಪರಿಯಾಗಿ ಬೇಡಿಕೊಂಡರೂ ಬಿಟ್ಟಿಲ್ಲ. ಈ ಸಂಬಂಧ ದೇವರಾಜ ಠಾಣೆ ಪೊಲೀಸರು ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಸಾ.ರಾ.ಮಹೇಶ್, “ಇದು 2 ವರ್ಷ ಹಿಂದಿನ ಪ್ರಕರಣ. ವಿಷಯ ಗೊತ್ತಾದ ಕೂಡಲೇ ದೇವರಾಜ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದೆ, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದು ಪ್ರಕರಣ ಇತ್ಯರ್ಥವಾಗಿದೆ. ಚುನಾವಣೆ ಸಮೀಪಿಸುತ್ತಿರುವ ಕಾರಣಕ್ಕೆ ಯಾರೋ ಹಳೆ ಪ್ರಕರಣಕ್ಕೆ ಮರುಜೀವ ನೀಡುವ ಪ್ರಯತ್ನ ಮಾಡಿದ್ದಾರೆ’ ಎಂದಿದ್ದಾರೆ.