Advertisement

ಗೋ ಸಂತತಿ ರಕ್ಷಣೆ ಅಗತ್ಯ: ಸಿದ್ಧಗಂಗಾ ಶ್ರೀ

01:21 PM Sep 22, 2020 | Suhan S |

ನೆಲಮಂಗಲ: ಗೋವು ತನ್ನ ಜೀವನದ ಕೊನೆಯ ಉಸಿರು ಇರುವ ತನಕ ಪರೋಪಕಾರಿಯಾಗಿ ಬದುಕುತ್ತದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

Advertisement

ತಾಲೂಕಿನ ಸೋಂಪುರ ಹೋಂಬಾಳು ಸಮೀಪದ ಮೇಲಣಗವಿ ಮಠದಲ್ಲಿ ಓಂಕಾರ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ನೂತನವಾಗಿ ನಿರ್ಮಿಸಿರುವ ಗೋ ಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಕೊಲ್ಲುತ್ತಿರುವುದು ಬೇಸರ:ಪುಣ್ಯ ಭೂಮಿಯಲ್ಲಿ ಜನಿಸಿದ ಗೋವಿನಲ್ಲಿ ತಾಯಿ , ತಾಯಿನಾಡನ್ನು ಕಾಣುತ್ತೇವೆ. ಯಾವ ಗೋವಿಗೆ ಪೂಜ್ಯನೀಯ ಸ್ಥಾನವನ್ನು ಕೊಟ್ಟು ಹಗಲು ರಾತ್ರಿ ಪೂಜಿಸುತ್ತಿದ್ದರೋ ಅದೇ ಗೋ ಮಾತೆಯನ್ನು ಹಗಲು ರಾತ್ರಿಯೆನ್ನದೇ ಇಂದು ಮಾಂಸಕ್ಕಾಗಿ ಕೊಲ್ಲುತ್ತಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.

ಮನೆಯಲ್ಲಿ ಸಾಕಬೇಕಾದ ಗೋವುಗಳು ಆಹಾರಕ್ಕಾಗಿ ಬೀದಿ ಬೀದಿಗಳಲ್ಲಿ ಅಲೆಯುವಂತೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ತಿಳಿಸಿದರು. 2 ಲಕ್ಷ ರೂ.ನೀಡುವೆ:ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಗೋವಿನ ಮುಖದಲ್ಲಿ ಬ್ರಹ್ಮನನ್ನು, ಕಣ್ಣುಗಳಲ್ಲಿ ವಿಷ್ಣುವನ್ನು, ಕಂಠದಲ್ಲಿ ರುದ್ರನನ್ನೂ, ಕೊಂಬುಗಳಲ್ಲಿ ಸೂರ್ಯ ಚಂದ್ರರನ್ನೂ, ನಾಲ್ಕು ಕಾಲುಗಳಲ್ಲಿ ನಾಲ್ಕು ವೇದ ಗಳನ್ನೂ, ನಾಲ್ಕು ಕಾಲುಗಳ ಎಂಟೂ ಗೊರಸುಗಳಲ್ಲಿ ಅಷ್ಟದಿಕಾ³ಲಕರನ್ನು, ಬಾಲದಲ್ಲಿ ಸರ್ಪ ಸಂತತಿಯನ್ನು, ರೋಮಗಳಲ್ಲಿ ಕೋಟಿ ಕೋಟಿ ದೇವತೆಗಳನ್ನು, ಕೆಚ್ಚಲಿನಲ್ಲಿ ಅಮೃತವನ್ನು ಕಂಡ ದೇಶ ನಮ್ಮದು. ಇನ್ನೂ ಮುಂದೆ ಪ್ರತಿ ವರ್ಷ ನಮ್ಮ ಟ್ರಸ್ಟ್‌ ವತಿಯಿಂದ ಗೋಶಾಲೆಗೆ 2 ಲಕ್ಷ ರೂ.ಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.

ಮಾಂಸ ರಫ್ತಿನಿಂದ ಬೇಸರ:ಹೊನ್ನಮ್ಮಗವಿ ಮಠಾಧ್ಯಕ್ಷ ಶ್ರೀರುದ್ರಮುನಿ ಶಿವಾ ಚಾರ್ಯ ಸ್ವಾಮೀಜಿ, ಕೆಚ್ಚಲಿನಲ್ಲಿ ಅಮೃತ ಕಂಡ ದೇಶ ನಮ್ಮದು. ವಿದೇಶಗಳಿಗೆ ಗೋ ಮಾಂಸ ರಪು¤ ಮಾಡುವ ದೇಶಗಳಲ್ಲಿ ಭಾರತ ಒಂದು ಪ್ರಮುಖ ರಾಷ್ಟ್ರ ಎಂದು ಹೇಳಿಕೊಳ್ಳಲು ನಮಗೆ ಬಹಳ ಬೇಸರವಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಗೋ ರಕ್ಷಕರಾದ ಮಹೇಂದ್ರಮುನೋತ್‌,ಮಧುಸೂದನ್‌ ಬಾತಿ, ಜುಗರಾಜ್‌ಜೈನ್‌, ಮದನ್‌ಲಾಲ್‌ ಭಂಡಾರಿ ಮತ್ತಿತರರನ್ನು ಸನ್ಮಾನಿಸಲಾಯಿತು. ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ತಹಶೀಲ್ದಾರ್‌ ಶ್ರೀನಿವಾಸ್‌, ಗ್ರಾಪಂಮಾಜಿ ಅಧ್ಯಕ್ಷ ಹೊನ್ನಗಂಗಶೆಟ್ಟಿ, ಅ.ಭಾ.ವೀ.ಮ ಯುವ ಘಟಕದ ಹೋಬಳಿ ಅಧ್ಯಕ್ಷ ಉಮೇಶ್‌, ವೀರಶೈವ ಲಿಂಗಾಯತ ಮುಖಂಡರಾದ ವಕೀಲ ಮಹೇಶ್‌, ಮೋಹನ್‌ಕುಮಾರ್‌, ಹೊಸಳ್ಳಿ ಬಾಬು, ಯಡಿಯೂರಪ್ಪ, ಗ್ರಾಪಂ ಮಾಜಿ ಸದಸ್ಯರಾದ ಸಿದ್ದರಾಜು, ಪ್ರಭುದೇವ್‌, ಶಿವಗಂಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಿದ್ದರಾಜು, ಓಂಕಾರ್‌ ಟ್ರಸ್ಟ್‌ನ ಸದಸ್ಯರು, ಗೋ.ನಾ.ಸ್ವಾಮಿ, ಶಿಕ್ಷಕರು, ಭಕ್ತಾದಿಗಳು ಉಪಸ್ಥಿತರಿದ್ದರು.

Advertisement

ಭಾರತೀಯ ದೇಸಿ ಗೋವು ಆರೋಗ್ಯಯುತ ಹಾಲು ಕೊಡುತ್ತವೆ. ಗೋವಿನ ಎಲ್ಲಾ ಉತ್ಪನ್ನ ನಮ್ಮ ದಿನನಿತ್ಯದ ಬದುಕಿಗೆ ಅವಶ್ಯಕ. ಹೀಗಾಗಿ ಮಠದಲ್ಲಿ ಗೋ ಶಾಲೆ ನಿರ್ಮಾಣ ಮಾಡಿದ್ದೇವೆ. -ಶ್ರೀಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಶ್ರೀ, ಮೇಲಣಗವಿ ಮಠಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next