Advertisement

ಗೋಶಾಲೆಗಳು ಭರ್ತಿ; ಶೀಘ್ರ ಜಿಲ್ಲಾ ಗೋಶಾಲೆ 

09:20 PM Jul 27, 2021 | Team Udayavani |

ಮಹಾನಗರ: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ “ಜಿಲ್ಲೆಗೊಂದು ಗೋಶಾಲೆ ನಿರ್ಮಾಣ’ ಯೋಜನೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಸಿದ್ಧಗೊಳ್ಳುತ್ತಿದ್ದು, ಈ ವರ್ಷವೇ ಆರಂಭವಾಗುವ ನಿರೀಕ್ಷೆಯಿದೆ.

Advertisement

ದ.ಕ. ಜಿಲ್ಲೆಯ ಕಡಬ ತಾಲೂಕಿನ ಕೊçಲದಲ್ಲಿ 103.34 ಎಕರೆ ಹಾಗೂ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ 14.35 ಎಕರೆ ಜಾಗ ಗುರುತಿಸಲಾಗಿದ್ದು, ಅನುದಾನ ಶೀಘ್ರ ದೊರೆಯುವ ಸಾಧ್ಯತೆ ಇದೆ.   ಪ್ರಸ್ತುತ ದ.ಕ.ದಲ್ಲಿ 20,  ಉಡುಪಿಯಲ್ಲಿ 13 ಗೋಶಾಲೆಗಳಿದ್ದು, ಬಹುತೇಕ ಗೋಶಾಲೆಗಳು ಭರ್ತಿಯಾಗಿವೆ.

ಗೋಶಾಲೆಯಲ್ಲಿ ಸಾಕಿಕೊಂಡು ಬರಲಾಗುತ್ತಿರುವ ಗೋವುಗಳ ಜತೆಗೆ ಕಳ್ಳರಿಂದ ರಕ್ಷಿಸಲ್ಪಟ್ಟ ಗೋವುಗಳಿಗೆ ಆಶ್ರಯ ನೀಡುವುದು ಕೂಡ ಸವಾಲಾಗಿದೆ. ಎರಡೂ ಜಿಲ್ಲೆಗಳ ಗೋಶಾಲೆಗಳಲ್ಲಿ ತಲಾ 2,500ಕ್ಕೂ ಅಧಿಕ ಗೋವುಗಳಿವೆ. ಅನೇಕ ಪ್ರಕರಣಗಳು ನ್ಯಾಯಾಲಯಗಳಲ್ಲಿ ಇತ್ಯರ್ಥವಾಗಿದ್ದರೂ ಗೋವುಗಳು ಅಲ್ಲೇ ಬಾಕಿಯಾಗಿವೆ.

ಪ್ರಕ್ರಿಯೆಗೆ ವೇಗ:

ಗೋ ಶಾಲೆಗಳ ಮೇಲಿರುವ ಒತ್ತಡವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಗೋಶಾಲೆಗಳ ನಿರ್ಮಾಣ ಪ್ರಕ್ರಿಯೆಗೆ ವೇಗ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.

Advertisement

ದ.ಕ. ಜಿಲ್ಲೆಯಲ್ಲಿ 700ಕ್ಕೂ ಅಧಿಕ, ಉಡುಪಿ ಜಿಲ್ಲೆಯಲ್ಲಿ 200ರಿಂದ 300 ಗೋವುಗಳಿಗೆ ಆಶ್ರಯ ದೊರೆಯುವ ಸಾಧ್ಯತೆ ಇದೆ. ಈಗಾಗಲೇ ಸುಳ್ಯ, ಬೆಳ್ತಂಗಡಿ, ಮಂಗಳೂರು ಮತ್ತು ಕುಂದಾಪುರ ತಾಲೂಕಿನ ವಂಡ್ಸೆ ಹೋಬಳಿಯಲ್ಲಿ ತಾಲೂಕು ಮಟ್ಟದ ಗೋ ಶಾಲೆಗಳಿಗೂ ಜಾಗ ಗುರುತಿಸಲಾಗಿದೆ.

ಸಹಾಯಧನ ಬಂದಿಲ್ಲ

ಇಲಾಖೆ ಲೆಕ್ಕಾಚಾರದಂತೆ ಒಂದು ಗೋವಿಗೆ ದಿನಕ್ಕೆ 70 ರೂ. ವೆಚ್ಚ ತಗಲುತ್ತದೆ. ಇದರಲ್ಲಿ ಶೇ. 25 (ಒಂದು ದನಕ್ಕೆ ದಿನಕ್ಕೆ 17.50 ರೂ.) ರಷ್ಟು ಸಹಾಯಧವನ್ನು ಸರಕಾರ ನೀಡುತ್ತಿದೆ. ದ.ಕ. ಜಿಲ್ಲೆಯ 20 ಖಾಸಗಿ ಗೋಶಾಲೆಗಳ ಪೈಕಿ 14 ಸರಕಾರದ ಸಹಾಯಧನ ಪಡೆಯುತ್ತಿವೆ. ಅದರಂತೆ ದ.ಕ. ಜಿಲ್ಲೆಗೆ 1.2 ಕೋ.ರೂ. ಬರಬೇಕಿದ್ದು 29 ಲ.ರೂ. ಮಾತ್ರ ಬಿಡುಗಡೆಯಾಗಿದೆ. ಉಡುಪಿ ಜಿಲ್ಲೆಯ 13 ಗೋಶಾಲೆಗಳ ಪೈಕಿ 3 ಗೋಶಾಲೆಗಳು ಸಹಾಯಧನ ಪಡೆಯುತ್ತಿದ್ದು

ಜಿಲ್ಲಾ ಗೋಶಾಲೆಗಳಿಗೆ ಜಾಗ ಗುರುತಿಸಲಾಗಿದೆ. ಸರಕಾರದಿಂದ ಅನುಮೋದನೆ ದೊರೆತು ಅನುದಾನ ಶೀಘ್ರ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ಈ ವರ್ಷದಲ್ಲೇ ಗೋಶಾಲೆಗಳನ್ನು ಆರಂಭಿಸಿ ಈಗಿರುವ ಗೋಶಾಲೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಯೋಜನೆ ಇದೆ.-ಡಾ| ಪ್ರಶಾಂತ್‌, ಡಾ| ಹರೀಶ್‌ದ.ಕ., ಉಡುಪಿ ಜಿಲ್ಲಾ ಉಪನಿರ್ದೇಶಕರು, ಪಶಂಸಂಗೋಪನಾ ಇಲಾಖೆ

 

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next