Advertisement

“ಗರೋಡಿ ನಿರ್ಮಾಣ ಸನಾತನ ಧರ್ಮಕ್ಕೆ ದೊಡ್ಡ ಕೊಡುಗೆ’

08:26 PM May 22, 2019 | mahesh |

ಪುಂಜಾಲಕಟ್ಟೆ: ಕಕ್ಯಪದವಿನಲ್ಲಿ ಗರೋಡಿ ಪುನರ್ನಿರ್ಮಾಣ ಸನಾತನ ಧರ್ಮಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು.

Advertisement

ಸುಮಾರು 3 ಕೋಟಿ ರೂ. ವೆಚ್ಚದಲ್ಲಿ, ತೌಳವ ದ್ರಾವಿಡ ಶೈಲಿಯಲ್ಲಿ, ಸಂಪೂರ್ಣ ಶಿಲಾಮಯವಾಗಿ ಪುನ ರ್ನಿರ್ಮಾಣ ಗೊಂಡಿರುವ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮಬೈದರ್ಕಳ ಗರೋಡಿಯಲ್ಲಿ ಮಂಗಳವಾರ ಬ್ರಹ್ಮಕಲಶೋತ್ಸವದ ಸಮಾರೋಪದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಧಾರ್ಮಿಕತೆಯಲ್ಲಿ ಯುವಶಕ್ತಿ ಕ್ರಿಯಾ ಶೀಲರಾಗಿದ್ದು, ಧರ್ಮದ ಪುನರುತ್ಥಾನಕ್ಕೆ ಯುವ ಶಕ್ತಿ ಎದ್ದು ನಿಲ್ಲಬೇಕು ಎಂದ ಅವರು, ತುಳುನಾಡು ಧರ್ಮಚಾವಡಿ. ಆರಾಧನಾಲಯಗಳ ನಿರ್ಮಾಣದಿಂದ ಕಕ್ಯಪದವು ಭಕ್ತಿಪದವು ಆಗಿದೆ ಎಂದು ಬಣ್ಣಿಸಿದರು.

ಮಾಜಿ ಸಚಿವ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಊರ ಪರವೂರ ಭಕ್ತರ ಸಹಕಾರದಿಂದ ಸುಂದರ, ವಿಶಿಷ್ಠ ಗರೋಡಿ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವ ಯಶಸ್ವಿಯಾಗಿದೆ. ಗ್ರಾಮದ ಅಭಿವೃದ್ಧಿಗೂ ಇದು ಪೂರಕವಾಗಿದೆ ಎಂದರು.

ಹಿಂದೆ ಉದಯವಾಣಿ ಪತ್ರಿಕೆಯಿಂದ ಕುಗ್ರಾಮವೆಂದು ಗುರುತಿಸಲ್ಪಟ್ಟ ಉಳಿ ಗ್ರಾಮ ಇಂದು ಹಂತ ಹಂತವಾಗಿ ಅಭಿವೃದ್ಧಿ ಹೊಂದಿದೆ. ಈ ಭಾಗದ ಶಾಸಕನಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಅಂತೆಯೇ ಗರೋಡಿಯ ಪುನರುತ್ಥಾನ ಕಾರ್ಯ ನಡೆಸಿದ ಸಂತೃಪ್ತಿಯಿದೆ ಎಂದು ಅವರು ಹೇಳಿದರು.

Advertisement

ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ, ರೋಟರಿ ಕ್ಲಬ್‌ ಸಹಾಯಕ ಗವರ್ನರ್‌ ಪ್ರಕಾಶ್‌ ಕಾರಂತ, ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣಕುಮಾರ್‌ ಪೂಂಜ, ಕೇಂದ್ರ ಸಹಕಾರಿ ಬ್ಯಾಂಕ್‌ ನಿರ್ದೇಶಕ ಭಾಸ್ಕರ ಕೋಟ್ಯಾನ್‌, ಜಿ.ಪಂ. ಮಾಜಿ ಸದಸ್ಯ ಕೆ.ಪಿ. ಜಗದೀಶ ಅಧಿಕಾರಿ ಮೂಡುಬಿದಿರೆ, ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್‌ ಡಾ| ಮುರಳಿ ಮೋಹನ್‌ ಚೂಂತಾರು, ಬೆಂಗಳೂರು ಉದ್ಯಮಿ ಉದಯ ಹೆಗ್ಡೆ, ಎಲ್‌ಸಿಆರ್‌ ಇಂಡಿಯನ್‌ ಸ್ಕೂಲ್‌ ಸಂಚಾಲಕ ರೋಹಿನಾಥ ಪಾದೆ, ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಕಿಟ್ಟೆಲ್‌ ಮೆಮೋರಿಯಲ್‌ ಕಾಲೇಜಿನ ಪ್ರಾಂಶುಪಾಲ ವಿಠಲ ಅಬುರ ಉದ್ಯಮಿ ಸಂಜೀವ ಪೂಜಾರಿ ಗುರುಕೃಪಾ, ತಾ.ಪಂ. ಸದಸ್ಯೆ ಬೇಬಿ ಕೃಷ್ಣಪ್ಪ, ಮುಂಬಯಿ ಉದ್ಯಮಿ ನಿತ್ಯಾನಂದ ಪೂಜಾರಿ ಕೆಂತಲೆ, ಆಯುಷ್‌ ವೈದ್ಯಾಧಿಕಾರಿ ಡಾ| ರಾಜೇಶ್‌ ಬಾರ್ದಿಲ, ಉದ್ಯಮಿ ವಾಸುದೇವ ಭಟ್‌ ಕುಂಜತ್ತೋಡಿ, ನಿವೃತ್ತ ಶಿಕ್ಷಕ ಕೃಷ್ಣಪ್ಪ ಪೂಜಾರಿ ಪಟ್ಟದಬೈಲು, ಉಪ್ಪಿನಂಗಡಿ ಸಿ.ಎ. ಬ್ಯಾಂಕ್‌ ವ್ಯವಸ್ಥಾಪಕ ಪುಷ್ಪರಾಜ ಶೆಟ್ಟಿ, ವೆನ್‌ಲಾಕ್‌ ಸರಕಾರಿ ಆಸ್ಪತ್ರೆಯ ಯೂರಾಲಜಿಸ್ಟ್‌ ಡಾ| ಸದಾನಂದ ಪೂಜಾರಿ, ಮೋನಪ್ಪ ಪೂಜಾರಿ ಕಲಾಯಿಗುತ್ತು, ಗುತ್ತಿಗೆದಾರ ರವಿ ಕಕ್ಯಪದವು, ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪಿ. ಜಿನರಾಜ ಆರಿಗ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್‌, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸೇಸಪ್ಪ ಕೋಟ್ಯಾನ್‌, ಕಾರ್ಯಾಧ್ಯಕ್ಷ ಬಿ. ಪದ್ಮಶೇಖರ ಜೈನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮ್ಮಾನ
ಈ ಸಂದರ್ಭದಲ್ಲಿ ಸೇಸಪ್ಪ ಕೋಟ್ಯಾನ್‌, ಕೆ. ಮಾಯಿಲಪ್ಪ ಸಾಲ್ಯಾನ್‌, ಬಿ. ಪದ್ಮಶೇಖರ ಜೈನ್‌, ರೋಹಿನಾಥ ಪಾದೆ, ಸಂಜೀವ ಪೂಜಾರಿ ಗುರುಕೃಪಾ, ಚಂದ್ರಶೇಖರ್‌ ಕಂರ್ಬಡ್ಕ, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ ಮಜಲು, ಶ್ವೇತಾ ವಿಶ್ವನಾಥ್‌, ಹರೀಶ್ಚಂದ್ರ ಕೇರ್ಯ ಅವರನ್ನು ಸಮ್ಮಾನಿಸಲಾಯಿತು.  ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎ. ಚೆನ್ನಪ್ಪ ಸಾಲ್ಯಾನ್‌ ಸ್ವಾಗತಿಸಿದರು. ರಾಜೀವ ಕಕ್ಯಪದವು ಸಮ್ಮಾನಪತ್ರ ವಾಚಿಸಿದರು. ಸಮಿತಿ ಉಪಾಧ್ಯಕ್ಷ ಕೆ. ಮೋನಪ್ಪ ಪೂಜಾರಿ ಕಂಡೆತ್ಯಾರು ವಂದಿಸಿದರು. ಚೇತನ್‌ ಕುಮಾರ್‌ ಶೆಟ್ಟಿ ನಿರೂಪಿಸಿದರು.

ಧರ್ಮಬದ್ಧತೆ
ಹರಿಯುವ ನೀರಿನಂತೆ ಧರ್ಮ ನಿರಂತರ ಚಲನಶೀಲವಾಗಿದ್ದು, ಬದುಕಿನಲ್ಲಿ ಧರ್ಮದ ಅನುಷ್ಠಾನದಿಂದ ಉತ್ತಮ ಫಲಗಳು ಲಭಿಸುತ್ತವೆ. ಧರ್ಮಬದ್ಧತೆ ಇದ್ದರೆ ರಾಷ್ಟ್ರ ಉಳಿಯುತ್ತದೆ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next